ಚಿಕ್ಕಮಗಳೂರು ಎಸ್ಪಿಯಾಗಿ ಜಿತೇಂದ್ರ ಕುಮಾರ್ ದಯಾಮ ಇಂದು ಅಧಿಕಾರ ವಹಿಸಿಕೊಂಡಿದ್ದಾರೆ. ಚಿಕ್ಕಮಗಳೂರು SP ಕಚೇರಿಗೆ ಬಂದ ಜಿತೇಂದ್ರ ಕುಮಾರ್ ದಯಾಮ ಅವರನ್ನ ಪೊಲೀಸ್ ಗೌರವಗಳೊಂದಿಗೆ ಬರಮಾಡಿಕೊಳ್ಳಲಾಯ್ತು.
ಗುರುವಾರ ಸಂಜೆ ರಾಜ್ಯದೆಲ್ಲೆಡೆ ಕೆಲ IPS ಅಧಿಕಾರಿಗಳ ವರ್ಗಾವಣೆ ಆಗಿತ್ತು. ಈ ಹಿಂದೆ ಚಿಕ್ಕಮಗಳೂರು SP ಆಗಿ, ವಿಕ್ರಂ ಅಮಟೆ ಕಾರ್ಯ ನಿರ್ವಹಿಸುತ್ತಿದ್ರು. 2 ವರ್ಷ 4 ತಿಂಗಳುಗಳ ಕಾಲ ಕರ್ತವ್ಯ ವಿಕ್ರಂ ಅಮಟೆ ಅವರು ಚಿಕ್ಕಮಗಳೂರು ಪೊಲೀಸ್ ವರಿstaಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ರು.

ಇದೀಗ ಈ ಸ್ಥಾನಕ್ಕೆ ಜಿತೇಂದ್ರ ಕುಮಾರ್ ದಯಾಮ ಅವರು ಬಂದಿದ್ದು, ವಿಕ್ರಂ ಅಮಟೆ ಅವರು ಬೆಂಗಳೂರು ಪೂರ್ವ ವಿಭಾಗಕ್ಕೆ ಡಿಸಿಪಿ ಆಗಿ ನಿಯೋಜನೆಗೊಂಡಿದ್ದಾರೆ. ಇನ್ನೂ 2018 ಸಾಲಿನ IPS ಅಧಿಕಾರಿ ಆಗಿರೋ ಜಿತೇಂದ್ರ ಕುಮಾರ್ ದಯಾಮ ಅವರು ಈ ಹಿಂದೆ ANF SP ಯಾಗಿ ಕರ್ತವ್ಯ ನಿರ್ವಹಿಸುತ್ತಿದ್ರು. ಅಲ್ಲದೇ ಧರ್ಮಸ್ಥಳ SIT ಪ್ರಕರಣದ ತಂಡದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.
