Friday, March 6, 2026
Homeಕ್ರೈಮ್ಹಾಸನ: ಮನೆ ಮುಂದೆ 2 ಗಂಟೆಕಾಲ ಲೋಕಾಯುಕ್ತ ಅಧಿಕಾರಿಗಳನ್ನ ಕಾಯಿಸಿದ ಮಹಾನಗರಪಾಲಿಕೆ ಇಂಜಿನಿಯರ್

ಹಾಸನ: ಮನೆ ಮುಂದೆ 2 ಗಂಟೆಕಾಲ ಲೋಕಾಯುಕ್ತ ಅಧಿಕಾರಿಗಳನ್ನ ಕಾಯಿಸಿದ ಮಹಾನಗರಪಾಲಿಕೆ ಇಂಜಿನಿಯರ್

ಹಾಸನ: ಆದಾಯಕ್ಕಿಂತ ಅಧಿಕ ಆಸ್ತಿ ಗಳಿಕೆ ಆರೋಪದಡಿ ಹಾಸನ ನಗರದ ರಕ್ಷಣಾಪುರಂನಲ್ಲಿರುವ ಹಾಸನ ಮಹಾನಗರಪಾಲಿಕೆ ಎಇಇ ಎಂ.ಸಿ ಸತ್ಯನಾರಾಯಣ ಅವರ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಲೋಕಾಯುಕ್ತ ಡಿವೈಎಸ್‌ಪಿ ಸುರೇಶ್‌ ಕುಮಾರ್, ಇನ್ಸ್‌ಪೆಕ್ಟರ್ ಶಿಲ್ಪಾ ನೇತೃತ್ವದಲ್ಲಿ ದಾಳಿ ನಡೆದಿದ್ದು ಬೆಳಗ್ಗೆ 5.15 ಕ್ಕೆ ಸತ್ಯನಾರಾಯಣ ಅವರ ಮನೆಯೊಳಗೆ ಪರಿಶೀಲನೆ‌ ಮಾಡಲು ಲೋಕಾಯುಕ್ತ ಅಧಿಕಾರಿಗಳು ಬಂದು ಕಾಯುತ್ತಿದ್ದಾರೆ. ಲೋಕಾಯುಕ್ತ ಅಧಿಕಾರಿಗಳು ಬರುತ್ತಿದ್ದಂತೆ ಮನೆಯ ಲೈಟ್ ಆಫ್ ಮಾಡಿದ್ದು ಮನೆಯ ಬಾಗಿಲು ತೆರೆಯದ ಸತ್ಯನಾರಾಯಣ ಅಧಿಕಾರಿಗಳನ್ನ ಸತಾಯಿಸಿದ್ದಾರೆ.

ಸತತ 2 ಗಂಟೆಯಿಂದ ಮನೆಯ ಬಾಗಿಲು ತೆಗೆಸಲು ಲೋಕಾಯುಕ್ತ ಅಧಿಕಾರಿಗಳು ಹರಸಾಹಸಡಪಡುತ್ತಿದ್ದಾರೆ. ಬಿಲ್ಡಿಂಗ್ ಹತ್ತಿ ಕಿಟಕಿ ಬಡಿದು, ಕೂಗಿದರು ಸತ್ಯನಾರಾಯಣ ಬಾಗಿಲು ತೆರೆಯುತ್ತಿಲ್ಲ. ಮನೆಯ ಸುತ್ತಲೂ ಓಡಾಡಿ ಬಾಗಿಲು ತೆರಸಲು ಪ್ರಯತ್ನಿಸುತ್ತಿದ್ದು ಸತತ 2 ಗಂಟೆಗೂ ಹೆಚ್ಚು ಕಾಲದಿಂದ ಮನೆಯ ಬಳಿಯೇ ಬೀಡುಬಿಟ್ಟಿದ್ದಾರೆ‌. ಸತ್ಯನಾರಾಯಣ ಫೋನ್ ಕೂಡ ಸ್ವಿಚ್‌ ಆಫ್‌ ಮಾಡಿದ್ದಾರೆ.

 ಅಧಿಕಾರಿಗಳನ್ನು ದೀರ್ಘ ಕಾಲ ಕಾಯಿಸಿದ ಬಳಿಕ ಅಂತಿಮವಾಗಿ ಮನೆಯ ಡೋರ್​​ ಓಪನ್​​ ಮಾಡಲಾಗಿದ್ದು, ಮನೆಯೊಳಗೆ ಎಂಟ್ರೀ ಕೊಟ್ಟಿರುವ ಲೋಕಾಯುಕ್ತ ಟೀಂ ಆಸ್ತಿ ದಾಖಲೆಗಳು, ಆದಾಯ ಮತ್ತು ಸಂಪಾದಿಸಿದ ಆಸ್ತಿಗಳ ಪರಿಶೀಲನೆ ನಡೆಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!