ಮೂಡಿಗೆರೆ : ರಾಜ್ಯದ ಪ್ರತಿಷ್ಠಿತ ಡಿಜಿಟಲ್ ಮಾಧ್ಯಮ ಪಬ್ಲಿಕ್ ಇಂಪ್ಯಾಕ್ಟ್ ಪ್ರಸ್ತುತಪಡಿಸುತ್ತಿರುವ ಕೆಸರುಗದ್ದೆ ಕ್ರೀಡಾಕೂಟ ಸೀಸನ್-2ಗೆ ಕ್ಷಣಗಣನೆ ಶುರುವಾಗಿದೆ. ಪೂರ್ಣಚಂದ್ರ ತೇಜಸ್ವಿಯರ ತವರೂರು ಮೂಡಿಗೆರೆಯ ಬಡವನದಿಣ್ಣೆಯಲ್ಲಿ ಸೊಗಸಾದ ಅಖಾಡ ಸಜ್ಜಾಗಿದ್ದು, ನಿಮ್ಮ ಬರುವಿಕೆಗಾಗಿ ನಾವು ಕಾಯುತ್ತಿದ್ದೇವೆ.
ಸೆಪ್ಟೆಂಬರ್ 29ರಂದು ಬೆಳಗ್ಗೆ 7 ಗಂಟೆಯಿಂದ ವಿವಿಧ ಕ್ರೀಡಾ ಸ್ಪರ್ಧೆಗಳು ನಡೆಯಲಿದೆ. ಪುರುಷರ ವಿಭಾಗದಲ್ಲಿ ರಾಜ್ಯ ಹಾಗೂ ಜಿಲ್ಲಾ ಮಟ್ಟದ ಹಗ್ಗಜಗ್ಗಾಟ, ವಾಲಿಬಾಲ್, ಜಿಲ್ಲಾ ಮಟ್ಟದಲ್ಲಿ ಮಹಿಳೆಯರ ವಿಭಾಗದ ಹಗ್ಗಜಗ್ಗಾಟ, ಥ್ರೋಬಾಲ್, ವಿವಿಧ ವಿಭಾಗದ ಕೆಸರುಗದ್ದೆ ಓಟ, ಸೀಸನ್ 2ನ ವಿಶೇಷ ಆಕರ್ಷಣೆ ದಂಪತಿ ಓಟ, 60 ವರ್ಷ ಮೇಲ್ಪಟ್ಟ ಹಿರಿಯರ ಓಟ ಹೀಗೆ ಹಲವು ಅತ್ಯಾಕರ್ಷಕ ಸ್ಪರ್ಧೆಗಾಗಿ ಬಡವನದಿಣ್ಣೆಯ ಗದ್ದೆ ರೆಡಿಯಾಗಿದ್ದಾರೆ.

ವೇದಿಕೆ ಕಾರ್ಯಕ್ರಮ
ಬೆಟ್ಟಗೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ದಿನೇಶ್ ಅಧ್ಯಕ್ಷತೆಯಲ್ಲಿ ವೇದಿಕೆ ಕಾರ್ಯಕ್ರಮ ನಡೆಯಲಿದೆ. ಅವಧೂತ ಶ್ರೀ ವಿನಯ್ ಗುರೂಜಿ ಆಶೀರ್ವಚನ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್, ಸಂಸದ ಕೋಟಾ ಶ್ರೀನಿವಾಸ ಪೂಜಾರಿ, ಎಂಎಲ್ಸಿ ಎಂ.ಕೆ. ಪ್ರಾಣೇಶ್, ಶಾಸಕರಾದ ನಯನಾ ಮೋಟಮ್ಮ, ಹೆಚ್.ಡಿ ತಮ್ಮಯ್ಯ, ಟಿ.ಡಿ. ರಾಜೇಗೌಡ, ಕೆ.ಎಸ್. ಆನಂದ್, ಜಿ.ಹೆಚ್. ಶ್ರೀನಿವಾಸ್, ಸಿಮೆಂಟ್ ಮಂಜು, ಎಂಎಲ್ಸಿಗಳಾದ ಸಿ.ಟಿ ರವಿ, ಎಸ್.ಎಲ್. ಭೋಜೇಗೌಡ, ಬಿ.ಬಿ. ನಿಂಗಯ್ಯ, ಮಾಜಿ ಸಚಿವರಾದ ಡಿ.ಎನ್. ಜೀವರಾಜ್, ಪ್ರಮೋದ್ ಮಧ್ವರಾಜ್, ಎಂ.ಪಿ. ಕುಮಾರಸ್ವಾಮಿ, ಭದ್ರಾ ಕಾಡಾ ನಿಗಮ ಅಧ್ಯಕ್ಷ ಅಂಶುಮಂತ್, ಕ.ರಾ.ಕೃಷಿ ಉತ್ಪನ್ನ ಸಂಸ್ಕರಣೆ & ರಫ್ತು ನಿಗಮ ಮಂಡಳಿ ಅಧ್ಯಕ್ಷ ಬಿ.ಹೆಚ್. ಹರೀಶ್, ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಸುಧಾಕರ್ ಶೆಟ್ಟಿ, ಚಿಕ್ಕಮಗಳೂರು ನಗರಸಭೆ ಅಧ್ಯಕ್ಷೆ ಸುಜಾತ ಶಿವಕುಮಾರ್, ಚಿಕ್ಕಮಗಳೂರು ನಯಾಜ್, ಎಐಸಿಸಿ ಕಾರ್ಯದರ್ಶಿ ಬಿ.ಎಂ. ಸಂದೀಪ್, ಬಿಜೆಪಿ ಜಿಲ್ಲಾಧ್ಯಕ್ಷ ದೇವರಾಜ್ ಶೆಟ್ಟಿ, ಜೆಡಿಎಸ್ ಜಿಲ್ಲಾಧ್ಯಕ್ಷ ರಂಜನ್ ಅಜಿತ್ ಕುಮಾರ್, ಮೂಡಿಗೆರೆ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಶ್ರೀಮತಿ ಗೀತಾ ರಂಜನ್ ಅಜಿತ್ ಕುಮಾರ್, ಮೂಡಿಗೆರೆ ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಬಿ.ಆರ್. ಬಾಲಕೃಷ್ಣ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಕೆ.ಸಿ. ರತನ್, ತಾಲೂಕು ಬಿಜೆಪಿ ಅಧ್ಯಕ್ಷ ಗಜೇಂದ್ರ ಟಿ.ಎಂ., ತಾಲೂಕು ಬಿಜೆಪಿ ಉಪಾಧ್ಯಕ್ಷ ಅನುಕುಮಾರ್, ತಾಲೂಕು ಕಾಂಗ್ರೆಸ್ ಅಧ್ಯಕ್ಷ ಸುರೇಂದ್ರ ಹೆಚ್.ಜಿ, ರಾಜ್ಯ ಬಿಎಸ್ಪಿ ಉಪಾಧ್ಯಕ್ಷ ಜಾಕೀರ್ ಹುಸೇನ್, ಕೆಂಪೇಗೌಡ ಒಕ್ಕಲಿಗರ ವೇದಿಕೆ ಅಧ್ಯಕ್ಷ ಕಡಿದಾಳ್ ಬ್ರಿಜೇಶ್, ಕೃಷಿ ಪತ್ತಿನ ಸಹಕಾರ ಸಂಘ ಅಧ್ಯಕ್ಷ ರಕ್ಷಿತ್ ಬಡವನದಿಣ್ಣೆ, ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಪ್ರವೀಣ್ ಬೆಟ್ಟಗೆರೆ, ಚಿತ್ರ ನಿರ್ಮಾಪಕ ರವಿ ರೈ, ಕಾಫಿ ಬೆಳೆಗಾರರು ಆನಂದ್ ಪ್ರಕಾಶ್, ಆರ್.ಪಿ. ಜ್ಯುವೆಲ್ಲರ್ಸ್ ಪ್ರಕಾಶ್, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಅಧ್ಯಕ್ಷ ಕೆ.ಹೆ.ಚ್. ವೇಣುಕುಮಾರ್, ಖ್ಯಾತ ವಕೀಲ, ಬಿಜೆಪಿ ಮುಖಂಡ ದೇವರಾಜೇಗೌಡ, ಖ್ಯಾತ ವಕೀಲರು, ಕಾಂಗ್ರೆಸ್ ಮುಖಂಡ ಸುಧೀರ್ ಕುಮಾರ್ ಮುರೊಳ್ಳಿ ಮುಂತಾದವರಿರಲಿದ್ದಾರೆ.
ವಿಶೇಷ ಆಹ್ವಾನಿತರಾಗಿ
ಚಿತ್ರ ನಟ ಪ್ರಥಮ್, ನಟಿ ನಿಖಿತಾ ಸ್ವಾಮಿ, ರಿಯಾಲಿಟಿ ಶೋ ಸ್ಟಾರ್ ಕಿಶನ್ ಬಿಳಗಲಿ, ಜಿಲ್ಲಾಧಿಕಾರಿ ಮೀನಾ ನಾಗರಾಜ್, ಜಿಪಂ ಸಿಇಒ ಕೀರ್ತನಾ, ಎಸ್ಪಿ ಜೀತೇಂದ್ರ ಕುಮಾರ್ ದಯಮ, ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ್ ತಗಡೂರು, ಭಾರತೀಯ ಕಾರ್ಯನಿರತ ಪತ್ರಕರ್ತರ ಒಕ್ಕೂಟದ ಕಾರ್ಯದರ್ಶಿ ಮದನ್ ಗೌಡ, ಚಿಕ್ಕಮಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ರಾಜೇಶ್, ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷೆ ಬಿ.ಆರ್. ಸವಿತಾ ರೈ ಮುಂತಾದವರು ನಮ್ಮೊಂದಿಗಿರಲಿದ್ದಾರೆ.
ಸಮಾರೋಪ ಸಮಾರಂಭ
ಸಂಜೆ 6 ಗಂಟೆಯಿಂದ ಸಮಾರೋಪ ಸಮಾರಂಭ ಹಾಗೂ ಬಹುಮಾನ ವಿತರಣಾ ಕಾರ್ಯಕ್ರಮ ಜರುಗಲಿದೆ. ಲಕ್ಕಿ ಡಿಪ್ ಡ್ರಾ, ಸಾಧಕರಿಗೆ ಸನ್ಮಾನ, ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ, ಬಳಿಕ ಸಾಂಸ್ಕೃತಿಕ ನೃತ್ಯ ವೈಭವವಿರಲಿದೆ.
ಆಟೋಟ, ಗೆಲುವು, ಬಹುಮಾನ ಒಂದು ಭಾಗವಷ್ಟೇ. ಅದರಾಚೆಗೆ ಸಂಭ್ರಮಿಸುವ ಮುಕ್ತ ಮನಸ್ಸಿನೊಂದಿಗೆ ನಾವೆಲ್ಲರೂ ಭಾಗಿಯಾಗೋಣ. ಭಾನುವಾರ ಪೂರ್ತಿ ಕೆಸರುಗದ್ದೆಯಲ್ಲಿ ಆಡಿ, ನಲಿದು ಮಿಂದೇಳೋಣ. ನಿಮ್ಮೆಲ್ಲರನ್ನೂ ಪಬ್ಲಿಕ್ ಇಂಪ್ಯಾಕ್ಟ್ ಬಳಗ ಪ್ರೀತಿಯಿಂದ ಆಹ್ವಾನಿಸುತ್ತಿದ್ದೇವೆ.




