ಚಿಕ್ಕಮಗಳೂರು: ಜಿಲ್ಲೆಯ ಎಲ್ಲಾ ಬ್ಯಾಂಕುಗಳ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಕನ್ನಡವನ್ನು ಕಲಿಯಬೇಕು, ಸ್ಥಳೀಯ ಭಾಷೆಯಲ್ಲೆ ವ್ಯವಹರಿಸುವುದರ ಜೊತೆಗೆ ವಾಣಿಜ್ಯ ಚಟುವಟಿಕೆ ಮತ್ತು ಸಂಸ್ಕೃತಿಯ ಕುರಿತು ತಿಳುವಳಿಕೆ ಹೊಂದಬೇಕು ಎಂದು ಕನ್ನಡ ಸೇನೆ ಕಾರ್ಯಕರ್ತರು ಆಕ್ರೋಶ ಹೊರ ಹಾಕಿದರು.
ಚಿಕ್ಕಮಗಳೂರು ನಗರದ ವ್ಯಕ್ತಿಯೊರ್ವರು ಎಐಟಿ ಸರ್ಕಲ್ ಬೀಕನಹಳ್ಳಿ ಬ್ರಾಂಚ್ ಕೆನರಾ ಬ್ಯಾಂಕ್ ಗೆ ಹೋಗಿ ನನ್ನ ಅಕೌಂಟ್ ನಲ್ಲಿದ್ದ ಹಣ ಯಾಕೋ ಕಟ್ ಆಗಿದೆ ಎಂದು ಬ್ಯಾಂಕಿನ ಅಸಿಸ್ಟೆಂಟ್ ಮ್ಯಾನೇಜರ್ ಗೆ ಕೇಳಿದ್ದಾರೆ, ಆಗ ಅವರು ಇಂಗ್ಲಿಷ್ ನಲ್ಲಿ ಮಾತಾಡಿ ನನಗೆ ಕನ್ನಡ ಬರುವುದಿಲ್ಲ ಎಂದು ಗರ್ವದಿಂದ ಮಾತನಾಡಿದ್ದಾರೆ, ಕೆಲ ಗಂಟೆಗಳ ಕಾಲ ಸಾರ್ವಜನಿಕರಿಗೂ ಹಾಗೂ ಬ್ಯಾಂಕ್ ಸಿಬ್ಬಂದಿಗಳಿಗೂ ಮಾತಿನ ಚಕಮಕಿ ನಡೆದಿದೆ. ಕೂಡಲೇ ಕನ್ನಡಸೇನೆ ಕಾರ್ಯಕರ್ತರಿಗೆ ವಿಚಾರ ತಿಳಿಸಿದ ಸ್ವಲ್ಪ ಸಮಯದ ಬಳಿಕ
ಸ್ಥಳಕ್ಕೆ ಕನ್ನಡ ಸೇನೆ ಕಾರ್ಯಕರ್ತರು ಆಗಮಿಸಿ ಬ್ಯಾಂಕ್ ಸಿಬ್ಬಂದಿಗಳಿಗೆ ತರಾಟೆ ತೆಗೆದುಕೊಂಡು ಮಾತನಾಡಿ
ಎಲ್ಲಾ ಬ್ಯಾಂಕ್ ಸಿಬ್ಬಂದಿಗಳು ಗ್ರಾಹಕರೊಂದಿಗೆ ಗೌರವಿತವಾಗಿ ನಡೆದುಕೊಳ್ಳಬೇಕು ಮತ್ತು ಸ್ಥಳೀಯ ಭಾಷೆಯನ್ನ ಮಾತನಾಡಲು ಪ್ರಯತ್ನಿಸಬೇಕು. ಕರ್ನಾಟಕದಲ್ಲಿ ಕನ್ನಡ ಭಾಷೆಗೆ ಮೊದಲು ಆದ್ಯತೆ ನೀಡಬೇಕು, ಹಿರಿಯರಿಗೆ ಹಾಗೂ ರೈತರನ್ನ ಕೂರಿಸಿ ಮಾತನಾಡಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಅನ್ವರ್, ಸತೀಶ್ ಕಲ್ದೊಡ್ಡಿ, ಜಯಪ್ರಕಾಶ್ ಉಪಸ್ಥಿತರಿದ್ದರು.