Tuesday, February 10, 2026
Homeಕ್ರೈಮ್ಹಾಸನ: ಚೆಕ್ಕಿಂಗ್ ನಡೆಸುವ ವೇಳೆ ಟ್ಯಾಂಕರ್ ಡಿಕ್ಕಿ: KSRTC ತಪಾಸಣಾ ಅಧಿಕಾರಿ ಸಾವು

ಹಾಸನ: ಚೆಕ್ಕಿಂಗ್ ನಡೆಸುವ ವೇಳೆ ಟ್ಯಾಂಕರ್ ಡಿಕ್ಕಿ: KSRTC ತಪಾಸಣಾ ಅಧಿಕಾರಿ ಸಾವು

ಹಾಸನ: ಆಲೂರು ತಾಲ್ಲೂಕಿನ ಪಾಳ್ಯ ಹೋಬಳಿ ಸಮೀಪ ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ನಡೆದ ಭೀಕರ ಅಪಘಾತದಲ್ಲಿ KSRTC ಟಿಕೆಟ್ ತಪಾಸಣಾ ಇನ್ಸ್ಪೆಕ್ಟರ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಹಾಸನ ವಿಭಾಗೀಯ ತನಿಖಾ ಸಂಚಾರ ನಿಯಂತ್ರಕ ದಳದ ತಪಾಸಣಾ ಇನ್ಸ್ಪೆಕ್ಟರ್ ಶಕುನಿಗೌಡ (57) ಮೃತ ಅಧಿಕಾರಿ ನಲ್ಲೂರು -ಮಗ್ಗೆ ಮಾರ್ಗದಲ್ಲಿ ಸಂಚಾರಿಸುತ್ತಿದ್ದ ರಾಜ್ಯ ಸಾರಿಗೆ ಬಸ್ ನ್ನು ತಡೆದು ಪ್ರಯಣಿಕರ ಟಿಕೆಟ್ ಪರಿಶೀಲನೆ ನಡೆಸುವ ಉದ್ದೇಶದಿಂದ ಅವರು ರಸ್ತೆ ದಾಟುತ್ತಿದ್ದ ವೇಳೆ ವೇಗವಾಗಿ ಬಂದ ಕ್ಯಾಂಟರ್ ವಾಹನ ಡಿಕ್ಕಿ ಹೊಡೆದಿದೆ. ಡಿಕ್ಕಿಯ ತೀವ್ರತೆಗೆ ಶಕುನಿಗೌಡ ರವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಅಪಘಾ*ತದ ನಂತರ ಕ್ಯಾಂಟರ್ ಚಾಲಕ ವಾಹನ ಸಮೇತ ಪರಾರಿಯಾಗಿದ್ದಾನೆ. ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಈ ಸಂಬಂಧ ಆಲೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು ಪರಾರಿಯಾದ ಚಾಲಕನ ಪತ್ತೆಗೆ ತನಿಖೆ ಮುಂದುವರೆದಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!