Thursday, February 26, 2026
Homeಕ್ರೈಮ್ಇಂದಾವರ: ಸಿಡಿಎ ಇಲಾಖೆ ವಂಚನೆ ವಿರುದ್ಧ ಗ್ರಾಮಸ್ಥರಿಂದ ಪ್ರತಿಭಟನೆ

ಇಂದಾವರ: ಸಿಡಿಎ ಇಲಾಖೆ ವಂಚನೆ ವಿರುದ್ಧ ಗ್ರಾಮಸ್ಥರಿಂದ ಪ್ರತಿಭಟನೆ

ಚಿಕ್ಕಮಗಳೂರು:  ಇಂದಾವರ ಗ್ರಾಮಸ್ಥರ ಜಮೀನನ್ನು ನಿವೇಶನಗಳನ್ನಾಗಿ ಪರಿವರ್ತಿಸುವಂತೆ ಸಿಡಿಎ ಇಲಾಖೆ ಒಡಂಬಡಿಕೆಯಲ್ಲಿ ಜಮೀನನ್ನು ಪಡೆದುಕೊಂಡು ರೈತರಿಗೆ ವಂಚಿಸಲಾಗುತ್ತಿದೆ ಎಂದು ಆರೋಪಿಸಿ ಗುರುವಾರ ಸಿಡಿಎ ಕಚೇರಿ ಎದುರು ಇಂದಾವರ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.

ಈ ಕುರಿತು ಮಾತನಾಡಿದ ಗ್ರಾಮಸ್ಥ ಯತೀಶ್ ಗ್ರಾಮದ ಸುಮಾರು 208 ಎಕರೆ ಪ್ರದೇಶವನ್ನು ಸಿಡಿ ಎ ಇಲಾಖೆ ಪರಸ್ಪರ ಒಪ್ಪಂದ ಮೇರೆಗೆ ಪಡೆದುಕೊಂಡು ಸುಮಾರು ಮೂರ್‍ನಾಲ್ಕು ವರ್ಷಗಳೇ ಕಳೆದರೂ ಇಂದಿಗೂ ಲೇಔಟ್ ನಿರ್ಮಾಣಗೊಂಡಿಲ್ಲ. ಇನ್ನೊಂದೆಡೆ ರೈತರ ಜಮೀನನ್ನು ಹಿಂತಿರುಗಿಸುತ್ತಿಲ್ಲ ಎಂದು ಆರೋಪಿಸಿದರು.

ಗ್ರಾಮದ ಜಮೀನನ್ನು ಸರಿಯಾಗಿ ನಿವೇಶನಗಳನ್ನಾಗಿ ಮಾರ್ಪಡಿಸದೇ ಸಿಡಿಎ ಇಲಾಖೆ, ಇದೀಗ ಮ ತ್ತೊಂದು ಸ್ಥಳದಲ್ಲಿ ರೈತರಿಂದ ಜಮೀನು ಪಡೆದುಕೊಂಡು ಲೇಔಟ್ ಮಾಡುವುದಾಗಿ ಹೇಳುತ್ತಿದೆ. ಇದರಿಂ ದ ಗ್ರಾಮದ ಬಹುತೇಕ ರೈತರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ ಎಂದು ಹೇಳಿದರು.

ಬೃಹತ್ ಮಟ್ಟದಲ್ಲಿ ಗ್ರಾಮದಲ್ಲಿ ಲೇಔಟ್ ನಿರ್ಮಾಣ ಮಾಡಲಾಗುತ್ತಿದೆ. ಆದರೆ ಬೆರಳಣಿಕೆ ಸಂಖ್ಯೆಯ ಲ್ಲಿ ಸಿಬ್ಬಂದಿಗಳು ನಿಯೋಜಿಸಿ ಕೆಲಸ ಮಾಡಿಸಲಾಗುತ್ತಿದೆ. ಅಲ್ಲದೇ ವರ್ಷಗಟ್ಟಲೇ ಸಮಯ ಸಾಗುತ್ತಿರುವ ಕಾರಣ ನಿವೇಶನದ ಜಾಗದಲ್ಲಿ ಹುಲ್ಲು ಬೆಳೆದುಕೊಂಡು ನಿವೇಶನ ಸ್ಪಷ್ಟವಾಗಿ ಕಾಣಿಸುತ್ತಿಲ್ಲ. ಜೊತೆಗೆ ರೈತರಿ ಗೂ ತಮ್ಮ ಜಮೀನು ಯಾವುದೆಂದು ತಿಳಿಯುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಗ್ರಾಮದ ರೈತರ ಪ್ರತಿ ಎಕರೆಗೆ ಶೇ.55 ರಂತೆ12 ಸಾವಿರ ಚದರಡಿ ಮೀಸಲಿಡಬೇಕು. ಈ ಲೇಔಟ್ ಸಂಪೂರ್ಣವಾಗಿ ಪೂರೈಸುವ ಮೊದಲೇ, ಹೊಸ ಸ್ಥಳದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರವು ಕಾಯ್ದೆಗಳ ಬೆದ ರಿಕೆವೊಡ್ಡಿ ರೈತರಿಂದ ಜಮೀನನ್ನು ಕಬಳಿಸಲು ಯತ್ನಿಸುತ್ತಿದೆ ಎಂದರು.

ರೈತರು ಬೆಳೆ ಭೂಮಿಯನ್ನು ಪ್ರಾಧಿಕಾರಕ್ಕೆ ಹಸ್ತಾಂತರಿಸಿ ನಾಲ್ಕೈದು ವರ್ಷಗಳೇ ಕಳೆದಿವೆ. ಇಂದಿಗೂ ಲೇಔಟ್ ಪೂರೈಸದೇ ಉಡಾಫೆ ಉತ್ತರ ನೀಡಿ ರೈತರನ್ನು ವಂಚಿಸಲಾಗುತ್ತಿದೆ. ರೈತರಿಗೆ ನಿವೇಶನ ಹಂಚಿಲ್ಲ, ಲೇಔಟ್‌ನಲ್ಲಿ ಚರಂಡಿ, ರಸ್ತೆ ಕಾಮಗಾರಿ ಕಳಪೆಯಾಗಿದೆ. ಇಲಾಖೆ ರೈತರ ಬೆಳೆ ಬೆಳೆಯುವ ಭೂಮಿ ಪಡೆದು ವಂಚಿಸುತ್ತಿದ್ದಾರೆ ಎಂದರು.

ಕೂಡಲೇ ಲೇಔಟ್ ಬಗ್ಗೆ ಸಿಡಿಎ ಇಲಾಖೆ ಡಿಸೆಂಬರ್ ಅಂತ್ಯದೊಳಗೆ ಸಮರ್ಪಕ ಉತ್ತರ ನೀಡಿ, ರೈತ ರಿಗೆ ನಿವೇಶನ ಹಂಚಿಕೆ ಮಾಡದಿದ್ದಲ್ಲಿ ಜಮೀನಿನಲ್ಲಿ ರೈತರು ಉಳುಮೆ ಆರಂಭಿಸುವ ಜೊತೆಗೆ ಇಲಾಖೆ ವಿರುದ್ಧ ಬೃಹತ್ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಇಂದಾವರ ಗ್ರಾ.ಪಂ. ಅಧ್ಯಕ್ಷ ಸುಭಾಶ್, ಗ್ರಾಮಸ್ಥರಾದ ಸುರೇಶ್, ದಿನೇಶ್, ಲವ ಕುಮಾರ್, ರೇವಣ್ಣ, ಐ.ಡಿ.ಚಂದ್ರು, ಪ್ರೇಮ್‌ಕುಮಾರ್, ದಿಣೇಶ್, ಮಲ್ಲೇಶ್, ಚೇತನ್, ನಿರಂಜನ್ ಇದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!