ಹಾಸನ: ಮನೆಯಲ್ಲಿಯೇ ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆಯಾಗಿರುವ ಘಟನೆ ಚನ್ನರಾಯಪಟ್ಟಣ ತಾಲೂಕಿನ ಅಂಕನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಚಂದ್ರಕಲಾ (27) ಮೃತ ಗೃಹಿಣಿಯಾಗಿದ್ದು , ವರದಕ್ಷಿಣೆ ಹಣಕ್ಕಾಗಿ ಪತಿಯಿಂದ ಪತ್ನಿಯನ್ನು ಕೊಲೆಗೈದು ನೇಣು ಹಾಕಲಾಗಿದೆ ಎಂದು ಮೃತ ಚಂದ್ರಕಲಾ ಪೋಷಕರು ಆರೋಪಿಸಿದ್ದಾರೆ.

ಮಂಡ್ಯ ಜಿಲ್ಲೆ ಕೆ ಆರ್ ಪೇಟೆ ತಾಲೂಕು ಹೆಗ್ಗಡಹಳ್ಳಿ ಗ್ರಾಮದ ಚಂದ್ರಕಲಾ ಅವರನ್ನು ಏಳು ವರ್ಷಗಳ ಹಿಂದೆ ಅಂಕನಹಳ್ಳಿ ಗ್ರಾಮದ ಆನಂದ್ ಗೆ ವಿವಾಹ ಮಾಡಿಕೊಡಲಾಗಿತ್ತು
ಸಾಕಷ್ಟು ಸಾಲ ಮಾಡಿಕೊಂಡಿದ್ದ ಆನಂದ್ ವರದಕ್ಷಿಣೆ ಹಣ ತರುವಂತೆ ಪದೇ ಪದೇ ಪತ್ನಿಯನ್ನು ಪೀಡಿಸುತ್ತಿದ್ದು ಇದೇ ವಿಚಾರಕ್ಕೆ ಇಬ್ಬರ ನಡುವೆಯೂ ಹಲವು ಜಗಳ ನಡೆಯುತ್ತಿದ್ದು ಕೆಲವೊಂದು ಬಾರಿ ಚಂದ್ರಕಲಾ ಮೇಲೆ ಹಲ್ಲೆ ನಡೆಸುತ್ತಿದ್ದ ಎನ್ನಲಾಗಿದೆ, ಹಾಗೆ ಇದೇ ಶನಿವಾರ ರಾತ್ರಿ ಕೂಡ ಪತ್ನಿ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿ ನೇಣು ಹಾಕಿ ಪರಾರಿಯಾಗಿದ್ದಾನೆ ಎಂದು ಮೃತ ಮಹಿಳೆಯ ಕುಟುಂಬಸ್ಥರ ಆರೋಪಿಸಿದ್ದಾರೆ.
ಆನಂದ್ ಮನೆಗೆ ಬರುವವರೆಗೂ ನಾವು ಶವವನ್ನು ಮೇಲೆಕ್ಕೆತ್ತಲು ಬಿಡಿವುದಿಲ್ಲವೆಂದು ಮೃತ ಪೋಷಕರು ಪಟ್ಟು ಹಿಡಿದಿದ್ದು, ಕೆಲವರು ಆನಂದ್ ಮನೆಗೆ ನುಗ್ಗಿ ಗಲಾಟೆ ಮಾಡಲು ಸಹ ಯತ್ನಿಸಿದ್ದಾರೆ. ಈ ವೇಳೆ ಪೊಲೀಸರು ಹರಸಾಹಸ ಪಟ್ಟು ಪರಿಸ್ಥಿತಿಯನ್ನು ನಿಭಾಯಿಸಿದ್ದಾರೆ.
ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು ಸ್ಥಳಕ್ಕೆ ಎ ಎಸ್ ಪಿ ತಮ್ಮಯ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂಬಂಧ ಶ್ರವಣಬೆಳಗೊಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.