ಕೊಪ್ಪ: ಅತ್ತಿಕುಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಮೆಣಸಿನ ಹಾಡ್ಯ ಮತ್ತು ಬಸರೀಕಟ್ಟೆ ಹಾಗೂ ಹೊನ್ನಗುಂಡಿ ಗ್ರಾಮಗಳಿಗೆ ಮಾಜಿ ಸಚಿವ ಡಿ ಎನ್ ಜೀವರಾಜ್ ಭೇಟಿ ನೀಡಿದ್ದರು.
ಮೆಣಸಿನಹಾಡ್ಯದ ಗದ್ದೆಕಟ್ಟು ಗ್ರಾಮದ ಕುಮಾರ ಎಂಬುವವರು ಗದ್ದೆ ಕೆಲಸಕ್ಕೆಂದು ಹೋದವರು ನಾಪತ್ತೆಯಾಗಿ ಮೂರು ತಿಂಗಳಾದರು ಸುಳಿವು ಸಿಕ್ಕಿಲ್ಲ. ಶನಿವಾರ ಕುಮಾರ ಅವರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದರು.
ನಂತರ ಬಸರೀಕಟ್ಟೆಯ ಹಿರಿಯ ಕಾರ್ಯಕರ್ತರಾದ ಕವಿಲುಕೊಡಿಗೆ ಶ್ರೀನಿವಾಸ್ ಹಾಗೂ ಗ್ರಾಮ ಪಂಚಾಯತಿ ಸದಸ್ಯರಾದ ರಾಘವೇಂದ್ರ ಭಟ್ ಮತ್ತು ಮೋಹನ್ ಹಾಗೂ ಹರೀಶ್ ರವರ ಮನೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ದಿಶಾ ಸಮಿತಿ ಸದಸ್ಯ ಮಣಿಕಂಠನ್ ಕಂದಸ್ವಾಮಿ, ಗುಡ್ಡೇತೋಟ ಶಕ್ತಿಕೇಂದ್ರ ಪ್ರಮುಖ್ ಮಂಜುನಾಥ್ , ಮಾಜಿ ತಾ ಪಂ ಉಪಾಧ್ಯಕ್ಷೆ ಲಲಿತಾ ,ಅತ್ತಿಕೊಡಿಗೆ ಗ್ರಾಮ ಪಂಚಾಯತಿ ಸದಸ್ಯೆ ಪ್ರೇಮ , ನಟರಾಜ್ ,ರಾಘವೇಂದ್ರ , ರೇಖಾ ಅತ್ತಿಕೊಡಿಗೆ ಸೊಸೈಟಿ ನಿರ್ದೇಶಕರಾದ ವಿಷ್ಣು ಮೂರ್ತಿ ಮುಖಂಡರಾದ ಶರಣ್ ಡಿ ಕುನಃ , ಚೇತನ್ , ನವೀನ್ ಕಲ್ಲುಗುಡ್ಡೆ , ಆದರ್ಶ , ಧರ್ಮರಾಜ್ , ಚಿದಂಬರ , ಆನಂದರಾಮ , ಸತೀಶ , ಮೋಹನ ಇತರಿದ್ದರು .
ವರದಿ: ಶಶಿ ಬೆತ್ತದಕೊಳಲು!
