ಧರ್ಮಸ್ಥಳ: ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಪಾದಯಾತ್ರೆ ನಡೆಸಿರುವ ಕಬ್ಜಾ ಶರಣ್ ಹಾಗೂ ತಂಡವನ್ನು ಧರ್ಮಸ್ಥಳ ಗ್ರಾಮಸ್ಥರು ಮಹಾದ್ವಾರದಲ್ಲಿಯೇ ತಡೆ ಹಿಡಿದ ಘಟನೆ ನಡೆದಿದೆ

ಸೌಜನ್ಯ ಪ್ರಕರಣ ನ್ಯಾಯಕ್ಕಾಗಿ ಕಲಬುರ್ಗಿಯ ಆಳಂದ ತಾಲೂಕು ರುದ್ರವಾಡಿ ಶರಣಪ್ಪ ಅಲಿಯಾಸ್ ಕಬ್ಜಾ ಶರಣ್ ಹಾಗೂ ತಂಡ ಪಾದಯಾತ್ರೆ ನಡೆಸಿತ್ತು ಅವರು ಧರ್ಮಸ್ಥಳ ದ್ವಾರ ಪ್ರವೇಶಿಸಲು ಮುಂದಾಗುತ್ತಿದ್ದಂತೆ ಗ್ರಾಮಸ್ಥರು ಅವರನ್ನು ತಡೆದಿದ್ದಾರೆ. ಈ ಹಿಂದೆ ತಮ್ಮ ಮೇಲೆ ದಾಳಿ ಆಗುವ ಆತಂಕವಿದೆ ಎಂದು ಶರಣಪ್ಪ ಹೇಳಿಕೊಂಡಿದ್ದರು.
ಧರ್ಮಸ್ಥಳ ದ್ವಾರದ ಮುಂಭಾಗ ಭಕ್ತರು ಮತ್ತು ಪಾದಯಾತ್ರೆ ನಡೆಸಿದವರ ಮಧ್ಯೆ ವಾಗ್ವಾದ ನಡೆದಿದೆ. ಧರ್ಮಸ್ಥಳ ಕ್ಷೇತ್ರ ಹೆಸರು ಕೆಡಿಸಲು ಪಾದಯಾತ್ರೆ ಮಾಡಿದ್ದಾರೆ ಎಂದು ಅಲ್ಲಿನ ಗ್ರಾಮಸ್ಥರು ಅವರನ್ನು ತೆಡ ಹಿಡಿದಿದ್ದಾರೆ.
ಶರಣಪ್ಪನು ನಕಲಿ ದೇವಮಾನವ ಎಂದಿದ್ದನ್ನು ಇದಕ್ಕೆ ಭಕ್ತರ ಆಕ್ರೋಶ ವ್ಯಕ್ತ ಪಡಿಸಿದ್ದು, ವಿಡಿಯೋ, ಶೇರ್ ಗಾಗಿ ನಾಟಕ ಮಾಡಬೇಡ ಎಂದು ಗ್ರಾಮಸ್ಥರು ಶರಣಪ್ಪ ವಿರುದ್ಧ ಕಿಡಿಕಾರಿದ್ದಾರೆ.