ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಬಾಳೆಹೊಳೆ ಗ್ರಾಮದ ಭದ್ರಾ ನದಿಯಲ್ಲಿ ಮುಳುಗಿ ಇಬ್ಬರು ಯುವಕರು ಮೃತಪಟ್ಟಿದ್ದ ಪ್ರಕರಣ ಸಂಬಂಧ ಅಗ್ನಿಶಾಮಕ ಸಿಬ್ಬಂದಿ ನದಿಯಿಂದ ಮೃತದೇಹಗಳನ್ನು ಹೊರಗೆ ತೆಗೆದಿದ್ದಾರೆ.

ಕೊಡಗು ಮೂಲದ ಯೋಗೇಶ್(17), ಅಭಿಷೇಕ್(23) ಮೃತರಾಗಿದ್ದು, ಇವರ ಕುಟುಂಬ ಕಾಫಿ ತೋಟದ ಕೆಲಸಕ್ಕೆ ಬಂದಿದ್ದ ವೇಳೆ ನದಿಯಲ್ಲಿ ಈಜಲು ಇವರಿಬ್ಬರು ತೆರಳಿದ್ದರು. ಈ ವೇಳೆ ಕುಟುಂಬದವರ ಮುಂದೆಯೇ ನದಿಯಲ್ಲಿ ಮುಳುಗಿ ಪ್ರಾಣಬಿಟ್ಟಿದ್ದರು.
ಮೃತ ದೇಹಗಳಿಗಾಗಿ ಹುಡುಕಾಡಿದ್ದ ಅಗ್ನಿಶಾಮಕ ದಳ ಹಾಗೂ ಸ್ಥಳೀಯ ಈಜು ತಜ್ಞರು ಅಂತಿಮವಾಗಿ ಅವನ್ನು ಹೊರ ತೆಗೆದಿದ್ದಾರೆ.
