ಕೊಪ್ಪ: ಶೃಂಗೇರಿ ಕ್ಷೇತ್ರದಲ್ಲಿ ರಸ್ತೆಗಳೆಲ್ಲ ಹಾಳಾಗಿ ಗುಂಡಿ ಬಿದ್ದು ಸಾರ್ವಜನಿಕರಿಗೆ ವಾಹನಗಳಿಗೆ ತಿರುಗಲು ತುಂಬಾ ಕಷ್ಟವಾಗಿದೆ. ಶೃಂಗೇರಿ ಕ್ಷೇತ್ರದಲ್ಲಿ ಜೀವರಾಜ್ ಇದ್ದ ಕಾಲದಲ್ಲಿ ಎಲ್ಲ ರಸ್ತೆಗಳು ಉತ್ತಮವಾಗಿ ಉತ್ತಮ ಗುಣಮಟ್ಟದಿಂದ ಕೂಡಿತ್ತು ಆದರೆ ಈಗ ಎರಡುವರೆ ವರ್ಷದಿಂದೀಚೆಗೆ ರಸ್ತೆಗಳು ಹಾಳಾಗಿದ್ದು ಅದನ್ನು ದುರಸ್ತಿ ಪಡಿಸಲು ಕಾಂಗ್ರೆಸ್ ಸರ್ಕಾರವಾಗಲಿ, ಶಾಸಕರುಗಳಾಗಲಿ ಮನಸ್ಸೇ ಮಾಡುತ್ತಿರಲಿಲ್ಲ ಇದನ್ನು ಅರಿತ ನಾವುಗಳೆಲ್ಲರೂ ಎಲ್ಲಾ ಕಡೆ ಗುಂಡಿ ಬಿದ್ದಲ್ಲಿ ಪ್ರತಿಭಟಿಸಿ ರಸ್ತೆ ಗುಂಡಿ ಮುಚ್ಚುವಂತೆ ಮನವಿ ಮಾಡಿದ್ದೆವು ಆಗ ಕಾಂಗ್ರೆಸ್ಸಿನ ಕೆಲವು ನಾಯಕರುಗಳು ಬಿಜೆಪಿಯವರು ಬಾಯಿ ಮುಚ್ಚಿ ನಾವು ಗುಂಡಿ ಮುಚ್ಚುತ್ತೇವೆ ಎಂದು ನಮ್ಮನ್ನು ತಾತ್ಸರಮಾನೋ ಭಾವದಿಂದ ಕಂಡಿದ್ದರು ಎಂದು ಕೊಪ್ಪ ರೈತ ಮೋರ್ಚಾ ಅಧ್ಯಕ್ಷ ಅರನೂರು ಸಂತೋಷ್ ತಿಳಿಸಿದ್ದಾರೆ.
ಸದ್ಯಕ್ಕೆ ಈಗ ಕ್ಷೇತ್ರದಲ್ಲಿ ರಸ್ತೆ ಗುಂಡಿ ಮುಚ್ಚುವ ಕಾರ್ಯ ಪ್ರಾರಂಭವಾದ ದಿನದಿಂದ ಕಾಮಗಾರಿಯೂ ಕಳಪೆಯಾಗಿದ್ದು ಅದನ್ನು ನಾನು ಖಂಡಿಸಿ ಅದರ ವಿಡಿಯೋವನ್ನು ಮಾಡಿ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿ ಅದನ್ನು ವೈರಲ್ ಮಾಡಿದ್ದರಿಂದ ಎಚ್ಚೆತ್ತುಕೊಂಡ ಕೆಲವು ಜನಪ್ರತಿನಿಧಿಗಳು ನಾಗರಿಕರು ಶಾಸಕರು ಉತ್ತಮ ಪ್ರಶಂಸೆಯನ್ನು ವ್ಯಕ್ತಪಡಿಸಿದ್ದರು ನಾಗರೀಕರ ತೆರಿಗೆ ಹಣದಲ್ಲಿ ಮಾಡುವ ಸರ್ಕಾರದ ಯಾವುದೇ ಕಾಮಗಾರಿಗಳಿದ್ದರೂ ನಮ್ಮ ಗಮನಕ್ಕೆ ತನ್ನಿ ಎಂದು ಶಾಸಕರು ಎಲ್ಲಾ ಸಭೆಗಳಲ್ಲಿ ಹೇಳುತ್ತಿದ್ದರು. ಆದರೆ ಮೊನ್ನೆ ಜಯಪುರದಲ್ಲಿ ನಡೆದ ಸಭೆಯಲ್ಲಿ ಶಾಸಕರ ಹಿಂಬಾಲಕರಾದ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷರಾದಂತ ಅನುಭವಿ ರಾಜಕಾರಣಿಯೊಬ್ಬರು ಇದನ್ನೇ ನೈತಿಕ ಪೊಲೀಸ್ ಗಿರಿ ಎಂದು ಆರೋಪ ಮಾಡುತ್ತಿದ್ದಾರೆ ಇಂತವರನ್ನು ಮಟ್ಟ ಹಾಕಬೇಕು ಎಂದು ಪೊಲೀಸ್ ಆರಕ್ಷಕ ಠಾಣೆಯ ಅಧಿಕಾರಿಗಳಿಗೆ ತಿಳಿಸುವ ಮೂಲಕ ಶಾಸಕರಿಂದ ಒತ್ತಡ ಹೇರಿ ನಮ್ಮನ್ನು ಮಟ್ಟ ಹಾಕುವ.. ಹಾಗೂ ಬೆದರಿಕೆ ಹಾಕುವ ರೀತಿಯಲ್ಲಿ ಮಾತನಾಡಿದ್ದಾರೆ ಇದು ಸಾರ್ವಜನಿಕ ವಲಯದಲ್ಲಿ ಚರ್ಚೆ ಆಗುತ್ತಿದ್ದು ಇಂತಹ ಹೇಳಿಕೆ ನಿಲ್ಲಿಸಿ ಎಂದು ಪತ್ರಿಕೆ ಮೂಲಕ ನಾವು ಇದನ್ನು ಖಂಡಿಸುತ್ತೇವೆ.
ಕ್ಷೇತ್ರದಲ್ಲಿ ರೈತರಿಗೆ ಈ ವರ್ಷದ ಮಳೆಯಿಂದ ತುಂಬಾ ಹಾನಿಯಾಗಿ ಬೆಳೆಗಳು ಅರ್ಧಕರ್ಧ ಕಾಫಿ ಅಡಿಕೆ ಎಲ್ಲವೂ ಉದುರಿ ನಾಶವಾಗಿದ್ದು ಸರ್ಕಾರದಿಂದ ಬೆಳೆ ಪರಿಹಾರ ಇದುವರೆಗೂ ರೈತರ ಕೈ ಸೇರಿಲ್ಲ. ಹಿಂದಿನ ಸರ್ಕಾರದಲ್ಲಿ ಯಡಿಯೂರಪ್ಪ ಹಾಗೂ ಬೊಮ್ಮಾಯಿ ಮುಖ್ಯಮಂತ್ರಿ ಆಗಿದ್ದಾಗ ಎಕರೆಗೆ 11000 ಹಾಗೂ 9000 ಸಾವಿರದ 5 ವರೆಗೆ ಕೂಡಲೇ ಪರಿಹಾರ ನೀಡಿದ್ದನ್ನು ಈ ಸಂದರ್ಭದಲ್ಲಿ ನೆನಪಿಸಬೇಕಾಗುತ್ತದೆ. ಯಾವುದೇ ರೀತಿಯ ಪರಿಹಾರ ಸರ್ಕಾರವನ್ನು ಕೇಳಿದರೆ ರಾಜ್ಯದ ಜನರಿಗೆ ಇದು ರೀತಿಯ ಭಾಗ್ಯಗಳನ್ನು ಕೊಟ್ಟಿದ್ದೇವೆ ಎಂದು ಯಾಮಾರಿಸುವ ಮೂಲಕ ಸುಳ್ಳು ಹೇಳುತ್ತಿರುವ ಕಾಂಗ್ರೆಸ್ ಸರ್ಕಾರಕ್ಕೆ ನುಡಿದಂತೆ ನಡೆದಿದ್ದೇವೆ ಎಂದು ಎಲ್ಲಾ ಊರುಗಳಲ್ಲಿ ಬ್ಯಾನರ್ಗಳನ್ನ ಹಾಕುವ ನೈತಿಕತೆ ಯೋಗ್ಯತೆಯೋಗ್ಯತೆ ಇಲ್ಲ ಎಂದು ಈ ಸಂದರ್ಭದಲ್ಲಿ ತಿಳಿಸುತ್ತಿದ್ದೇನೆ.
ಐದು ಭಾಗ್ಯಗಳನ್ನು ಜಾರಿಗೆ ತಂದಿದ್ದೇವೆ ಎಂದು ಹೇಳಿ ಅಲ್ಪಸಲ್ಪ ಜನರಿಗೆ ಕೊಟ್ಟು ಕೈ ತೊಳೆದುಕೊಂಡು ಇದರಲ್ಲಿ ತಾವೇ ಹಣವನ್ನು ದೋಚಿ ಸರ್ಕಾರದ ಖಜಾನೆಯನ್ನು ಖಾಲಿ ಮಾಡಿ ಈಗ ಮುಖ್ಯಮಂತ್ರಿ ಕುರ್ಚಿಯ ಕುಸ್ತಿಯಲ್ಲಿ ತೊಡಗಿರುವುದು ಖಂಡನೀಯ ಎಂದು ಕೊಪ್ಪ ರೈತ ಮೋರ್ಚಾ ಅಧ್ಯಕ್ಷ ಅರನೂರು ಸಂತೋಷ್ ತಿಳಿಸಿದ್ದಾರೆ.
ಜಯಪುರದ ಕೆಲವು ಸಾರ್ವಜನಿಕರು ಹಾಗೂ ನಾಗರಿಕರು ಇತ್ತೀಚೆಗಷ್ಟೇ ಉದ್ಘಾಟನೆಗೊಂಡು ಪ್ರಾರಂಭವಾಗಿರುವ ಸರ್ಕಾರಿ ಆಸ್ಪತ್ರೆಗಳಲ್ಲಿ ಸಿಬ್ಬಂದಿಗಳು ಇಲ್ಲದಿರುವುದನ್ನು ಹಾಗೂ ತುರ್ತು ಚಿಕಿತ್ಸೆಗೆ ವಾಹನ ಬೇಕಾಗಿರುವ ಅಂಬುಲೆನ್ಸ್ ಇಲ್ಲದಿರುವುದನ್ನು ಮತ್ತು ಸಮರ್ಪಕವಾಗಿ ಅಧಿಕಾರಿಗಳು ನರ್ಸ್ ಗಳು ಇಲ್ಲದಿರುವುದನ್ನು ಸಂಬಂಧಪಟ್ಟವರಿಂದ ವಿವರಣೆಗಳನ್ನು ಕೇಳಿದ್ದಾರೆ ಹಾಗೂ ಅದಕ್ಕೆ ಸಮರ್ಪಕವಾದ ಅಧಿಕಾರಿಗಳನ್ನು ಹಾಕಿ ಆಸ್ಪತ್ರೆಯ ಉತ್ತಮ ವ್ಯವಸ್ಥೆಮಾಡಿ ನಡೆಸಬೇಕೆಂದು ಒತ್ತಾಯಿಸಿದ್ದಾರೆ ಇದು ಸಾರ್ವಜನಿಕ ಹಿತಾಸಕ್ತಿ ಎಂದರು.
ಇದನ್ನು ನೈತಿಕ ಪೊಲೀಸ್ ಗಿರಿ ಎಂದರೆ ಏನು.. ಇಂಥವರನ್ನು ಮಟ್ಟ ಹಾಕಬೇಕು ಅಂತ ಹೇಳುವ ಈ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷರು. ಜವಾಬ್ದಾರಿ ಇದ್ದಂತವರು ಇಂತಹ ಕಳಪೆ ಕಾಮಗಾರಿಯಾದಲ್ಲಿ ಸರ್ಕಾರದ ದುಡ್ಡು ಪೋಲಾಗುತ್ತಿದೆ ಎಂದು ತಿಳಿದು ಅವರೇ ಈ ಕಾಮಗಾರಿಯನ್ನು ಸ್ಥಳಕ್ಕೆ ಬಂದು ಪರಿಶೀಲಿಸಿ ಗುಣಮಟ್ಟದ ಕೆಲಸ ಮಾಡಿಸಬಹುದು… ಅದನ್ನು ಬಿಟ್ಟು ಗುತ್ತಿಗೆದಾರರಿಗೆ ಬೆದರಿಕೆ ಹಾಕಿದ್ದಾರೆ ಬ್ಲಾಕ್ಮೇಲ್ ಎಂದು ಸುಳ್ಳು ಆರೋಪ ಮಾಡುತ್ತಿದ್ದಾರೆ. ಗುತ್ತಿಗೆದಾರದಿಂದ ಯಾರು ಸಂಬಂಧಗಳನ್ನು ಇಟ್ಟುಕೊಂಡಿದ್ದಾರೆ ಬ್ಲಾಕ್ಮೇಲ್ ಮಾಡಿದ್ದಾರೆ ಎಂದು ಮುಂದಿನ ದಿನಗಳಲ್ಲಿ ನಾವು ಅದಕ್ಕೆ ಸರಿಯಾದ ಮಾಹಿತಿಯೊಂದಿಗೆ ತಿಳಿಸಲಿದ್ದೇವೆ.
ಎಂದು ಬಿಜೆಪಿ ಹೋಬಳಿ ಅಧ್ಯಕ್ಷರಾದ ಕಾರ್ತಿಕ್ ಹುತ್ತಿನಗದ್ದೆ ತಿಳಿಸಿದ್ದಾರೆ.
ಅಡ್ಡಗದ್ದೆಯಲ್ಲಿ ಒಂದು ಮರಳಿನ ಮಾಫಿಯಾ ನಡೆಯುವ ಹುನ್ನಾರ ನಡೆದಿದೆ ಎಂದು ಗಮನಕ್ಕೆ ಬಂದಿದೆ. ಇದನ್ನು ಒಬ್ಬರು ಪ್ರಭಾವಿ ಆಡಳಿತ ಪಕ್ಷದ ಮುಖಂಡರು ತಮ್ಮ ಹೆಸರಿಗೆ ಮಾಡಿಕೊಂಡು ಅದನ್ನು ಶಿವಮೊಗ್ಗದ ಒಬ್ಬ ಗುತ್ತಿಗೆದಾರರಿಗೆ ವರ್ಷಕ್ಕಿಷ್ಟು ಕಮಿಷನ್ ಗೆ ನೀಡಿದ್ದಾರೆ ಎಂದು ಮಾಹಿತಿ ಬಂದಿದೆ, ಸರಿಯಾದ ದಾಖಲೆಯೊಂದಿಗೆ ಮುಂದಿನ ದಿನದಲ್ಲಿ ಅದರ ವಿರುದ್ಧ ಒಂದು ಹೋರಾಟ ಮಾಡುವ ಯೋಚನೆ ಮಾಡಿದ್ದೇವೆ.
ಸರ್ಕಾರಿ ಕೆಲಸಕ್ಕಾಗಿ ಹೊಳೆಯಲ್ಲಿದ್ದ ಮರಳನ್ನು ತೆಗೆದು ಮೇಲೆ ಹಾಕಲು ಗುತ್ತಿಗೆ ಪಡೆದಿದ್ದು.. ಅದು ಸರ್ಕಾರ ಕೆಲಸಗಳಿಗೆ ಉಪಯೋಗವಾಗುತ್ತದ ಎಂದು ಕಾದು ನೋಡಬೇಕಿದೆ.
ಬಿಜೆಪಿಯ ಹೋಬಳಿ ಪ್ರಧಾನ ಕಾರ್ಯದರ್ಶಿ ಹಾಲಪ್ಪ ಮಾತನಾಡಿ ಕೇಂದ್ರ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯದ ಜಲಜೀವನ್ ಮಿಷನ್ ಕಾಮಗಾರಿ ರಾಜ್ಯದಲ್ಲ ಕಡೆ ನಡೆಯುತ್ತಿದ್ದು ಶೃಂಗೇರಿ ಕ್ಷೇತ್ರದಲ್ಲೂ ಅದೇ ರೀತಿ ಕಾಮಗಾರಿ ನಡೆಯುತ್ತಿದ್ದು ಕಳಪೆಯಾಗಿದ್ದು ಯಾವುದೇ ಗ್ರಾಮ ಪಂಚಾಯತಿಗಳಲ್ಲಿ ಇದರ ನೀರಿನ ಸೌಲಭ್ಯ ಸಾರ್ವಜನಿಕರಿಗೆ ತಲುಪಿಲ್ಲ. ಆದರೆ ಇದರ ಕಾಮಗಾರಿಯಲ್ಲಿ ಬಂದ ಅನುದಾನ ಗುತ್ತಿಗೆದಾರ ಹಾಗೂ ಕ್ಷೇತ್ರದ ಕೆಲವು ಆಡಳಿತ ಪಕ್ಷದ ಮುಖಂಡರುಗಳ ಕೈ ಸೇರುತಿದೆ.. 80% ಅನುದಾನ ಬಿಡುಗಡೆಯಾಗಿದ್ದು ಗುತ್ತಿಗೆದಾರರಿಗೆ ಸೇರಿದೆ.. ಎಂದು ಸಂಬಂಧಪಟ್ಟ ಇಲಾಖೆಗಳಿಂದ ನಮಗೆ ತಿಳಿದಿದೆ ಮುಂದಿನ ದಿನಗಳಲ್ಲಿ ಇತರ ವಿರುದ್ಧವು ನಾವು ಸಾರ್ವಜನಿಕರಿಗೆ ಆಗಿರುವ ತೊಂದರೆಗಳನೆಲ್ಲ ಆದರಿಸಿ ಎಲ್ಲಾ ಕಡೆ ಪ್ರತಿಭಟನೆ ಮಾಡುವ ಎಚ್ಚರಿಕೆಯನ್ನು ನೀಡುತ್ತಿದ್ದೇವೆ.
ಈ ಪತ್ರಿಕಾಗೋಷ್ಠಿ ನಡೆಸಿದ ಸಂದರ್ಭದಲ್ಲಿ ಶ್ರೀನಿವಾಸ್ ಕಟ್ಟೆಮನೆ, ಅಣ್ಣು ಜಯಪುರ, ಪ್ರವೀಣ್ ಜಲದುರ್ಗ, ಸಂಪತ್ ಚೌಡಿಕಟ್ಟೆ, ಕುಮಾರ್, ಅಕ್ಷಯ್ ಜಯಪುರ, ನಟರಾಜ್ ಚುಮ್ಮನ, ಕೊಡುಗೆ ಅನಿಲ್ ಹೆರೂರ್ ಇತರರು ಉಪಸ್ಥಿತರಿದ್ದರು.
