ಕೊಪ್ಪ:ಕಾಫಿ ಮಂಡಳಿ ವತಿಯಿಂದ “ಇಂಡಿಯಾ ಕಾಫಿ ಆ್ಯಪ್” (India Coffee APP) ಬಿಡುಗಡೆಗೊಳಿಸಿದ್ದು ಮುಂಬರುವ ದಿನಗಳಲ್ಲಿ ಕಾಫಿ ಮಂಡಳಿಯ ಯಾವುದೇ ಸೌಲಭ್ಯ, ಸವಲತ್ತುಗಳನ್ನು ಸರಳವಾಗಿ ಸುಲಭವಾಗಿ ಪಡೆಯಲು ಇದೊಂದು ಸದವಕಾಶ ಮಾಡಿಕೊಡಲಾಗುವುದು.

ಹೀಗಾಗಿ ಸೆ.24 ಬುಧವಾರ ನಾಳೆ ಬೆಳಗ್ಗೆ 10.30 ಗಂಟೆಗೆ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಅತ್ತಿಕುಡಿಗೆ ಗ್ರಾಮಪಂಚಾಯತಿಯಲ್ಲಿ ಇಂಡಿಯಾ ಕಾಫಿ ಆಪ್ (India Coffee APP) ನೋಂದಣಿ ಅಭಿಯಾನವನ್ನು ಹಮ್ಮಿಕೊಂಡಿದ್ದು ಎಲ್ಲಾ ಕಾಫಿ ಬೆಳೆಗಾರರು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ಈ ಮೂಲಕ ಪ್ರಕಟಣೆ ಹೊರಡಿಸಲಾಗಿದೆ.
ಹಾಗೆ ಯೂರೋಪಿಯನ್ ಒಕ್ಕೂಟ ರಾಷ್ಟ್ರಗಳಿಗೆ ಕಾಫಿಯನ್ನು ರಪ್ತು/ಮಾರಾಟ ಮಾಡಲು ಕಾಫಿ ಬೆಳೆಗಾರರು ಇಂಡಿಯಾ ಕಾಫಿ ಆಪ್ನಲ್ಲಿ (India Coffee APP) ನೋಂದಾಯಿಸಿಕೊಳ್ಳುವುದು ಖಡ್ಡಾಯವಾಗಿರುತ್ತದೆ ಎಂದು ತಿಳಿಸಿರುತ್ತದೆ.
ಅಗತ್ಯವಿರುವ ದಾಖಲೆಗಳೆಂದರೆ ಆಧಾರ್ ಕಾರ್ಡ್ ಪ್ರತಿ ಮತ್ತು ಪಹಣಿ(RTC’s)ಗಳನ್ನು ತರತಕ್ಕದು.
ಕಾರ್ಯಾಗಾರದಲ್ಲಿ India Coffee App ನ ಇತರೆ ಉಪಯೋಗಗಳನ್ನು ಸ್ಥಳದಲ್ಲಿ ತಮಗೆ ತಿಳಿಸಲಾಗುವುದು. ಆದ್ದರಿಂದ ಹೆಚ್ಚಿನ ಬೆಳೆಗಾರರು ಅಭಿಯಾನದಲ್ಲಿ ಪಾಲ್ಗೊಳ್ಳಬೇಕೆಂದು ಮನವಿ ಮಾಡಿಕೊಳ್ಳಲಾಗಿದೆ.
ವರದಿ: ಶಶಿ ಬೆತ್ತದಕೊಳಲು!
