Saturday, February 7, 2026
Homeಜಿಲ್ಲಾಸುದ್ದಿಹಾಸನಾಂಬ ದೇವಾಲಯಕ್ಕೆ ಬೆಳ್ಳಿ ರಥದಲ್ಲಿ ಒಡವೆಗಳ ರವಾನೆ!

ಹಾಸನಾಂಬ ದೇವಾಲಯಕ್ಕೆ ಬೆಳ್ಳಿ ರಥದಲ್ಲಿ ಒಡವೆಗಳ ರವಾನೆ!

ಹಾಸನ: ವರ್ಷಕೊಮ್ಮೆ ದರ್ಶನ ಕೊಡುವ ಹಾಸನಾಂಬೆಯ ಕಣ್ತುಂಬಿಸಿಕೊಳ್ಳಲು ಭಕ್ತರು ಕಾತರರಾಗಿದ್ದಾರೆ. ಇದೇ ಅಕ್ಟೋಬರ್ 9ರಿಂದ ಅಕ್ಟೋವರ್ 28ರತನಕ ಹಾಸನಾಂಭ ದೇವಿಯ ದರ್ಶನ ಭಕ್ತರಿಗೆ ಸಿಗಲಿದೆ.

ಈ ಹಿನ್ನೆಲೆಯಲ್ಲಿ ಹಾಸನದ ಜಿಲ್ಲಾ ಖಜಾನೆಯಲ್ಲಿದ್ದ ಒಡವೆಗಳನ್ನ ಪೂಜೆ ಸಲ್ಲಿಸಿ, ಮಂಗಳವಾದ್ಯಗಳೊಂದಿಗೆ ಬೆಳ್ಳಿ ರಥದಲ್ಲಿ ದೇವಾಲಯಕ್ಕೆ ರವಾನೆ ಮಾಡಲಾಯ್ತು.

ಪ್ರಧಾನ ಆರ್ಚಕ ನಾಗರಾಜ್ ಅವರು ಪೂಜೆ ಸಲ್ಲಿಸಿದ ಬಳಿಕ ತಹಶೀಲ್ದಾರ್ ಹಾಗೂ ಬಿಗಿ ಪೊಲೀಸ್ ಭದ್ರತೆಯೊಂದಿಗೆ ಒಡವೆಗಳನ್ನ ಸಾಗಿಸಲಾಯ್ತು.

ಒಡವೆಗಳನ್ನ ನೋಡಿದ ಭಕ್ತರಲ್ಲಿ ಧನ್ಯತಾ ಭಾವ ಮನದಲ್ಲಿ ಮೂಡಿತು. ಈ ಒಡವೆಗಳ ಧರಿಸಿಕೊಂಡು ಹಾಸನಾಂಬೆ, ತನ್ನ ಭಕ್ತರಿಗೆ ದರ್ಶನ ನೀಡಲಿದ್ದಾಳೆ

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!