ಶೃಂಗೇರಿ: ಕ್ಷೇತ್ರದಲ್ಲಿ ನಿರಂತರ ಕಾಡನೆ ದಾಳಿಯಿಂದ ಆಗುತ್ತಿರುವ ಸಾವು ನೋವು ಖಂಡನೆ ಮಾಡುತ್ತಿದ್ದ ಪ್ರತಿಭಟನಾ ನಿರತರ ಮೇಲೆ ಹಲ್ಲೆ ಮಾಡಲು ಮುಂದಾದ ಶಾಸಕರ ದುರ್ವರ್ತನೆ ವಿರುದ್ಧ ಭಾರತೀಯ ಜನತಾ ಪಾರ್ಟಿ ಕೊಪ್ಪ ಮಂಡಲ ಅಧ್ಯಕ್ಷರಾದ ದಿನೇಶ್ ಹೊಸೂರ್ ಅವರು ತೀವ್ರವಾಗಿ ಖಂಡಿಸಿದ್ದಾರೆ.
ಹೌದು .. ಕಾಡಾನೆ ದಾಳಿಗೆ ಮಹಿಳೆ ಬಲಿ ಪ್ರಕರಣ ವಿಕೋಪಕ್ಕೆ ತಿರುಗಿದ್ದು ಪ್ರತಿಭಟನಾ ನಿರತರ ಮೇಲೆ ಲಾಠಿ ಪ್ರಹಾರ ಮತ್ತು ಬಂಧನವನ್ನ ಬಿಜೆಪಿ ಪಕ್ಷ ತೀವ್ರವಾಗಿ ವಿರೋಧ ಮಾಡುತ್ತಿದೆ.
ಕಳೆದ ಒಂದು ವಾರದ ಮಧ್ಯದಲ್ಲಿ ಆನೆ ತುಳಿತಕ್ಕೆ ಬಲಿಯಾದ ಎರಡನೇ ಪ್ರಕರಣ ಇದಾಗಿದ್ದು ಇದರಿಂದ ಕೆರಳಿದ ಸ್ಥಳೀಯರು ಬಾಳೆಹೊನ್ನೂರಿನಲ್ಲಿ ಪ್ರತಿಭಟನೆ ನಡೆಸಿದ್ದಾರೆ.
ಈ ಹಂತದಲ್ಲಿ ಅಧಿಕಾರಿಗಳು ಮತ್ತು ಪ್ರತಿಭಟನಾ ನಿರತರ ಮಧ್ಯೆ ಮಾತಿನ ಚಕಮಕಿ ನಡೆದಿದ್ದು , ಇದು ಒಂದು ಹಂತದಲ್ಲಿ ವಿಕೋಪಕ್ಕೆ ತೆರಳಿ ಕೆಲವರು ಕಲ್ಲು ತೂರಾಟ ನಡೆಸಿದ್ದಾರೆ
ಹೀಗಾಗಿ ಸೋಮವಾರ ಶೃಂಗೇರಿ ಕ್ಷೇತ್ರ ಮಲೆನಾಡು ನಾಗರೀಕ ಹಿತರಕ್ಷಣ ಸಮಿತಿಯವರು ಶೃಂಗೇರಿ ಕ್ಷೇತ್ರ ಬಂದ್ ಗೆ ಕರೆ ನೀಡಿದ್ದಾರೆ.
ಹಾಗೆ ಭಾರತೀಯ ಜನತಾ ಪಾರ್ಟಿಯ ಸಂಪೂರ್ಣ ಬೆಂಬಲವನ್ನು ವ್ಯಕ್ತಪಡಿಸುತ್ತಾ ನಾಳೆ ಶೃಂಗೇರಿ ಕ್ಷೇತ್ರ ಬಂದ್ ಯಶಸ್ವಿಗೊಳಿಸಿ ನಿಮ್ಮೆಲ್ಲರ ಸಹಕಾರ ನೀಡಿ ಎಂದು ಮನವಿ ಮಾಡಿದ್ದಾರೆ.
ವರದಿ: ಶಶಿ ಬೆತ್ತದಕೊಳಲು
