ಮೂಡಿಗೆರೆ: ಮಲೆನಾಡಿನಲ್ಲಿ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದ ಜನಜೀವನ ಅಸ್ತವ್ಯಸ್ತವಾಗಿದ್ದು ಮೂಡಿಗೆರೆ ಪಟ್ಟಣದದಲ್ಲಿ ಚೌಡೇಶ್ವರಿ ದೇವಸ್ಥಾನದ ಮುಂಭಾಗದಲ್ಲಿ ನಿರ್ಮಿಸಲಾಗಿದ್ದ ತಡೆಗೋಡೆ ಕುಸಿದು ಬೃಹತ್ ಹಾನಿ ಉಂಟು ಮಾಡಿದೆ.
ಕುರುಕುಮಕ್ಕಿ ಶ್ರೀ ಚೌಡೇಶ್ವರಿ ದೇವಾಸ್ಥಾನ ಎದುರಿರುವ ತಡೆಗೋಡೆ ಕುಸಿತದಿಂದ ಆತಂಕ ಉಂಟುಮಾಡಿದ್ದು. ಮಳೆ ಇನ್ನಷ್ಟು ಮುಂದುವರಿದರೆ ದೇವಸ್ಥಾನಕ್ಕೆ ಅಪಾಯವಿದೆ ಎಂದು ಅಲ್ಲಿನ ಸ್ಥಳೀಯರು ಆತಂಕ ಪಟ್ಟಿದ್ದಾರೆ.
ಹಾಗೆ ಕಳೆದ ಕೆಲ ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯ ಪರಿಣಾಮವಾಗಿ ಅಲ್ಲಿನ ಜನರ ಪರಿಸ್ಥಿತಿ ಹೀನಾಯವಾಗಿದ್ದು ಯಾವುದೇ ಕೆಲಸ ಕಾರ್ಯ ಮಾಡಲಾಗದೆ ಮನೆಯಲ್ಲೇ ಕುಳಿತುಕೊಳ್ಳುವ ಪರಿಸ್ಥಿತಿ ಒದಗಿಬಂದಿದೆ,