ಮಂಡ್ಯ (26). ಮಂಡ್ಯ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಕುಮಾರಸ್ವಾಮಿ ಅವರಿಗೆ ,ಸಂಸದೆ ಸುಮಲತಾ ಅಂಬರೀಶ್ ಸಪೋರ್ಟ್ ಮಾಡುತ್ತಿಲ್ಲ ಎಂಬ ಮಾಜಿ ಪ್ರಧಾನಿ ಎಚ್ .ಡಿ. ದೇವೇಗೌಡರ ಹೇಳಿಕೆ ಹಾಗೂ ಪ್ರಚಾರಕ್ಕೆ ನನಗೆ ಕರೆದಿಲ್ಲ ಅನ್ನೋ ಸುಮಲತಾ ಅವರ ಹೇಳಿಕೆ ಕುರಿತು ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದರು. ನಾವೆಲ್ಲ ಸುಮಲತಾ ಅಂಬರೀಷ್ ಅವರ ಮನೆ ಬಾಗಿಲಿಗೆ ಹೋಗಿ ಸಹಕಾರ ಕೇಳಿದ್ದೆವು. ಇದಕ್ಕಿಂತ ಹೆಚ್ಚು ಇನ್ನೇನು ಮಾಡಬೇಕು.ಆದರೂ ಅವರು ಪ್ರಚಾರಕ್ಕೆ ಬರಲಿಲ್ಲ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ .
ಮದ್ದೂರು ತಾಲೂಕಿನ ಕೆ. ಹೊನ್ನಲಗೆರೆ ಗ್ರಾಮದಲ್ಲಿ ಮತದಾನ ಮಾಡಿದ ನಂತರ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ದೇವೇಗೌಡರು ಯಾಕೆ ಈ ರೀತಿ ಹೇಳಿದ್ದಾರೆ ಅಂತ ನನಗೆ ಮಾಹಿತಿ ಇಲ್ಲ .ಅವರಿಗೆ ಮಾಹಿತಿ ಕೊರತೆ ಆಗಿರಬೇಕು, ಅದಕ್ಕೆ ಈ ರೀತಿ ಹೇಳಿದ್ದಾರೆ ಅಂತ ಹೇಳಿದ್ರು. ನನಗೋಸ್ಕರ ಎಲ್ಲರೂ ಪಕ್ಷ ಭೇದ ಮರೆತು ಕೆಲಸ ಮಾಡುತ್ತಿದ್ದಾರೆ. ಯಾರು ಕೂಡ ವಿರೋಧ ಮಾಡಿಲ್ಲ. ಅಂಬರೀಷ್ ಅಭಿಮಾನಿಗಳು ಕೂಡ ನನಗೆ ಸಹಾಯ ಮಾಡುತ್ತಿದ್ದಾರೆಂದು ಹೇಳಿದರು.
ಪ್ರಧಾನಿ ಮೋದಿಯವರ ಮೈಸೂರಿನ ಕಾರ್ಯಕ್ರಮದಲ್ಲಿ ಸುಮಲತಾ ಅವರನ್ನು ಎರಡು ದಿನ ಆದ್ರೂ ಪ್ರಚಾರಕ್ಕೆ ಬನ್ನಿ ಅಂತ ಕೇಳಿಕೊ೦ಡಿದ್ದೆ. ಆದರೂ ಅವರು ಯಾಕೆ ಬರಲಿಲ್ಲ ನನಗೆ ಗೊತ್ತಿಲ್ಲ. ಇವತ್ತು ಬೆಂಗಳೂರಿನಿಂದ ಬಂದು ಸುಮಲತಾ ಅವರು ನನಗೆ ಮತ ಹಾಕಿದ್ದಾರೆ. ಹೀಗಾಗಿ ನಾನು ರಾಜ್ಯದಲ್ಲೇ ಅತ್ಯಂತ ಬಹುಮತಗಳಿಂದ ಗೆಲ್ಲಲಿದ್ದೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.