Wednesday, February 11, 2026
Homeಜಿಲ್ಲಾಸುದ್ದಿಹಾಸನಾಂಬ ಜಾತ್ರಾ ಮಹೋತ್ಸವ : ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ

ಹಾಸನಾಂಬ ಜಾತ್ರಾ ಮಹೋತ್ಸವ : ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ

ಹಾಸನ : ನಗರದ ಶ್ರೀ ಹಾಸನಾಂಬ ದೇವಿ ದರ್ಶನ ಮತ್ತು ಶ್ರೀ ಸಿದ್ದೇಶ್ವರ ಸ್ವಾಮಿ ಜಾತ್ರಾ ಮಹೋತ್ಸವವನ್ನು ಪ್ರತಿ ವರ್ಷ ಅತ್ಯಂತ ವಿಜೃಂಭಣೆಯಿಂದ ಆಯೋಜಿಸಲಾಗುತ್ತಿದ್ದು, ಸದರಿ ಜಾತ್ರಾ ಮಹೋತ್ಸವಕ್ಕೆ ಬೇರೆ ಬೇರೆ ರಾಜ್ಯ, ಜಿಲ್ಲೆಗಳಿಂದ ಭಕ್ತರು ಅಪಾರ ಸಂಖ್ಯೆಯಲ್ಲಿ ಭಾಗವಹಿಸುತ್ತಾರೆ.

ಈ ನಿಟ್ಟಿನಲ್ಲಿ ಜಿಲ್ಲಾಡಳಿತ, ಹಾಸನ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯೊಂದಿಗೆ 2025ನೇ ಸಾಲಿನ ಶ್ರೀ ಹಾಸನಾಂಬ ದೇವಿ ದರ್ಶನ ಮತ್ತು ಶ್ರೀ ಸಿದ್ದೇಶ್ವರ ಸ್ವಾಮಿ ಜಾತ್ರಾ ಮಹೋತ್ಸವದ ಅಂಗವಾಗಿ ಅ.09 ರಿಂದ ಅ.21 ರವರೆಗೆ ಈ ಕೆಳಕಾಣಿಸಿದ ವೇದಿಕೆಗಳಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಅ.09 ರಂದು ಜಾನಪದ ಜಾತ್ರೆ ಸಂಜೆ 6.30 ಹೇಮಾವತಿ ಪ್ರತಿಮೆ ಎದುರು, ಅ.10 ರಿಂದ ಅ.21 ರವರೆಗೆ ದೇವಸ್ಥಾನದ ಹತ್ತಿರ ಹಾಸನಾಂಬ ವೇದಿಕೆ (ಲೈವ್ ಕನ್ಸರ್ಟ್) ಬೆಳಗ್ಗೆ 5.30 ರಿಂದ 7.30 ರವರೆಗೆ, ಬೆಳಗ್ಗೆ 10 ರಿಂದ 1 ರವರೆಗೆ, ಸಂಜೆ 7.30 ರಿಂದ 10 ರವರೆಗೆ, ದೇವಿಗೆರೆ ವೃತ್ತದ ಬಳಿ ಸುಭಾಷ್ ಚೌಕ (ಹೇಮಾವತಿ) ಬೆ.6.30 ರಿಂದ 9.30 ರವೆಗೆ, ಸಿಲ್ವರ್ ಜುಬ್ಲಿ ಪಾರ್ಕ್ ನಲ್ಲಿ ಸಂಜೆ 7 ರಿಂದ ರಿಂದ 9 ರವರೆಗೆ. ಸದರಿ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!