ಚಿಕ್ಕಮಗಳೂರು: ತೀವ್ರ ಮಳೆಯಿಂದ ಕೆರೆ ಒಡೆದು ಕಾಫಿ ತೋಟ ಜಲಾವಥಗೊಂಡಿರುವ ಘಟನೆ ಖಾಂಡ್ಯ ಸಮೀಪದ ಹೊನ್ನೆಕೊಪ್ಪ ಗ್ರಾಮದಲ್ಲಿ ನಡೆದಿದೆ.
ಕೆರೆ ಒಡೆದ ಪರಿಣಾಮ ಸುಮಾರು ಒಂದೂವರೆ ಎಕರೆ ಕಾಫಿ ತೋಟ ಜಲಾವೃತಗೊಂಡಿದೆ. ಗ್ರಾಮದ ಚಂದ್ರು ಎಂಬುವರಿಗೆ ಸೇರಿದ ಕಾಫಿತೋಟ.

ಮಂಗಳವಾರ ಸಂಜೆ ತೋಟಕ್ಕೆ ಹೋದಾಗ ಏನೂ ಆಗಿರಲಿಲ್ಲ ಆದರೆ ಇಂದು ಬೆಳಗ್ಗೆ ತೋಟಕ್ಕೆ ಹೋದಾಗ ಕೆರೆ ಒಡೆದು ಕಾಫಿ ತೋಟ ನೀರಿನಲ್ಲಿ ಮುಳುಗಿ ಹೋಗಿದೆ. ನೀರು ಹೊಡೆದ ರಭಸಕ್ಕೆ ದೊಡ್ಡ ಗಾತ್ರದ ಕಲ್ಲುಗಳು ನುಗ್ಗಿ ಕಾಫಿ ತೋಟ ಹಾಳಾಗಿದ್ದು ಹಾಗೆ ತೋಟಕ್ಕೆ , ಕುಡಿಯುವ ನೀರಿಗಾಗಿ ಕೆರೆ ತೋಡಿಸಿದ್ದ ಚಂದ್ರ ಆದರೆ ಕೆರೆ ತುಂಬಿ ನೀರು ಹೋಗುವ ಜಾಗಕ್ಕೆ ಕಸ ತುಂಬಿದ್ದರಿಂದ ಕೆರೆ ಒಡೆದು ಈ ಪರಿಣಾಮ ಉಂಟಾಗಿದೆ.