ಕೊಪ್ಪ: ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಯೊಬ್ಬರಿಗೆ ಅವಧಿ ಮೀರಿದ ಮಾತ್ರೆ ನೀಡಿದ ಆಸ್ಪತ್ರೆ ಸಿಬ್ಬಂದಿ ಜನರ ಜೀವದ ಜೊತೆ ಚೆಲ್ಲಾಟವಾಡಿರೋ ಘಟನೆ ಬೆಳಕಿಗೆ ಬಂದಿದೆ.
ಎದೆನೋವಿನ ಸಮಸ್ಯೆಯಿಂದ ದಾಖಲಾಗಿದ್ದ ರೋಗಿ ಶೇಖರ್ ಇಸಿಜಿ ಮಾಡಿದ ಬಳಿಕ ಗ್ಯಾಸ್ಟ್ರಿಕ್ ಮಾತ್ರೆ ತೆಗೆದುಕೊಳ್ಳಲು ವೈದ್ಯರು ಸಲಹೆ ನೀಡಿದ್ದರು.ಆದರೆ ಆಸ್ಪತ್ರೆ ಸಿಬ್ಬಂದಿ ನೀಡದ ಮಾತ್ರೆಗಳು ಈಗಾಗಲೇ ಅವಧಿ ಮೀರಿದ್ದಾಗಿದ್ದು ಮಾತ್ರೆ ಕವರೊಳಗಡೆಯ ಸಂಪೂರ್ಣವಾಗಿ ಕರಿಗಿ ನೀರಾಗಿತ್ತು. ಇದನ್ನು ಗಮನಿಸಿದ ರೋಗಿ ಹಾಗೂ ಸಂಬಂಧಿಕರು ಆಸ್ಪತ್ರೆ ಸಿಬ್ಬಂದಿ ಬೇಜವಾಬ್ದಾರಿತನವನ್ನು ತೀವ್ರವಾಗಿ ಖಂಡಿಸಿದ್ದಾರೆ.
ಯಾವುದೇ ವ್ಯಕ್ತಿಯೂ ಆಸ್ಪತ್ರೆಗೆ ಬರುವಾಗ ಗುಣಮುಖರಾಗಲೆಂದು ಬಂದಿರುತ್ತಾರೆ ಆದರೆ ಇಂತಹವರ ಬೇಜವಾಬ್ದಾರಿಗಳಿಂದ ಹೇಗೆ ನಮ್ಮನ್ನು ನಾವು ಕಾಪಾಡಿಕೊಂಡು ಹೋರಹೋಗುವುದು ಹಾಗೆ ಸರ್ಕಾರಿ ಆಸ್ಪತ್ರೆ ಸಿಬ್ಬಂದಿಗಳ ನಿರ್ಲಕ್ಷ್ಯತನಕ್ಕೆ ಸಾರ್ವಜನಿಕರು ತೀವ್ರವಾಗಿ ಖಂಡಿಸಿ ಆತಂಕ ವ್ಯಕ್ತಪಡಿಸಿದ್ದಾರೆ.
