ಚಿಕ್ಕಮಗಳೂರು : ರಾಜ್ಯ ಸರ್ಕಾರ ಹಾಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ದೇಶದಲ್ಲೇ ಮೊದಲ ಬಾರಿಗೆ ಬೀದಿ ನಾಯಿಗಳಿಗೆ ಬಿರಿಯಾನಿ ನೀಡುವುದರ ಬಗ್ಗೆ ಭಾರೀ ಚರ್ಚೆಗೆ ಗ್ರಾಸವಾಗಿತ್ತು ಆದರೆ, ಕಾಫಿನಾಡು ಚಿಕ್ಕಮಗಳೂರಿನ ನಾಯಿಗಳಿಗೆ ಉಪವಾಸ ಭಾಗ್ಯವನ್ನು ಚಿಕ್ಕಮಗಳೂರು ನಗರಸಭೆ ನೀಡಿದೆ.

ಹೌದು, ಚಿಕ್ಕಮಗಳೂರು ನಗರದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಇದರಿಂದ ಜನರ ಮೇಲೆ ದಾಳಿ ಸಂಖ್ಯೆ ಹೆಚ್ಚಾಗಿದೆ. ಮನೆಯಲ್ಲಿ ಉಳಿದ ಆಹಾರವನ್ನ ಬೀದಿ ನಾಯಿಗಳಿಗೆ ಹಾಕುವಂತಿಲ್ಲ. ಒಂದು ವೇಳೆ ಬೀದಿ ನಾಯಿಗಳಿಗೆ ಆಹಾರ ಹಾಕುವುದು ಕಂಡು ಬಂದರೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಚಿಕ್ಕಮಗಳೂರು ನಗರಸಭೆಯಿಂದ ಅಧಿಕೃತ ಪ್ರಕಟಣೆ ಹೊರಡಿಸಿದೆ.
ಎರಡು ದಿನದ ಹಿಂದಷ್ಟೇ ಚಿಕ್ಕಮಗಳುರು ನಗರ ಸಭಾ ವ್ಯಾಪ್ತಿಯ ಹೌಸಿಂಗ್ ಬೋರ್ಡ್, ಜಿಲ್ಲಾ ಪಂಚಾಯತ್ ಸುತ್ತಮುತ್ತಾ 11 ಜನರಿಗೆ ಬೀದಿ ನಾಯಿಗಳು ಅಟ್ಯಾಕ್ ಮಾಡಿದ್ದ ಪರಿಣಾಮ ಸಗರಸಭೆ ಇಂತಹ ನಿರ್ಧಾರ ಕೈಗೊಂಡಿದೆ.
ಸಾಕಿದ ನಾಯಿಗಳನ್ನ ಮಾಲೀಕರೇ ಕಟ್ಟಿಕೊಳ್ಳಬೇಕು, ಅದು ಅವರ ಜವಾಬ್ದಾರಿ. ಮನೆಯಲ್ಲಿ ಉಳಿದ ಆಹಾರವನ್ನ ಬೀದಿ ನಾಯಿಗಳಿಗೆ ಹಾಕುವಂತಿಲ್ಲ. ಜನ ನಾಯಿಗಳಿಗೆ ಆಹಾರ ಹಾಕುವುದರಿಂದ ನಾಯಿಗಳ ಸಂಖ್ಯೆ ಹೆಚ್ಚಾಗಿ ಜನರ ಮೇಲೆ ದಾಳಿ ಮಾಡುತ್ತಿದೆ. ಹೀಗಾಗಿ, ಜನಸಾಮಾನ್ಯರು ಬೀದಿ ನಾಯಿಗಳಿಗೆ ಆಹಾರ ಹಾಕುವಂತಿಲ್ಲ. ಜನ ಬೀದಿ ನಾಯಿಗಳಿಗೆ ಆಹಾರ ಹಾಕುವುದು ಕಂಡು ಬಂದರೆ ಸುಪ್ರೀಂ ಕೋರ್ಟ್ ಆದೇಶದಂತೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅಧಿಕೃತ ಆದೇಶ ಪ್ರಕಟಣೆ ಹೊರಡಿಸಿದೆ.