ಜಯಪುರ: ಕೊಪ್ಪ ತಾಲೂಕಿನ ಗುಡ್ಡೆತೋಟ ಗ್ರಾಮ ಪಂಚಾಯತಿ ವ್ಯಾಪ್ತಿಯ ಬೈರೆದೇವರು ಗ್ರಾಮದಲ್ಲಿ ಇರುವ ಹುಲ್ಲಿನಗದ್ದೆ ಸೇತುವೆ ಬೇಗಾನೆ ರಾಮಯ್ಯ ಅವರ ಕಾಲದಲ್ಲಿ ನಿರ್ಮಿತವಾದ ಸೇತುವೆ ಆಗ ಇಲ್ಲಿ ಪೈಪಿನ ಸೇತುವೆ ಅಗತ್ಯ ಇರಲಿಲ್ಲ ಇಲ್ಲಿಗೆ ಪಿಲ್ಲರ್ ಸೇತುವೆ ಆಗ್ಬೇಕು ಅಂತ ಇತ್ತು ಆದರೆ ಅನಿವಾರ್ಯವಾಗಿ ಆ ಕಾಲದಲ್ಲಿ ಈ ಸೇತುವೆ ಆಗಿದೆ ಎಂದರು.
ಆ ಕಾಲದಲ್ಲಿ ಈ ಸೇತುವೆಯೂ ಆಗದೆ ಇದ್ದಿದ್ದರೆ ಬಹಳ ಕಷ್ಟವಿತ್ತು. ಈಗ ಮಳೆಗಾಲದಲ್ಲಿ ಆಗಾಗ ಈ ಸೇತುವೆಗೆ ಕಸ ಕಡ್ಡಿಗಳು ಮರದ ದಿಮ್ಮಿಗಳು ಕೂತು ಸೇತುವೆ ಮೇಲೆ ನೀರು ಬರೋದು ವಾಹನ ಸಂಚಾರ ಇಲ್ಲದೆ ಇರೋದು ನಂತರ ಸಿಲುಕಿರುವುದನ್ನೆಲ್ಲ ತೆರವುಗೊಳಿಸೋದು ಮಾಮೂಲಿ ಆಗಿದ್ದು ಮತ್ತು ಇದು ಗ್ರಾಮಸ್ಥರಿಗೂ ತಿಳಿದಿರುವ ವಿಷಯವೂ ಆಗಿದೆ. ಇಲ್ಲಿಗೆ ಪಿಲ್ಲರ್ ಸೇತುವೆಯೇ ಆಗ್ಬೇಕು ಸದ್ಯದಲ್ಲೇ ಆಗುತ್ತದೆ ಕೂಡ ಈ ಹಿಂದೆ ಅವಕಾಶ ಸಿಕ್ಕವರು ಮನಸ್ಸು ಮಾಡಿದ್ದರೆ ಮಾಡಬಹುದಿತ್ತು ಅವರು ಕೂಡ ಮಾಡಿಲ್ಲ ಎಂದು ಕಿಡಿ ಕಾರಿದರು.
ಮಂಗಳವಾರ ಒಬ್ಬರು ಬಿಜೆಪಿಯ ಪ್ರತಿಭಟನ ಸಭೆಯಲ್ಲಿ ಮೈಕ್ ಸಿಕ್ಕಿದೆ ಹಾಗಾಗಿ ಏನೋ ಒಂದು ಮಾತಾಡ್ಬೇಕು ಅಂತ ಹೇಳಿ ಈ ಸೇತುವೆಯ ಬಗ್ಗೆ ಮಾತನಾಡಿದ್ದಾರೆ ಅದು ಕೂಡ ಹೇಗೆಂದರೆ ಏಳು ವರ್ಷದಲ್ಲಿ ಕನಿಷ್ಠ ಪಕ್ಷ ಈ ಸೇತುವೆಗೆ ಒಂದು ಕೈಪಿಡಿಯನ್ನು ಈಗಿನ ಶಾಸಕರಿಗೆ ಮಾಡೋಕೆ ಆಗಿಲ್ಲ ಎಂದು ಒಬ್ಬ ಕಾಮನ್ ಸೆನ್ಸ್ ಇಲ್ಲದ ವ್ಯಕ್ತಿ ಮಾತ್ರ ಈ ಮಾತನ್ನು ಆಡೋಕೆ ಸಾಧ್ಯ. ಈ ರೀತಿ ಕಸ ಕಡ್ಡಿ ಮರದ ದಿಮ್ಮಿಗಳು ಸಿಕ್ಕಿ ಹಾಕಿಕೊಳ್ಳುವ ಸೇತುವೆಗೆ ಹೇಗೆ ಕೈಪಿಡಿ ಮಾಡೋಕೆ ಸಾಧ್ಯ? ಆಕಸ್ಮಾತ್ ಕೈಪಿಡಿ ಕಟ್ಟಿದ್ರೆ ಈ ರೀತಿ ಮಳೆಗಾಲದಲ್ಲಿ ಸಮಸ್ಯೆ ಆದ್ರೆ ಯಾರು ಹೊಣೆ? ಕೈಪಿಡಿ ಕಟ್ಟಿ ಅಕ್ಕಪಕ್ಕದ ಜಮೀನುಗಳಿಗೆ ನೀರು ನುಗ್ಗಿದ್ರೆ ಆ ಮೇಲೆ ಅದಕ್ಕೂ ಹೇಳ್ತೀರ? ತಾವು ಜ್ಞಾನವೂ ಇಲ್ಲದೆ ಮಾತನಾಡುವ ಅಗತ್ಯವಿಲ್ಲ ನಮ್ಮೂರಿನ ಬಗ್ಗೆ ನಮಗೆ ಗೊತ್ತಿದೆ!
ನಿಮಗೆ ಅನುಮಾನಗಳು ಇದ್ರೆ ನೇರ ನೇರ ಚರ್ಚೆಗೆ ಬನ್ನಿ. ಈ ಹಿಂದೆ ನಮ್ಮ ಪಂಚಾಯತಿಯಲ್ಲಿ ಏನೆಲ್ಲ ಕೆಲಸಗಳು ಆಗಿವೆ ಈಗ ನಾವು ಬಂದ ಮೇಲೆ ಏನೇನ್ ಕೆಲಸಗಳು ಆಗಿವೆ ಎಂದು ತಿಳಿದು ಮಾತಾಡಿ ಎಂದು ಹುಲ್ಲಿನಗದ್ದೆ ಸೇತುವೆಗೆ ಸಿಲುಕಿದ್ದ ಕಸ ಮರದ ದಿಮ್ಮಿಗಳನ್ನು ತೆರವು ಮಾಡುವ ಸಂಧರ್ಭದಲ್ಲಿ ಗುಡ್ಡೆತೋಟ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಪ್ರಶಾಂತ್ ಜಾಲ್ಮರ ನೇರ ಸವಾಲು ಎಸೆದರು.
ಇದೇ ವೇಳೆ ಕಾಂಗ್ರೆಸ್ ಯುವ ನಾಯಕ ಅಭಿಗೌಡ ಕಾರೊಳ್ಳಿ ಮಾತನಾಡುತ್ತ ಈ ರೋಡಿಗೆ ಮಣ್ಣು ಮತ್ತು ಸೇತುವೆಗೆ ಸಿಲುಕಿದ ಕಸಗಳನ್ನು ಸ್ವಂತ ಖರ್ಚಿನಲ್ಲಿ ಪ್ರಶಾಂತ್ ಜಾಲ್ಮರ ತೆಗೆಸಿದ್ದಾರೆ.
ಮಣಿಕಂಠನ್ ಕಂದಸ್ವಾಮಿ ಅವರೇ ಮೈಕ್ ಸಿಕ್ಕಿದೆ ಎಂದು ಏನೇನೋ ಮಾತಾಡ್ಬೇಡಿ.ನಿಮ್ಗೆ ಸಾಧ್ಯ ಆದ್ರೆ ಮತ್ತು ಅಷ್ಟೊಂದು ಕಾಳಜಿ ಇರುವ ನೀವು ಸಂಸದರ ಅಭಿವೃದ್ಧಿ ನಿಗಮದಿಂದ ಅನುದಾನ ತಂದು ನೀವೆ ನಿಂತು ಮಾಡ್ಸಿ. ಯಾಕೆ ನಿಮ್ಗೆ ಆಗಲ್ವ? ನಿಮ್ಗೂ ಮಾಡಿಸೋಕೆ ಆಗುತ್ತಲ್ವ? ಬೇಕಾದ್ರೆ ನೀವೆ ಮಾಡಿಸಿ ಹೆಮ್ಮೆಯಿಂದ ಹೇಳಿಕೊಳ್ಳಿ ಎಂದರು.
ಪಿಲ್ಲರ್ ಸೇತುವೆ ಆಗ್ಬೇಕು ಅನ್ನಿ ನಾವು ಬೆಂಬಲಿಸ್ತೀವಿ ಅದು ಬಿಟ್ಟು ಈ ಸೇತುವೆಗೆ ಕೈಪಿಡಿ ಹಾಕ್ಬೇಕು ಅಂತಿರಲ್ವ, ಈ ಥರ ಕಸ ಕಡ್ಡಿಗಳು ಮರದ ದಿಮ್ಮಿಗಳು ಕೂರುವ ಸೇತುವೆಗೆ ಕೈಪಿಡಿ ಮಾಡಿದ್ರೆ ಎಲ್ಲಿ ನಿಲ್ಲುತ್ತೆ ಎಂದು ಅವರು ಕಿಡಿಕಾರಿದರು.
ಅಲ್ಲ ಕಂಡ್ರೀ ರಾಜೇಗೌಡ್ರು ಅನುದಾನ ತಂದಿಲ್ಲ ಕೆಲ್ಸ ಮಾಡ್ತಿಲ್ಲ ಅಂತನೂ ಅಂತೀರಾ, ಅನುದಾನ ತರದೆ ಕೆಲಸವೂ ಮಾಡದೆ ಭ್ರಷ್ಟಾಚಾರ ಹೇಗೆ ಮಾಡಿದ್ರು ಈ ನಿಮ್ಮ ಮಾತಿಗೆ ಅರ್ಥ ಇದಿಯಾ ಎಂದು ಹೇಳಿದರು.
ಅಕ್ಟೋಬರ್ 31ನೇ ತಾರೀಖು 12 ಗಂಟೆಗೆ ಈ ಬಾಲಕ್ಕಿತೋಟ ರಸ್ತೆಯ ಕಾಮಗಾರಿಗೆ ಗುದ್ದಲಿಪೂಜೆ ಇದ್ದು, ಗ್ರಾಮಸ್ಥರು ಹಾಗೂ ಅದರಲ್ಲೂ ಬಿಜೆಪಿ ಪಕ್ಷದವರು ಹೆಚ್ಚಿನ ಸಂಖ್ಯೆಯಲ್ಲಿ ಬರುವಂತೆ ಕರೆಕೊಡಲಾಯಿತು.
ವರದಿ: ಶಶಿ ಬೆತ್ತದಕೊಳಲು
