ಹಾಸನ: ಹತ್ತಾರು ವರ್ಷಗಳಿಂದ ಹಾಸನದ ಕಟ್ಟಿನಕೆರೆ ಮಾರ್ಕೆಟ್ ನಲ್ಲಿ ವ್ಯಾಪಾರ ನಡೆಸುತ್ತಿರುವ ವರ್ತಕರು ಈ ವೇಳೆ ಶಾಸಕರಾದ ಪ್ರೀತಮ್ ಗೌಡ ಇಲ್ಲಿಗೆ ಭೇಟಿ ನೀಡಿ ವರ್ತಕರಿಗೆ ಅಭಯ ಹಸ್ತ ಚಾಚಿದರು.
ಹೌದು .. ಇ – ಟೆಂಡರ್ ಪ್ರಕ್ರಿಯೆಯಲ್ಲಿ ಹಾಲಿ ಇರುವ ವರ್ತಕರಿಗಷ್ಟೇ ಅವಕಾಶ ಇದ್ದಿದ್ದು ಹೊರಗಿನವರಿಗೆ ಯಾವುದೇ ಕಾರಣಕ್ಕೂ ಅವಕಾಶ ನೀಡಲ್ಲ ಎಂದು ವರ್ತಕರುಗೆ ಪ್ರೀತಮ್ ಗೌಡ ಭರವಸೆ ಮೂಡಿಸಿದರು.
ಹಾಗೆ ವರ್ತಕರ ಹಿತ ಕಾಪಾಡಲು ಬದ್ದ ನಾನು ಇಲ್ಲಿ ರಾಜಕಾರಣ ಮಾಡಲು ಬಂದಿಲ್ಲ, ವರ್ತಕರ ಪರವಾಗಿ ಎಂಪಿ, ಎಂ.ಎಲ್ ಎ ಹಾಗೂ ಎಂಎಲ್ಸಿ ಜೊತೆಗೆ ಮಾತನಾಡಲು ಸಿದ್ದನಿದ್ದೇನೆ. ಹಾಲಿ ಇರುವ 487 ವರ್ತಕರಷ್ಟೇ ಟೆಂಡರ್ ನಲ್ಲಿ ಭಾಗವಹಿಸಬೇಕು ಹೊರಗಿನವರಿಗೆ ಅವಕಾಶ ಇಲ್ಲವೇ ಇಲ್ಲ ಎಂದು ಖಡಕ್ ಮಾತುಗಳನ್ನಾಡಿದರು.
ಅದೇ ರೀತಿ ಕೇಂದ್ರ ಸರ್ಕಾರದಿಂದ GST ಇಳಿಕೆ ಹಿನ್ನೆಲೆಯಲ್ಲಿ ವರ್ತಕರು ಹಾಗೂ ಗ್ರಾಹಕರಿಗೆ ಸಿಹಿ ತಿನ್ನಿಸಿ ಸಂಭ್ರಮಾಚರಣೆ ನಡೆಸಿದ ಬಿಜೆಪಿ ನಾಯಕರು.
ಈ ವೇಳೆ ಶಾಸಕ ಸಿಮೆಂಟ್ ಮಂಜು, ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದೇಶ್ ನಾಗೇಂದ್ರ ಉಪಸ್ಥಿತರಿದ್ದರು.
