ಚಿಕ್ಕಮಗಳೂರು: ಜಿಲ್ಲೆಯಲ್ಲಿ ರಣಮಳೆಯ ಆರ್ಭಟ ನಿಲ್ಲುವ ಸೂಚನೆಯೇ ಕಾಣಿಸ್ತಿಲ್ಲ. ವರುಣನ ಅಬ್ಬರಕ್ಕೆ ಜನ ಅಕ್ಷರಶಃ ತತ್ತರಿಸಿ ಹೋಗಿದ್ದಾರೆ. ಬಿಡುವು ಕೊಡದೇ ಸುರಿಯುತ್ತಿರುವ ಭಾರೀ ಮಳೆಯಿಂದ ಹಲವೆಡೆ ಸಾಕಷ್ಟು ಸಮಸ್ಯೆ ಉಂಟಾಗಿದೆ.

ಇನ್ನು ಭಾರೀ ಮಳೆ ಆಗ್ತಿರೋ ಹಿನ್ನೆಲೆಯಲ್ಲಿ ಭದ್ರಾ ನದಿ ಅಪಾಯಮಟ್ಟವನ್ನ ಮೀರಿ ಹರಿಯುತ್ತಿದೆ. ಹೀಗಾಗಿ ಕಳಸದಲ್ಲಿರೋ ಹೆಬ್ಬಾಳೆ ಸೇತುವೆಯ ಮೇಲೆ 2ರಿಂದ 3 ಅಡಿ ನೀರು ಹರಿಯುತ್ತಿದೆ. ಈ ಸೇತುವೆಯನ್ನ ದಾಟಲು ಹೋದ ಹಸುವೊಂದು ನೋಡ ನೋಡ್ತಿದ್ದಂತೆ ಕೊಚ್ಚಿಕೊಂಡು ಹೋಗಿದೆ. ಈ ದೃಶ್ಯವನ್ನ ಸ್ಥಳೀಯರೊಬ್ಬರು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ. ತಮ್ಮ ಕಣ್ಣೆದುರೇ ಭದ್ರೆಯ ಒಡಲಲ್ಲಿ ಕೊಚ್ಚಿಕೊಂಡು ಹೋದ ಹಸುವನ್ನ ನೋಡಿ ಜನರು ಮಮ್ಮುಲ ಮರುಗಿದ್ದಾರೆ.