Tuesday, August 5, 2025
!-- afp header code starts here -->
Homeಜಿಲ್ಲಾಸುದ್ದಿಹಾಸನ: ಸಾರಿಗೆ ಮುಷ್ಕರ: KSRTC ಬಸ್‌ ನಿಲ್ದಾಣ ಖಾಲಿ ಖಾಲಿ

ಹಾಸನ: ಸಾರಿಗೆ ಮುಷ್ಕರ: KSRTC ಬಸ್‌ ನಿಲ್ದಾಣ ಖಾಲಿ ಖಾಲಿ

ಹಾಸನ: ನಾನಾ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಹಾಸನದಲ್ಲೂ ಸಾರಿಗೆ ನೌಕರರು ಮುಷ್ಕರಕ್ಕಿಳಿದಿದ್ದು ಕೆಎಸ್‌ ಆರ್‌ ಟಿಸಿ ಬಸ್‌ ನಿಲ್ದಾಣ ಖಾಲಿ ಖಾಲಿ ಆಗಿದ್ದು ಸಾರಿಗೆ ಸೌಲಭ್ಯವಿಲ್ಲದೇ ಪ್ರಯಾಣಿಕರು ಪರದಾಡುವಂತ ಸ್ಥಿತಿ ನಿರ್ಮಾಣವಾಗಿದೆ.

ಬೆಳಗ್ಗೆ 6 ಗಂಟೆಯಿಂದಲೇ ಬಸ್‌ಗಳು ರಸ್ತೆಗಿಳಿಯದೇ ಪ್ರಯಾಣಿಕರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಕೆಲಸಕ್ಕೆ ತೆರಳುವವರು ಬಸ್‌ ನಿಲ್ದಾಣದಲ್ಲೇ ಕಾದು ಕುಳಿತಿದ್ದಾರೆ. ಕೆಎಸ್‌ಆರ್‌ಟಿಸಿ ಘಟಕ-1 ಹಾಗೂ ಘಟಕ-2 ರಲ್ಲಿ 230 ಬಸ್‌ಗಳು ನಿಂತಿವೆ. ಅತ್ತ ಪ್ರಯಾಣಿಕರಿಗೆ ಹೊರೆ ತಪ್ಪಿಸಲು ಮುಂದಾಗಿರುವ ಖಾಸಗಿ ಬಸ್‌ಗಳು ನಿಲ್ದಾಣದ ಮುಂಭಾಗದಲೇ ನಿಂತಿವೆ.

ಹಾಸನ ಸಿಟಿ ಬಸ್‌ ನಿಲ್ದಾಣವೂ ಖಾಲಿ ಖಾಲಿ ಆಗಿದ್ದು ಬೆಳಗ್ಗೆ 5 ಗಂಟೆಗೆ ಬರುತ್ತಿದ್ದ ಬಸ್‌ ಗಳು ಇಂದು ಒಂದೂ ಕೂಡ ಈ ಕಡೆ ಮುಖ ಹಾಕಿಲ್ಲ. ಹಾಸನ ನಗರ ಹಾಗೂ ಗ್ರಾಮೀಣ ಭಾಗದವರಿಗೆ ಸಂಕಷ್ಟ ಎದುರಾಗಿದ್ದು ನಿತ್ಯ 250ಕ್ಕೂ ಅಧಿಕ ಬಸ್‌ ಗಳಲ್ಲಿ ಸಂಚಾರ ಹಾಗೂ 700 ಟ್ರಿಪ್‌ ಹೊಡೆಯುತ್ತಿದ್ದವರು ಆದರೆ ಇಂದು ಸಿಟಿ ಬಸ್‌ ಸೇವೆ ಸಂಪೂಎಣವಾಗಿ ಸ್ಥಗಿತಗೊಂಡಿದೆ.

ಸಾರಿಗೆ ಬಸ್‌ ಮುಷ್ಕರ ಹಿನ್ನೆಲೆಯಲ್ಲಿ ಸಾರಿಗೆ ಬದಲು ಖಾಸಗಿ ವಾಹನಗಳ ವ್ಯವಸ್ಥೆ ಮಾಡಿದ್ದು ಹಾಸನ ಜಿಲ್ಲಾಡಳಿತ ಸೂಚನೆ ಮೇರೆಗೆ ರಸ್ತೆಗಿಳಿದಿರುವ ಖಾಸಗಿ ವಾಹನಗಳು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!