Wednesday, February 11, 2026
Homeಕ್ರೈಮ್ಕಳಸ: ರೀಲ್ಸ್‌ ಮಾಡುವಾಗ ಜೀಪ್‌ ಪಲ್ಟಿ: ಐವರಿಗೆ ಗಾಯ!

ಕಳಸ: ರೀಲ್ಸ್‌ ಮಾಡುವಾಗ ಜೀಪ್‌ ಪಲ್ಟಿ: ಐವರಿಗೆ ಗಾಯ!

ಚಿಕ್ಕಮಗಳೂರು: ರೀಲ್ಸ್‌ ಮಾಡುವಾಗ ಚಾಲಕನ ನಿಯಂತ್ರಣ ತಪ್ಪಿ ಐವರು ಗಾಯಗೊಂಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಳಸಾ ತಾಲೂಕಿನ ಕ್ಯಾತನಮಕ್ಕಿ ರಸ್ತೆಯಲ್ಲಿ ನಡೆದಿದೆ.

ಕ್ಯಾತನಮಕ್ಕಿ ರಸ್ತೆಯು ಸಂಪೂರ್ಣ ಗುಂಡಿಮಯವಾಗಿದ್ದು ಪ್ರಸಿದ್ಧ ಪ್ರವಾಸಿತಾಣ ಕ್ಯಾತನಮಕ್ಕಿಗೆ ಜೀಪ್‌ ಗಳ ಮೂಲಕವೇ ತೆರಳಬೇಕಿದೆ.ಅಪಾಯಕಾರಿ ರಸ್ತೆಯಲ್ಲೇ ಜೀಪ್‌ ನಲ್ಲೇ ಹುಚ್ಚಾಟ ಮೆರೆಯುತ್ತಿದ್ದ ಪ್ರವಾಸಿಗರಿಗೆ ಸ್ಥಳೀಯರು ಎಚ್ಚರಿಕೆ ನೀಡಿದ್ದರು.ಆದರೂ ಕ್ಯಾರೆ ಎನ್ನದೇ ರೀಲ್ಸ್‌ ಮಾಡುತ್ತಿದ್ದ ಯುವಕರ ಜೀಪ್‌ ಪಲ್ಟಿಯಾಗಿದೆ. ಅದೃಷ್ಟವಶಾತ್‌ ಜೀಪಿನಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಪಾರಾಗಿದ್ದಾರೆ.

ಘಟನೆ ಸಂಬಂಧ ಕಳಸಾ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!