Thursday, October 22, 2026
Homeಜಿಲ್ಲಾಸುದ್ದಿKoppa: ʼಓಟು ಬೇಡಿದವರ ಸ್ಮಾರಕ ಹೊಂಡಗಳಿವೆ, ನಿಧಾನವಾಗಿ ಚಲಿಸಿʼ : ರಸ್ತೆಯಲ್ಲಿನ ಗುಂಡಿಗಳ ಬಗ್ಗೆ ಮಲೆನಾಡಿಗರ...

Koppa: ʼಓಟು ಬೇಡಿದವರ ಸ್ಮಾರಕ ಹೊಂಡಗಳಿವೆ, ನಿಧಾನವಾಗಿ ಚಲಿಸಿʼ : ರಸ್ತೆಯಲ್ಲಿನ ಗುಂಡಿಗಳ ಬಗ್ಗೆ ಮಲೆನಾಡಿಗರ ತೀವ್ರ ಆಕ್ರೋಶ

Telegram Group
Join Now

ಕೊಪ್ಪ: ಸಾವಿಲ್ಲದ ಮನೆಯಿಂದ ಸಾಸಿವೆ ತಗೊಂಡು ಬಾ ಅನ್ನುವ ಮಾತಿನಂತೆ ಈಗ ಶೃಂಗೇರಿ ಕ್ಷೇತ್ರದಲ್ಲಿ ಹೊಂಡಗಳಿಲ್ಲದ ರಸ್ತೆ ನೋಡಿಕೊಂಡು ಬಾ ಅನ್ನುವ ಮಾತೇ ಹೆಚ್ಚಾಗಿದೆ.

ಹೌದು .. ಕೊಪ್ಪ ತಾಲೂಕಿನ ಭಂಡಿಗಂಡಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಹಾಲ್ಮೂತ್ತೂರು ಗ್ರಾಮದಲ್ಲಿ ವಿಶೇಷವಾದ ಬ್ಯಾನರ್ ಬಹಳ ಸದ್ದು ಮಾಡಿದೆ.

“ನಿಧಾನವಾಗಿ ಎಚ್ಚರಿಕೆಯಿಂದ ಸಾಗಿರಿ. ಓಟು ಬೇಡಿದವರ ಸ್ಮಾರಕ ಹೊಂಡಗಳಿವೆ.” ಎಂದು ಗ್ರಾಮಸ್ಥರು ಆಕ್ರೋಶವನ್ನ ಬೇಸರದಿಂದ ತೋರಿದಂತಿದೆ.

ಹಡ್ಲುಕಟ್ಟೆ, ಹರಳುಗೊಡಿಗೆ,ಕಾಗಿನಗೊಳ್ಳಿ,ಬಾಳ್ಮಗ್ಗಿ,ಹಾಲ್ಮೂತ್ತೂರು ಸಂಪರ್ಕಿಸುವ ರಸ್ತೆ ಇದಾಗಿದ್ದು ಹೊಂಡ ಗುಂಡಿಗಳಿಂದ ಕೂಡಿದ್ದು ಓಡಾಡಲು ಗ್ರಾಮಸ್ಥರು ನಿತ್ಯ ಹರಸಾಹಸ ಪಡುತ್ತಿದ್ದಾರೆ.

ಶೃಂಗೇರಿ ಕ್ಷೇತ್ರದಲ್ಲಿ ಈ ರೀತಿಯ ಬ್ಯಾನರ್ ಗಳು ಹೊಸದೇನಲ್ಲ.

ಈ ಹಿಂದೆ ನಿಧಾನವಾಗಿ ಚಲಿಸಿ ನಮ್ಮೂರಲ್ಲಿ ಸುಸಜ್ಜಿತ ಆಸ್ಪತ್ರೆಗಳಿಲ್ಲ, ಎಂಬ ಬ್ಯಾನರ್ ಅಭಿಯಾನ ನಡೆದಿತ್ತು. ಹೀಗೆ ಹಲವು ರೀತಿಯ ಬ್ಯಾನರ್ ಗಳನ್ನು ಹಾಕುವ ಮೂಲಕ ಜನ ಆಕ್ರೋಶ ವ್ಯಕ್ತಪಡಿಸಿದ್ದರು.

ಶೃಂಗೇರಿ ಕ್ಷೇತ್ರದಾದ್ಯಂತ ಹೊಂಡಗುಂಡಿಗಳೇ ಬಿದ್ದಿರುವ ರಸ್ತೆಗಳಿಗೆ ಯಾವ ಮುಕ್ತಿ ಸಿಗುತ್ತದೋ ಎಂಬುದು ಜನ ಪ್ರತಿನಿಧಿಗಳಿಗೆ ತಿಳಿದಿದೆ. ಇನ್ನೂ ಚುನಾವಣೆ ಸಮಯದಲ್ಲಿ ನಮ್ ಪಕ್ಷದವರು, ನಮ್ ಜಾತಿಯವರು, ನಮ್ ನೆಂಟ್ರು, ನಮ್ ಅಣ್ಣ, ನಮ್ ತಮ್ಮ ಇವ್ರಿಗೆ ಓಟು ಕೊಡಿ ನಾನು ನಮ್ಮೂರು ರೋಡು ಮಾಡಿಸ್ತೀನಿ ಅಂತ ಓಟು ಕೇಳಿದ ಮುಖಂಡರು ಕೂಡ ಜವಾಬ್ದಾರಿ ಹೊತ್ತು ರಸ್ತೆ ಸರಿ ಪಡಿಸಿಕೊಡಬೇಕಿದೆ.

ವರದಿ: ಶಶಿ ಬೆತ್ತದಕೊಳಲು

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!