ಜಯಪುರ: ಲಾರಿಯೊಂದು ರಸ್ತೆಯಲ್ಲಿ ಸಿಲುಕಿ ಬಸ್ ಸಂಚಾರ ಕೆಲಹೊತ್ತು ಸ್ಥಗಿತಗೊಂಡಿತ್ತು, ಈ ಘಟನೆ ಜಯಪುರದಿಂದ ಬಸರೀಕಟ್ಟೆ ಸಂಪರ್ಕಿಸುವ ಮಾರ್ಗ ಮಧ್ಯೆ ಬಿಳಾಲುಕೊಪ್ಪ ವ್ಯಾಪ್ತಿ ಬಳಿ ನಡೆದಿದೆ.
ಶೃಂಗೇರಿಯಿಂದ ಹೊರನಾಡು ಸಂಪರ್ಕ ರಸ್ತೆಯು ಆಗಿದ್ದು, ಭಾನುವಾರವೂ ಆದ್ದರಿಂದ ವಾಹನಗಳು ಕೂಡ ಅತಿಯಾಗಿದ್ದು ವಾಹನ ಸವಾರರು ಪರದಾಡುವ ಸ್ಥಿತಿ ಎದುರಾಗಿತ್ತು.
ಆದರೆ ಸ್ಥಳೀಯ ಪೊಲೀಸರ ಹಾಗೂ ಗ್ರಾಮಸ್ಥರ ನೆರವಿನಿಂದ ಲಾರಿಯನ್ನು ಹಿಂದಕ್ಕೆ ತೆಗೆದು ರಸ್ತೆಯಲ್ಲಿ ಓಡಾಡುವ ಬೇರೆ ವಾಹನಗಳಿಗೆ
ಕ್ಲಿಯರ್ ಮಾಡಿಕೊಡಲಾಯಿತು.