Friday, February 20, 2026
Homeಕ್ರೈಮ್ಕೊಪ್ಪ: ತಾಲೂಕಿನ ಸಬ್ ರಿಜಿಸ್ಟರ್ ಕಚೇರಿಗೆ ವೃದ್ಧರು ಹೋಗಲು ಸಂಕಷ್ಟ: ನೆಲಮಹಡಿಗೆ ಸ್ಥಳಾಂತರಕ್ಕೆ ಆಗ್ರಹ!

ಕೊಪ್ಪ: ತಾಲೂಕಿನ ಸಬ್ ರಿಜಿಸ್ಟರ್ ಕಚೇರಿಗೆ ವೃದ್ಧರು ಹೋಗಲು ಸಂಕಷ್ಟ: ನೆಲಮಹಡಿಗೆ ಸ್ಥಳಾಂತರಕ್ಕೆ ಆಗ್ರಹ!

ಕೊಪ್ಪ: ಕೊಪ್ಪ ತಾಲೂಕು ಆಫೀಸಿನಲ್ಲಿ ಸಬ್ ರಿಜಿಸ್ಟರ್ ಆಫೀಸ್ ಮೇಲಿನ ಮಹಡಿಯಲ್ಲಿ ಇರುವುದರಿಂದ ಮೆಟ್ಟಿಲು ಹತ್ತಲು ಆಗದೆ ಇರುವ ವೃದ್ಧರು, ಅನಾರೋಗ್ಯದವರು ಪರದಾಡುವ ಸ್ಥಿತಿ ಎದುರಾಗಿದೆ.

ಮೇಲಂತಸ್ತಿನಲ್ಲಿ ಕಚೇರಿ ಇರುವುದರಿಂದ ವೃದ್ಧರು, ವಿಕಲಾಂಗರು ,ಮಹಿಳೆಯರು ತೆರಳಲು ತೀವ್ರ ತೊಂದರೆ ಎದುರಿಸಬೇಕಾಗಿದೆ. ಈ ಸಮಸ್ಯೆಯ ದೃಶ್ಯಗಳನ್ನು ದೂರಿನೊಂದಿಗೆ ಹಂಚಿಕೊಂಡು  ಸಾಮಾಜಿಕ ಮಾಧ್ಯಮಗಳಲ್ಲಿ ಹರಿಬಿಟ್ಟರೂ ‘ಸಂವೇದನ’ ಇಲ್ಲದ ಆಡಳಿತ ಕುರುಡಾಗಿ ವರ್ತಿಸಿದೆ ಎಂದು ಟೀಕಿಸಿದ್ದಾರೆ.

https://www.instagram.com/reel/DU5_WkjiYdu/?igsh=MThrc3diYnI5cWhrcQ==

ವೃದ್ಧರು ಅಥವಾ ಆನಾರೋಗ್ಯದವರನ್ನ ಸಬ್ ರಿಜಿಸ್ಟರ್ ಕಛೇರಿಗೆ ಕರೆದುಕೊಂಡು ಹೋಗಲು ಒಂದು ವೀಲ್ ಚೇರ್ ವ್ಯವಸ್ಥೆಯೂ ಇಲ್ಲದೆ ಹೊತ್ತುಕೊಂಡು ಹೋಗುವ ಪರಿಸ್ಥಿತಿ ಇದ್ದು ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತು ಸಬ್ ರಿಜಿಸ್ಟರ್ ಆಫೀಸನ್ನು ನೆಲ ಮಹಡಿಯಲ್ಲಿ ಮಾಡಿ ಜನರಿಗೆ ಅನುಕೂಲ ಮಾಡಿ ಕೊಡಬೇಕಾಗಿದೆ.

ವೃದ್ಧರು ಅನಾರೋಗ್ಯದವರು ದಿನ ನರಳುತ್ತ ಆಫೀಸ್ ತಲುಪುವ ಮಟ್ಟಿಗೆ ತಲುಪಿರುವುದು ತಾಲೂಕಿನ ಜನರ ಬೇಸರ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ.

ಇಲ್ಲಿಗೆ ಬರುವ ವೃದ್ದರು ತಮ್ಮನ್ನು ಮೇಲಿರೋ  ಕಚೇರಿಗೆ ಕರೆದುಕೊಂಡು ಹೋಗಲು ಯಾರಾದರೂ ಸಿಗುತ್ತಾರ ಎಂದು ಕಾಯುವ ಸ್ಥಿತಿ ಎದುರಾಗಿರುವುದು ಶೋಚನೀಯ. ಇನ್ನಾದರೂ ಸಮಸ್ಯೆ ಬಗ್ಗೆ ಹರಿಯುವುದೇ ಕಾದು ನೋಡಬೇಕು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!