Tuesday, February 10, 2026
Homeಕ್ರೈಮ್ಕೊಪ್ಪ: ಹಾಡಹಗಲೇ ಮಹಿಳೆಯ ಸರ ಕದಿಯಲು ಯತ್ನ: ಯುವಕನಿಗೆ ಥಳಿತ!

ಕೊಪ್ಪ: ಹಾಡಹಗಲೇ ಮಹಿಳೆಯ ಸರ ಕದಿಯಲು ಯತ್ನ: ಯುವಕನಿಗೆ ಥಳಿತ!

ಚಿಕ್ಕಮಗಳೂರು : ಹಾಡಹಗಲೇ ಸ್ಕೂಟಿಯಲ್ಲಿ ಹೋಗುತ್ತಿದ್ದ ಮಹಿಳೆಯ ಸರ ಕದಿಯಲು ಯತ್ನಿಸಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ಮಾವಿನಕಟ್ಟೆ ಗ್ರಾಮದಲ್ಲಿ ನಡೆದಿದೆ.

ಹೌದು .. ಬೈಕಿನಲ್ಲಿ ಹೋಗುವಾಗಲೇ ರೈಡಿಂಗ್ ನಲ್ಲೇ ಮಹಿಳೆ ಕುತ್ತಿಗೆಗೆ ಕೈಹಾಕಿ ಸರ ಕದಿಯಲು ನೋಡುತ್ತಿದ್ದ ವ್ಯಕ್ತಿ ಈ ವೇಳೆ ಸ್ಥಳೀಯರು ಒಟ್ಟಾಗುತ್ತಿದ್ದಂತೆ ಸ್ಥಳದಿಂದ ಯುವಕ ಕಾಲ್ಕಿತ್ತಿದ್ದಾನೆ.

ಶಿಲ್ಪಾ ಎಂಬ ಮಹಿಳೆಯ 30 ಗ್ರಾಂ ಸರವನ್ನು ಯುವಕ ಹೇಮಂತ್ ಕದಿಯಲು ಯತ್ನಿಸಿದವನು. ಸ್ಥಳೀಯರು, ಪೊಲೀಸರು ಮುಂದಿನ ಊರಿಗೆ ಮಾಹಿತಿ ನೀಡಿದ್ರಿಂದ ಸ್ಥಳಿಯರು ಎಚ್ಚೆತ್ತುಗೊಂಡ ಹಿನ್ನೆಲೆಯಲ್ಲಿ ಕುರುಕುಬಳ್ಳಿ ಗ್ರಾಮದ ಬಳಿ ಲಾಕ್ ಆಗಿದ್ದಾನೆ.

ಹರಿಹರಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡಿದ್ದು ಯುವಕನಿಗೆ ಲಾಠಿ ರುಚಿ ತೋರಿಸಲಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!