Thursday, March 26, 2026
Homeಜಿಲ್ಲಾಸುದ್ದಿಜೆಸಿಐ ಜನ್ನಾಪುರ ಸಮೃದ್ಧಿಯ ಅಧ್ಯಕ್ಷರಾಗಿ ‌ಪ್ರದೀಪ್ ಹೊಸಪುರ ತಂಡದ ಪದಗ್ರಹಣ ಸಮಾರಂಭ

ಜೆಸಿಐ ಜನ್ನಾಪುರ ಸಮೃದ್ಧಿಯ ಅಧ್ಯಕ್ಷರಾಗಿ ‌ಪ್ರದೀಪ್ ಹೊಸಪುರ ತಂಡದ ಪದಗ್ರಹಣ ಸಮಾರಂಭ

ಮೂಡಿಗೆರೆ: ತಾಲೂಕಿನ ಪ್ರತಿಷ್ಠಿತ ಘಟಕವಾದ ಜೆಸಿಐ ಜನ್ನಾಪುರ ನೂತನ ಅಧ್ಯಕ್ಷರಾಗಿ ಜೆಸಿ ಪ್ರದೀಪ್ ಹೊಸಪುರ ಹಾಗೂ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವು ಸೋಮವಾರದಂದು ವರ್ತಕರ ಸಮುಧಾಯ ಭವನ ಜನ್ನಾಪುರದಲ್ಲಿ ನಡೆಯಿತು.

ಜೆಸಿಐ ಜನ್ನಾಪುರ ಸಮೃದ್ಧಿ ಇದರ 2026 ನೇ ಸಾಲಿನ ಅಧ್ಯಕ್ಷ ಪ್ರದೀಪ್ ಹೊಸಪುರ ತಂಡದ ಪದಗ್ರಹಣ ಅದ್ದೂರಿಯಾಗಿ ‌ನಡೆಯಿತು.

ಸಭೆಯ ಪೂರ್ವಾರ್ದ ಭಾಗದ ಅಧ್ಯಕ್ಷತೆಯನ್ನು ಜೆಸಿಐ ಜನ್ನಾಪುರ ಸಮೃದ್ಧಿ ಅಧ್ಯಕ್ಷ ಪ್ರಹ್ಲಾದ್ ವಹಿಸಿ 2025ರ ವಾರ್ಷಿಕ ಕಾರ್ಯ ಚಟುವಟಿಕೆಗಳನ್ನು ವಿವರಿಸಿದರು.

ಪದಗ್ರಹಣದ ದ ಬಳಿಕ ಸಭೆಯ ಉತ್ತಾರಾರ್ಧ ಭಾಗದ ಸಭೆಯ ಅಧ್ಯಕ್ಷತೆಯನ್ನು ಜೇಸಿ ಪ್ರದೀಪ್ ಹೊಸಪುರ ವಹಿಸಿ ಮುಂಬರುವ ದಿನಗಳಲ್ಲಿ ಯುವಜನರಿಗೆ, ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಹೆಚ್ಚು ಹೆಚ್ಚು ತರಬೇತಿ ಕಾರ್ಯಕ್ರಮಗಳೊಂದಿಗೆ ಸಮಾಜ ಮುಖಿ ಕಾರ್ಯಗಳತ್ತ ಗಮನ ಹರಿಸುವುದಾಗಿ ಹೇಳಿದರು.

ಜೆಸಿಐ ಒಬ್ಬ ನಾಯಕನನ್ನು ಹುಟ್ಟು ಹಾಕುವ ಸಾಮರ್ಥ್ಯ ಇರುವ ಸಂಸ್ಥೆಯಾಗಿದೆ. ಸಂಸ್ಥೆಯಿಂದ ಹಲಾವರು ವಿಚಾರಗಳನ್ನು ಅರಿತು ಕೊಳ್ಳಲು ಸಾಧ್ಯವಿದೆ. ಮುಂದಿನ ದಿನಗಳಲ್ಲಿ ಉತ್ತಮ ಕೆಲಸಗಳನ್ನು ನಾವೆಲ್ಲರೂ ಒಮ್ಮತದಿಂದ ಮಾಡೋಣ ನಿಮ್ಮೆಲ್ಲರ ಸಹಕಾರ ಇರಲಿ ಎಂದರು

ವಲಯ ಉಪಾಧ್ಯಕ್ಷ ಜಗತ್ ಗೌಡ ಮಾತನಾಡಿ ಸಕಲರಿಗೂ ಗಣ ರಾಜ್ಯೋತ್ಸವದ ಶುಭಾಶಯಗಳು ತಿಳಿಸಿ ಜೆಸಿಐ ನಿಂದ ಸಮಾಜದಲ್ಲಿ ಮಾದರಿಯಾಗಿ ಹೇಗೆ ಬದುಕಬೇಕು ಎಂಬುದನ್ನು ತಿಳಿಸಿಕೊಡುವ ಏಕೈಕ ಸಂಘಟನೆ ಇದಾಗಿದ್ದು ಈ ಸಂಸ್ಥೆಯಲ್ಲಿರುವುದು ಹೆಮ್ಮೆಯ ಸಂಗತಿ ಎಂದರು

ಶಿಕ್ಷಣ ಕ್ಷೇತ್ರದಲ್ಲಿ ಅಂಕಗಳ ಬಗ್ಗೆ ಮಾತ್ರ ಹೆಚ್ಚಿನ ಆದ್ಯತೆ ನೀಡಿದರೆ ಈ ಸಂಸ್ಥೆ ವ್ಯಕ್ತಿಯ ವ್ಯಕ್ತಿತ್ವ ವಿಕಸನಗೊಳಿಸುವುದರ ಜೊತೆಗೆ ಸಮಾಜದಲ್ಲಿ ಶ್ರೇಷ್ಠ ವ್ಯಕ್ತಿಯಾಗಿ ಬೆಳೆಯುವುದನ್ನು ಕಲಿಸಿಕೊಡುತ್ತದೆ

ಸಮಾಜದಲ್ಲಿ ಜನರ ಜೊತೆಗೆ ಬೆರೆತು ಎಲ್ಲರನ್ನು ಅರ್ಥೈಸಿಕೊಂಡು ಬದುಕಬೇಕು ಹೀಗೆ ಬದುಕಿದ್ದಲ್ಲಿ ಮಾತ್ರ ಬದುಕಿಗೆ ಸಾರ್ಥಕತೆ ಎಂದರು

ಜೆಸಿಐ ರಾಷ್ಟೀಯ ಅಧ್ಯಕ್ಷ ಪ್ರಜ್ವಲ್ ಜೈನ್ ಮಾತನಾಡಿ ಜೆಸಿಐ ನಿಂದ ಹಲವಾರು ರೀತಿಯಲ್ಲಿ ಸಂಬಂದಿಕರು ಸಿಗುತ್ತಾರೆ. ನೂತನ ಅಧ್ಯಕ್ಷ ಅತ್ಯದ್ಭುತ ಕೆಲಸಗಳನ್ನು ಮಾಡಿಕೊಂಡು ಹೋಗುತ್ತಾರೆ ಎಂಬ ಭರವಸೆ ವ್ಯಕ್ತ ಪಡಿಸಿದರು.

ವಿವಿಧ ಸಂಘ ಸಂಸ್ಥೆಗಳಿಗಿಂತ ಜೆಸಿಐ ವಿಭಿನ್ನ ವಾಗಿದ್ದು.ಬೇರೆಡೆ ಸಿಗದ ಗೌರವ, ಅವಕಾಶ, ಸೌಲಭ್ಯಗಳು ನಮ್ಮ ಸಂಘಟನೆಯಲ್ಲಿ ಪಡೆಯಬಹುದಾಗಿದೆ ಎಂದರು

ಸಮಾಜ ಬದಲಾಯಿಸೋ ಕಡೆ ಗಮನ ಹರಿಸೋ ಸಂಘ ಸಂಸ್ಥೆಗಳು ಒಂದೆಡೆಯಾದರೆ ಜೆಸಿಐ ನಿಮ್ಮ ಪರಿವರ್ತನೆ ಮಾಡಲು ಮೊದಲು ಆದ್ಯತೆ ನೀಡುತ್ತದೆ ಎಂದರು

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ರಾಷ್ಟ್ರೀಯ ಜೆಸಿಐ ಉಪಾಧ್ಯಕ್ಷೆ ಯಶಸ್ವಿನಿ ಮಾತನಾಡಿ ಜೆಸಿಐ ಸದಸ್ಯರಾದರೆ ಸಾಲದು ಕಾರ್ಯಕ್ರಮಗಳಲ್ಲಿ ತಮ್ಮನ್ನು ತೊಡಗಿಸಿಕೊಂಡರೆ ಮಾತ್ರ ವ್ಯಕ್ತಿ ವಿಕಸನ ಸಾಧ್ಯ..ನಮ್ಮ ಜೀವನದಲ್ಲಿ ಕೃತಜ್ಞರಾಗಿರುವುದು ಬಹಳ ಮುಖ್ಯ,ನನ್ನನ್ನು ಈ ಮಟ್ಟಕ್ಕೆ ಬೆಳೆಸಿದ ಪ್ರತಿಯಯೊಬ್ಬರಿಗೂ ಧನ್ಯವಾದ ತಿಳಿಸಿದರು.
ಸಮಾಜದಲ್ಲಿ ಹೆಣ್ಣು ಮಕ್ಕಳು ಬೆಳವಣಿಗೆ ಕಷ್ಟ. ಹಲವಾರು ಅವಮಾನ, ಅಪಮಾನ ಸವಾಲುಗಳನ್ನು ಎದುರಿಸಿ ಬಂದಿದ್ದು ಎಲ್ಲರು ನಮ್ಮಂತೆ ಆಗಬೇಕು ಎಂದರು.

ಬದುಕಿನಲಿ ಕೆಲಸ, ಸೇವೆ ಮಾಡುವ ಹಂಬಲ ಅಳವಡಿಸಿಕೊಳ್ಳಬೇಕು ಎಂದರು. ಯಾವುದೇ ಹುದ್ದೆ ಅಲಂಕರಿಸಬೇಕೆಂದರೆ ಸಹಕಾರ ಅತ್ಯವಶ್ಯಕ ಎಂದರು. ವಿವಿಧ ಭಾಗಗಳಿಂದ ಜೆಸಿಐ ಸದಸ್ಯರು ಕಾರ್ಯಕ್ರಮಕ್ಕೆ ಆಗಮಿಸಿ ಶುಭಹಾರೈಸಿದರು.

2025 ರ ಜನ್ನಾಪುರ ಸಮೃದ್ಧಿ ಘಟಕದ ಸಾಧನೆಯನ್ನು ಜೆಸಿಐ ಕಾರ್ಯದರ್ಶಿ ನಿಕ್ಷೇಪ್ ಗೌಡ ಮರಬೈಲ್ ಸಾರ್ವಜನಿಕರಿಗೆ ತಿಳಿಸಿದರು

ಮುಖ್ಯ ಅತಿಥಿಗಳ ಪರಿಚಯವನ್ನು ಜೆಸಿಐ ನಚಿಕೆತ್ ಜೆಸಿಐ ಕೀರ್ತನ್, ವೀರೇಂದ್ರ ಪಟೇಲ್ ಹಾಗೂ ಸುನಯ್ ಪರಿಚಯ ಮಾಡಿದರು

ವೇದಿಕೆಗೆ ಗಣ್ಯರನ್ನು ಜೆಸಿಐ ಚರಣ್ ಮರಬೈಲ್ ಆಹ್ವಾನಿಸಿದರು. ಜೆಸಿಐ ಪ್ರಹ್ಲಾದ್ ಗಣ್ಯರನ್ನು ಕಾರ್ಯಕ್ರಮಕ್ಕೆ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಜೆಸಿಐ ವಾಣಿ ದೀಪಿಕಾ ಸಂತೋಷ್ ವಾಚಿಸಿದರು

ಕಾರ್ಯಕ್ರಮದಲ್ಲಿ ಮಾಜಿ ಅಧ್ಯಕ್ಷ ಜೆಸಿ ಪ್ರಹ್ಲಾದ್ ವಲಯ 14 ರ ಉಪಾಧ್ಯಕ್ಷರಾದ ಜಗತ್ ಜೆಸಿಐ ಸಮೃದ್ಧಿ ಜನ್ನಪುರ ಉಪಾಧ್ಯಕ್ಷ ವೀರೇಂದ್ರ ಪಟೇಲ್ ಸ್ಥಾಪಕ ಅಧ್ಯಕ್ಷರಾದ ಜೆಸಿ ಸಂತೋಷ , ನಿಕಟ ಪೂರ್ವ ಅಧ್ಯಕ್ಷ ಜೆಸಿಐ ವಿನಯ್ ಕಾರ್ಯದರ್ಶಿ ಚರಣ್ ಮರಬೈಲ್ ಹಾಗೂ ಜೆಸಿಐ ಜನ್ನಪುರ ಜೆಸಿಐ ಜೂನಿಯರ್ ಶ್ರಾವ್ಯ, ಸೇರಿದಂತೆ ಪೂರ್ವ ಅಧ್ಯಕ್ಷರು ಹಾಗೂ ಸದಸ್ಯರು ಮತ್ತು ಸಾರ್ವಜನಿಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು

ವರದಿ :ಪುನೀತ್ ಕಡಿದಾಳು

9483811948

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!