ಪಬ್ಲಿಕ್ ಇಂಪ್ಯಾಕ್ಟ್ ಬೆಂಗಳೂರು : ಕನ್ನಡತಿ, ಪುಟ್ಟಗೌರಿ ಧಾರಾವಾಹಿ ಮೂಲಕ ಕನ್ನಡಿಗರ ಮನೆಮಾತಾಗಿರುವ ನಟಿ ರಂಜನಿ ರಾಘವನ್. ಸೋಷಿಯಲ್ ಮೀಡಿಯಾದಲ್ಲೂ ಸಕ್ರಿಯವಾಗಿರುವ ನಟಿ. ಆಗಾಗ್ಗೆ ತಮ್ಮ ಫೋಟೋ, ಇನ್ನಿತರೆ ಪೋಸ್ಟ್‌ಗಳನ್ನ ಹಾಕುತ್ತಲೇ ಇರ್ತಾರೆ. ಸದಕ್ಕೆ ಪೋಸ್ಟ್ ಮಾಡಿರುವ ಒಂದು ಫೋಟೋ ಅಚ್ಚರಿಯ ಜತೆಗೆ ಸಾಕಷ್ಟು ಸುದ್ದಿಯಾಗೋದಕ್ಕೂ ಕಾರಣವಾಗಿದೆ.
ಅಷ್ಟಕ್ಕೂ ಅವರು ಹಂಚಿಕೊಂಡಿರುವ ಫೋಟೋ ಅವರ ಮನದಿನಿಯನದ್ದು..! ಹೌದು, ತಾನು ವಿವಾಹವಾಗಲಿರುವ ಲಕ್ಕಿ ಬಾಯ್ ಯಾರು ಅನ್ನೋದನ್ನ ತಮ್ಮಿಬ್ಬರ ಫೋಟೋ ಮೂಲಕ ಬಹಿರಂಗಪಡಿಸಿದ್ದಾರೆ. ‘Objects in the mirror are closer than they appear’ ಅಂತ ತಾವಿಬ್ಬರು ತೆಗೆದುಕೊಂಡಿರುವ ಮಿರರ್ ಪಿಕ್‌ಗೆ ಟೈಟಲ್ ಹಾಕೊಂಡಿದ್ದಾರೆ. ನನ್ಹುಡ್ಗ ಅಂತ ಬರೆದುಕೊಂಡಿರುವ ರಂಜನಿ, ಆತನ ಹೆಸರನ್ನೂ ಬಹಿರಂಗಪಡಿಸಿದ್ದಾರೆ. ಅಂದ ಹಾಗೆ ಫೋಟೋದಲ್ಲಿರುವ ಆ ವ್ಯಕ್ತಿ ಸಾಗರ್ ಭಾರದ್ವಾಜ್. ಸಾಗರ್‌ನನ್ನು ರಂಜನಿ ವಿವಾಹವಾಗಲಿದ್ದು, ಯಾವಾಗ ಅನ್ನೋದನ್ನು ಅವರು ಹೇಳಿಕೊಂಡಿಲ್ಲ. ಅಥ್ಲೀಟ್ ಆಗಿರುವ ಸಾಗರ್ ರಂಜನಿ ಅವರೊಂದಿಗೆ ಹಲವು ವರ್ಷಗಳ ಸ್ನೇಹ ಹೊದಿದ್ದಾರೆ.










