ಚಿಕ್ಕಮಗಳೂರು/ ಶೃಂಗೇರಿ: ಶಾರದಾಂಬೆ ತವರೂರಾದ ಶೃಂಗೇರಿಯಲ್ಲಿ ಸೋಮವಾರ ಅಂದ್ರೆ ಜುಲೈ 7ರಂದು ನೂರ್ ಬೆಡ್ ಆಸ್ಪತ್ರೆಗೆ ಶಂಕುಸ್ಥಾಪನೆ ಕಾರ್ಯಕ್ರಮ ಕೈಗೊಳ್ಳಲಾಗಿತ್ತು ಆದರೆ ಮಲೆನಾಡು ಭಾಗದಲ್ಲಿ ಅತಿಯಾದ ಮಳೆಯ ಬರುತ್ತಿರುವ ಹಿನ್ನೆಲೆಯಲ್ಲಿ ಶಂಕುಸ್ಥಾಪನೆ ಕಾರ್ಯಕ್ರಮವನ್ನು ಮುಂದೂಡಲ್ಪಟ್ಟಿದೆ.

ಹೌದು .. ಈ ಆಸ್ಪತ್ರೆ ಶಂಕುಸ್ಥಾಪನೆಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಆಗಮಿಸುವವರಿದ್ದರು, ಆದರೆ ಶೃಂಗೇರಿ ಭಾಗದಲ್ಲಿ ಹಾಗೂ ಸುತ್ತಾಮುತ್ತಾ ಅತಿಯಾದ ಮಳೆ ಸುರಿಯುತ್ತಿರುವ ಕಾರಣದಿಂದ ಸಚಿವರ ಸೂಚನೆ ಮೇರೆಗೆ ಕಾರ್ಯಕ್ರಮವನ್ನು ಮುಂದೂಡಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.
