ಮೂಡಿಗೆರೆ: ತಾಲೂಕಿನಲ್ಲಿ ಬಿದ್ದ ಮಳೆಗೆ ಮಲೆನಾಡು ಭಾಗದ ರಸ್ತೆಗಳು ಹೊಂಡಮಯವಾಗಿದ್ದು ಡಾಂಬರು ಕಾಣದ ರಸ್ತೆಗಳು ಕೆಸರಿನ ಕೊಂಪೆಯಾಗಿದ್ದು, ವಾಹನ ಸಂಚಾರವಿರಲಿ, ನಡೆದಾಡಲೂ ಸಾಧ್ಯವಾಗದಂತಹ ಸ್ಥಿತಿಗೆ ತಲುಪಿವೆ ಡಾಂಬರು ಹಾಕಿದ್ದ ರಸ್ತೆಗಳಲ್ಲಿ ನಿರ್ಮಾಣವಾಗಿದ್ದ ಗುಂಡಿಗಳು ಮಳೆಗೆ ಇನ್ನಷ್ಟು ದೊಡ್ಡದಾಗುತ್ತಿದ್ದು, ರಸ್ತೆ ಮಧ್ಯೆ ಸಣ್ಣ ಕೆರೆಯಂತೆ ಕಂಡುಬರುತ್ತಿವೆ. ಕೆಲವೆಡೆ ಡಾಂಬರು ಕಿತ್ತು ಬಂದಿದ್ದು, ಲೋಕಪಯೋಗಿ ಇಲಾಖೆ ಹಾಗೂ ಶಾಸಕರ ನಿರ್ಲಕ್ಷತನ ಇಲ್ಲಿ ಎದ್ದು ಕಾಣುತ್ತಿದೆ.

ಹೌದು ಇದು ಎಲ್ಲಿ ಅನ್ಕೊಂಡ್ರ ಮೂಡಿಗೆರೆ ತಾಲೂಕಿನ ದಾರದಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಒಳಪಡುವ ಕಡಿದಾಳು ಗ್ರಾಮದಲ್ಲಿ ನಾವು ಕಾಣಬಹುದು. ರಸ್ತೆಯಲ್ಲೂ ಗುಂಡಿಗಳದ್ದೇ ಕಾರುಬಾರಾಗಿದ್ದು ಜನರು ಓಡಾಡಲು ಹರಸಾಹಸ ಪಡುತ್ತಿದ್ದಾರೆ. ಇದಕ್ಕೆ ಲೋಕಪಯೋಗಿ ಇಲಾಖೆ ಹಾಗೂ ಶಾಸಕರ ನಿರ್ಲಕ್ಷತನವೇ ಕಾರಣವೆಂದು ಅಲ್ಲಿನ ಗ್ರಾಮಸ್ಥರು ರೊಚ್ಚಿಗೆದ್ದು ಖುದ್ದು ಅವರೇ ಗುದ್ದಲಿಗಳನ್ನು ಹಿಡಿದುಕೊಂಡು ರಸ್ತೆ ದುರಸ್ತಿ ಮಾಡಲು ಹೊರಟ್ಟಿದ್ದಾರೆ.
ಈ ಕುರಿತು ಪಬ್ಲಿಕ್ ಇಂಪಾಕ್ಟ್ ವರದಿ ಮಾಡಿದ್ದು, ನೊಂದ ಗ್ರಾಮದ ಯುವತಿ ಅನುಷಾ ಆಚಾರ್ಯ ಮಾತನಾಡಿ ಕಡಿದಾಳು ಗ್ರಾಮವನ್ನು ಏನೂ ಅಭುವೃದ್ಧಿ ಮಾಡಲಿಲ್ಲ. ರಾಜಕಾರಿಣಿಗಳ ಹಾಗೂ ಅಧಿಕಾರಿಗಳ ನಿರ್ಲಕ್ಷತನಕ್ಕೆ ಬೇಸರ ವ್ಯಕ್ತ ಪಡಿಸಿದ್ದು ಗ್ರಾಮದ ರಸ್ತೆ ವ್ಯವಸ್ಥೆ ತುಂಬಾ ಹದಗೆಟ್ಟಿದ್ದು ಪ್ರತಿ ದಿನ ಕೆರೆಯಲ್ಲಿ ವಾಹನ ಓಡಾಡಿಸುತ್ತಿರುವಂತೆ ಬಾಸವಾಗುತ್ತಿದೆ. ದೊಡ್ಡ ದೊಡ್ಡ ಗುಂಡಿಗಳು ರಸ್ತೆಯಲ್ಲಿದ್ದು ವಾಹನ ಓಡಿಸಲು ಭಯ ಆಗುತ್ತಿದ್ದು ಪ್ರತಿ ದಿನ ಜೀವ ಕೈಯಲ್ಲಿಡಿದುಕೊಂಡು ಓಡಾಡುವ ಹಾಗಿದೆ ಎಂದರು

ಹಾಗೆ ರಸ್ತೆಯಲ್ಲಿರುವ ನೀರು ಮನೆಗೆ ನುಗುತ್ತಿದ್ದು ಪಾಚಿ ಕಟ್ಟಿದ್ದರಿಂದ ತಿರುಗಾಡಲು ಆಗದೆ ಕಷ್ಟ ಪಡಬೇಕಾದ ವ್ಯವಸ್ಥೆ ನಿರ್ಮಾಣ ಆಗಿದ್ದು ಶಾಸಕರು.. ಹಾಗೂ ಅಧಿಕಾರಿಗಳು ಕೂಡಲೇ ಎಚ್ಚೆತ್ತು ಕೊಳ್ಳಬೇಕು ಆಕ್ರೋಶ ವ್ಯಕ್ತ ಪಡಿಸಿದರು.
ಆ ನಂತರ ಅಜಿತ್ ಜಯರಾಮ್ ಗೌಡ ಮಾತನಾಡಿ, ಚುನಾವಣೆ ಸಂದರ್ಭದಲ್ಲಿ ಮಾತ್ರ ಪೊಳ್ಳು ಭರವಸೆ ನೀಡುವುದನ್ನು ರಾಜಕಾರಣಿಗಳು ಕರಗತ ಮಾಡಿಕೊಂಡಿದ್ದಾರೆ, ಚುನಾವಣೆ ಮುಗಿದ ಮೇಲೂ ಅಷ್ಟೇ ಮುತುವರ್ಜಿ ವಹಿಸಬೇಕು. ಬೇಸಿಗೆ ಸಮಯದಲ್ಲಿ ಕುಡಿಯುವ ನೀರು, ವಿದ್ಯುತ್, ಮುಂತಾದ ಮೂಲಭೂತ ಸೌಕರ್ಯ ಕಲ್ಪಿಸಿಕೊಡುವುದು ಅಧಿಕಾರಿಗಳು, ಶಾಸಕರುಗಳ ಕರ್ತವ್ಯ ಆದರೆ ನಿಮ್ಮಗಳ ಕರ್ತವ್ಯ ಪಾಲನೆ ಎಷ್ಟರ ಮಟ್ಟಿಗೆ ಪಾಲಿಸುತ್ತಿದ್ದೀರಿ ಎಂದು ಪ್ರಶ್ನಿಸಿದರು.
ಹಾಗೆ ರಸ್ತೆಯ ಕೆಲ ಭಾಗದಲ್ಲಿ ಬಾಕ್ಸ್ ಚರಂಡಿ ಮತ್ತು ಮೋರಿ ವ್ಯವಸ್ಥೆ ಆಗಬೇಕಿದೆ ರಸ್ತೆಯಲ್ಲಿ ಯಮರಾಯ ಬಲಿ ಪಡೆಯಲು ಕಾದು ಕುಳಿತಿರುವಂತೆ ಆಗುತ್ತಿದೆ ಹಾಗೆ ಅನಾಹುತ ಸಂಭವಿಸುವ ಮುಂಚೆ ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸುವಂತೆ ಒತ್ತಾಯಿಸಿದರು.
ಅದಾದ ಬಳಿಕ ಕಾಲೇಜು ವಿದ್ಯಾರ್ಥಿ ಪ್ರತೀಕ್ ಗೌಡ ಮಾತನಾಡಿ, ಗುಂಡಿಗಳಿಂದಾಗಿ ಸಮಯಕ್ಕೆ ಸರಿಯಾಗಿ ಕಾಲೇಜಿಗೆ ತೆರಳಲು ಸಾಧ್ಯವಾಗುತ್ತಿಲ್ಲ. ಅನೇಕ ಬಾರಿ ಪ್ರಮುಖ ಕ್ಲಾಸ್ ಅಟೆಂಡ್ ಆಗಲು ಸಾಧ್ಯವಾಗದೆ ವಿದ್ಯಾಭ್ಯಾಸಕ್ಕೆ ತೊಂದರೆ ಆಗುತ್ತಿದೆ ಎಂದು ತಮ್ಮ ಅಳನನ್ನು ತೋಡಿಕೊಂಡರು.
ಈ ವೇಳೆ ಮಂಜುನಾಥ್, ದಿನೇಶ್, ಸುನೀಲ್, ಬ್ರಿಜೇಶ್ ಗೌಡ, ಪ್ರಸನ್ನಗೌಡ, ಸಂಜಯ್ ಗೌಡ. ಪ್ರತಾಪ್ ಪಟೇಲ್ ಸೇರಿದಂತೆ ಹಲವು ಗ್ರಾಮಸ್ಥರು ನೆರೆದಿದ್ದರು.