Saturday, February 14, 2026
Homeಜಿಲ್ಲಾಸುದ್ದಿಕೊಪ್ಪ: ವಿದ್ಯುತ್ ಲಿಂಕ್ ಲೈನ್ʼಗಾಗಿ ಕಲ್ಲುಗುಡ್ಡೆ ಗ್ರಾಮಸ್ಥರ ಮನವಿ

ಕೊಪ್ಪ: ವಿದ್ಯುತ್ ಲಿಂಕ್ ಲೈನ್ʼಗಾಗಿ ಕಲ್ಲುಗುಡ್ಡೆ ಗ್ರಾಮಸ್ಥರ ಮನವಿ

ಚಿಕ್ಕಮಗಳೂರು: ಕೊಪ್ಪ ತಾಲೂಕಿನ ಕಲ್ಲುಗುಡ್ಡೆ ಗ್ರಾಮದ ಗ್ರಾಮಸ್ಥರು ನೇರಂಕಿಯಿಂದ ನೆಲ್ಲಿಹಡ್ಲು ಹಾಗೂ ನೇರಳಕೊಡಿಗೆಯಿಂದ ಗಣಪತಿಗಟ್ಟೆ ಗ್ರಾಮಗಳಿಗೆ 11 ಕೆ.ವಿ ವಿದ್ಯುತ್ ಲಿಂಕ್ ಲೈನ್ ಹಾಕಿಸಿಕೊಡಿ ಎಂದು ಅತ್ತಿಕೊಡಿಗೆ ಗ್ರಾಮ ಪಂಚಾಯತಿಗೆ ಅರ್ಜಿ ಸಲ್ಲಿಸಿದ್ದಾರೆ.

ಕಲ್ಲುಗುಡ್ಡೆ ಗ್ರಾಮಕ್ಕೆ ಬಂದಿರುವ ವಿದ್ಯುತ್ ಮಾರ್ಗವೂ ಕೆಲಕಡೆಗಳಲ್ಲಿ ಅರಣ್ಯದ ಮೂಲಕ ಬಂದಿದ್ದು ಅದರಲ್ಲೂ ಮಳೆಗಾಲದಲ್ಲಿ ಪದೇ ಪದೇ ಮರಗಳು ಬಿದ್ದು ವಾರಗಟ್ಟಲೇ ವಿದ್ಯುತ್ ಪೂರೈಕೆ ಇಲ್ಲದೆ ಜನ ಪರದಾಡುವ ಸ್ಥಿತಿ ಪ್ರತಿ ಮಳೆಗಾಲದಲ್ಲೂ ಎದುರಾಗುತ್ತಿದ್ದು, ಮತ್ತು ವಿದ್ಯುತ್ ಮಾರ್ಗವೂ ಅರಣ್ಯದ ಒಳಗಿದ್ದು ತಕ್ಷಣ ದುರಸ್ಥಿ ಮಾಡುವುದು ಕಷ್ಟದ ಕೆಲಸವಾಗಿದೆ ಎಂದು ಗ್ರಾಮಸ್ಥರು ಪಂಚಾಯತಿಗೆ ತಿಳಿಸಿದ್ದಾರೆ.

ನೇರಂಕಿಯಿಂದ ನೆಲ್ಲಿಹಡ್ಲುವರೆಗೆ ಮತ್ತು ನೇರಳಕೊಡಿಗೆಯಿಂದ ಗಣಪತಿಕಟ್ಟೆಗೆ 11 ಕೆ.ವಿ ವಿದ್ಯುತ್ ಲಿಂಕ್ ಮಾಡುವುದರಿಂದ ಮುಂದೆ ಗ್ರಾಮಕ್ಕೆ ಸಮರ್ಪಕ ವಿದ್ಯುತ್ ಪೂರೈಕೆಯಾಗಲಿದೆ. ಈಗಾಗಲೇ ಬಸರೀಕಟ್ಟೆಯಲ್ಲಿ ಕಳಸ ಮೆಸ್ಕಾಂ ನಿಂದ ಕೊಪ್ಪ ಮೆಸ್ಕಾಂ ಲಿಂಕ್ ಲೈನ್ ಮಾಡಲು ಅನುಮೋದನೆ ಸಿಕ್ಕಿದ್ದು ಮುಂದೆ ಕಲ್ಲುಗುಡ್ಡೆ ಗ್ರಾಮಕ್ಕೂ ಈ ಲಿಂಕ್ ನಿಂದ ಅನುಕೂಲವಾಗುವ ಭರವಸೆಯಿದೆ ಎಂದು ಗ್ರಾಮಸ್ಥರು ಪಬ್ಲಿಕ್ ಇಂಪ್ಯಾಕ್ಟ್ ಗೆ ತಿಳಿಸಿದರು.

ಕಲ್ಲುಗುಡ್ಡೆ ಗ್ರಾಮದವರಿಂದ ಅರ್ಜಿ ಸ್ವೀಕರಿಸಿ,
ಅತ್ತಿಕೊಡಿಗೆ ಗ್ರಾಮ ಪಂಚಾಯತಿಯವರು ಮೆಸ್ಕಾಂ ಗೆ ಲಿಂಕ್ ಲೈನ್ ಮಾಡಿ ಅನುಕೂಲ ಮಾಡಿಕೊಡುವಂತೆ ಪತ್ರ ಬರೆದು ಮನವಿ ಮಾಡಿದ್ದಾರೆ.

ವರದಿ: ಶಶಿ ಬೆತ್ತದಕೊಳಲು

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!