Monday, February 16, 2026
Homeಜಿಲ್ಲಾಸುದ್ದಿಸಕಲೇಶಪುರದಲ್ಲಿ ಛಾಯಾಗ್ರಾಹಕರಿಂದ ಮಾನವೀಯ ಸೇವೆ

ಸಕಲೇಶಪುರದಲ್ಲಿ ಛಾಯಾಗ್ರಾಹಕರಿಂದ ಮಾನವೀಯ ಸೇವೆ

ಸಕಲೇಶಪುರ : ವಿಶ್ವ ಛಾಯಾಗ್ರಾಹಕರ ದಿನದ ಪ್ರಯುಕ್ತ ಸಕಲೇಶಪುರ ತಾಲೂಕು ವೃತ್ತಿನಿರತ ಛಾಯಾಗ್ರಹಕರ ಸಂಘ (ರಿ) ವತಿಯಿಂದ ಮಾನವೀಯ ಸೇವೆಯ ಉದಾತ್ತ ಕಾರ್ಯ ನಡೆದಿದೆ. ಕ್ರಾಫರ್ಡ್ ಆಸ್ಪತ್ರೆಯ ಒಳರೋಗಿಗಳಿಗೆ ಹಣ್ಣು ಹಂಪಲುಗಳನ್ನು ವಿತರಿಸುವ ಮೂಲಕ ಛಾಯಾಗ್ರಾಹಕರು ದಿನದ ಮಹತ್ವವನ್ನು ಅರ್ಥಪೂರ್ಣವಾಗಿ ಆಚರಿಸಿದರು.

ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ವಿನು ಹಲಸುಲಿಗೆ, ಉಪಾಧ್ಯಕ್ಷ ನಾಗೇಶ್, ಕಾರ್ಯದರ್ಶಿ ರಘು, ಖಜಾಂಚಿ ಸಾಧಿಕ್ ಸೇರಿದಂತೆ ಮಧು, ಜಾನೆಕೆರೆ ಪರಮೇಶ್, ಅರೆಕೆರೆ ಪ್ರಕಾಶ್, ಶ್ರೀನಿವಾಸ್, ಹೆತ್ತೂರು ಮಧು, ವಸಂತ್ ಕುಮಾರ್, ರವಿರಾಜ್, ಬ್ಯಾಕರವಳ್ಳಿ ಚಂದ್ರು, ರಾಜು, ಸುನಿಲ್, ಪ್ರದೀಪ್, ಜಶ್ವಂತ್, ಸುದೀಶ್, ಹರ್ಷ, ಬೈಕೆರೆ ನಾಗೇಶ್, ಕೃಷ್ಣ ಮತ್ತಿತರರು ಭಾಗವಹಿಸಿದ್ದರು.

ಆಸ್ಪತ್ರೆಯ ಒಳರೋಗಿಗಳಿಗೆ ಹಣ್ಣು ಹಂಪಲು ಹಂಚುವ ಮೂಲಕ ರೋಗಿಗಳ ಮನೋಬಲವನ್ನು ಹೆಚ್ಚಿಸುವುದು ಹಾಗೂ ಸಮಾಜಮುಖಿ ಚಟುವಟಿಕೆಯಲ್ಲಿ ತೊಡಗುವ ಮೂಲಕ ಛಾಯಾಗ್ರಾಹಕರು ತಮ್ಮ ಸಾಮಾಜಿಕ ಜವಾಬ್ದಾರಿಯನ್ನು ತೋರಿಸಿದ್ದಾರೆ ಎಂದು ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಮುಖಂಡರು ಅಭಿಪ್ರಾಯ ಪಟ್ಟರು.

ವಿಶ್ವ ಛಾಯಾಗ್ರಾಹಕರ ದಿನವನ್ನು ಕೇವಲ ಆಚರಣೆ ಮಾಡುವುದಲ್ಲದೆ, ಅದನ್ನು ಸಮಾಜಮುಖಿ ಕಾರ್ಯಗಳ ಮೂಲಕ ಅರ್ಥಪೂರ್ಣಗೊಳಿಸಿದ ಸಕಲೇಶಪುರ ಛಾಯಾಗ್ರಾಹಕರ ಈ ಸೇವಾ ಕಾರ್ಯ ಸ್ಥಳೀಯರಿಂದ ಮೆಚ್ಚುಗೆಗೆ ಪಾತ್ರವಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!