Friday, February 13, 2026
Homeಜಿಲ್ಲಾಸುದ್ದಿಕೊಪ್ಪ: ಸ್ವಂತ ಹಣದಿಂದ ಹೊಂಡ ಗುಂಡಿಗಳನ್ನು ಮುಚ್ಚಿಸಿದ ಗ್ರಾಮ ಪಂಚಾಯತಿ ಸದಸ್ಯ: ಗ್ರಾಮಸ್ಥರ ಮೆಚ್ಚುಗೆ!

ಕೊಪ್ಪ: ಸ್ವಂತ ಹಣದಿಂದ ಹೊಂಡ ಗುಂಡಿಗಳನ್ನು ಮುಚ್ಚಿಸಿದ ಗ್ರಾಮ ಪಂಚಾಯತಿ ಸದಸ್ಯ: ಗ್ರಾಮಸ್ಥರ ಮೆಚ್ಚುಗೆ!

ಕೊಪ್ಪ: ಸ್ವಂತ ಖರ್ಚಿನಿಂದ ಹೊರನಾಡು ಶೃಂಗೇರಿ ಕಲ್ಪಿಸುವ ಮಾರ್ಗದ ಹೊಂಡ ಗುಂಡಿಗಳನ್ನು ಮುಚ್ಚಿಸಿದ ಗುಡ್ಡೆತೋಟ ಗ್ರಾಮ ಪಂಚಾಯತಿ ಸದಸ್ಯ ಪ್ರಶಾಂತ್ ಜಾಲ್ಮರ. ಅವರ ಈ ಕೆಲಸಕ್ಕೆ ಗ್ರಾಮಸ್ಥರು ಹಾಗೂ ಅಲ್ಲಿನ ಸ್ಥಳೀಯ ನಿವಾಸಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಮಲೆನಾಡು ಮಳೆಗಾಲದಲ್ಲಿ ಪ್ರವಾಸಿಗರಿಗೆ ಸ್ವರ್ಗದ ರೀತಿ ಕಾಣುತ್ತದೆ. ವಾರಾಂತ್ಯದಲ್ಲಂತೂ ಅಬ್ಬಬ್ಬಾ ಕಾಫಿನಾಡಿನ ಕಡೆ ಪ್ರವಾಸಿಗರ ದಂಡೇ ಬರುತ್ತದೆ.ಆದರೆ ಮಲೆನಾಡಿನ ರಸ್ತೆಗಳು ಎಂತವರಿಗೂ ಬೇಸರವನ್ನುಂಟು ಮಾಡೋದಂತು ಸತ್ಯ.ಮುಖ್ಯರಸ್ತೆಗಳೇ ಸರಿ ಇಲ್ಲದ ಈ ಮಲೆನಾಡಿನಲ್ಲಿ ಗ್ರಾಮೀಣ ಭಾಗದ ರಸ್ತೆಗಳ ಕಥೆ ಊಹಿಸಿಕೊಳ್ಳೋಕು ಸಾಧ್ಯ ಇಲ್ಲ ಬಿಡಿ. ಅಂತದರಲ್ಲಿ ಕೊಪ್ಪ ತಾಲೂಕಿನ ಗುಡ್ಡೆತೋಟ ಗ್ರಾಮ ಪಂಚಾಯತಿ ಸದಸ್ಯರೊಬ್ಬರು ತನ್ನ ಸಾವಿರಾರು ರೂಪಾಯಿ ಹಣ ಖರ್ಚು ಮಾಡಿ ರಸ್ತೆಯ ಹೊಂಡ ಗುಂಡಿಗಳನ್ನು ಮುಚ್ಚಿಸಿ ಪ್ರೇರಣೆಯಾಗಿದ್ದಾರೆ.

ಹೌದು ಕೊಪ್ಪ ತಾಲೂಕಿನ ಗುಡ್ಡೆತೋಟ ಗ್ರಾಮ ಪಂಚಾಯತಿ ಸದಸ್ಯರಾದ ಪ್ರಶಾಂತ್ ಜಾಲ್ಮರ ಅವರು ತನ್ನ ಗ್ರಾಮ ಪಂಚಾಯತಿ ವ್ಯಾಪ್ತಿಯ ಭೈರೆದೇವರು ಗ್ರಾಮದ ಬಸ್ತಿ ಬಾಲಕ್ಕಿ ತೋಟ ರಸ್ತೆಗೆ ತನ್ನ ಸಾವಿರಾರು ರೂಪಾಯಿ ಹಣ ಖರ್ಚು ಮಾಡಿ ಟ್ರ್ಯಾಕ್ಟರ್, ಜೆಸಿಬಿ ಬಳಸಿ ರಸ್ತೆ ದುರಸ್ಥಿ ಮಾಡಿಸಿದ್ದಾರೆ.

ಈ ರಸ್ತೆಯೂ ಹೊರನಾಡಿನಿಂದ ಕೊಗ್ರೆ ಮಾರ್ಗದ ಮೂಲಕ ಶೃಂಗೇರಿಗೆ ತಲುಪಲು ಬಹಳ ಹತ್ತಿರದ ಮಾರ್ಗವಾಗಿದ್ದು ಪ್ರತಿನಿತ್ಯ ನೂರಾರು ವಾಹನಗಳು ಈ ರಸ್ತೆಯ ಮೂಲಕ ಸಂಚರಿಸುತ್ತವೆ.ಆದರೆ ಈ ರಸ್ತೆಯೂ ಕೆಲ ವ್ಯವಹಾರಿಕವಾಗಿ ಅಡಚಣೆ ಇದ್ದ ಕಾರಣ ಬಹಳ ವರ್ಷಗಳಿಂದ ಈ ರಸ್ತೆ ಹೊಂಡ ಗುಂಡಿಗಳಿಂದ ಪಾಳು ಬಿದ್ದಿತ್ತು.ಬಹಳಷ್ಟು ಭಾರೀ ಗ್ರಾಮ ಪಂಚಾಯತಿ ವತಿಯಿಂದ ರಸ್ತೆ ದುರಸ್ಥಿ ಮಾಡಿದ್ದರು ಕೂಡ ಕೆಲ ದಿನಗಳ ನಂತರ ಮತ್ತದೆ ಹೊಂಡ ಗುಂಡಿಗಳು ಸೃಷ್ಠಿಯಾಗಿ ಬಿಡುತ್ತಿದ್ದವು.

ಈ ರಸ್ತೆಯೂ ಕೆಲ ವ್ಯವಹಾರಿಕವಾಗಿ ಅಡಚಣೆ ಇದ್ದ ಕಾರಣ ರಸ್ತೆಯನ್ನು ಅಭಿವೃದ್ಧಿ ಪಡಿಸಲು ಸಾಧ್ಯವಾಗಿರಲಿಲ್ಲ, ಈಗ ಎಲ್ಲಾ ವ್ಯವಹಾರಿಕವಾಗಿ ಸಮಸ್ಯೆಗಳು ಬಗೆಹರಿದಿದೆ. ಸರ್ಕಾರದಿಂದ ವಿಶೇಷವಾದ ಅನುದಾನ ಕೊಡಿಸಿ ಈ ರಸ್ತೆಯನ್ನು ಕಾಂಕ್ರೀಟಿಕರಣ ಮಾಡಿಸುವುದಾಗಿ ಶಾಸಕರು ಭರವಸೆ ನೀಡಿದ್ದಾರೆ ಎಂದು ಗುಡ್ಡೆತೋಟ ಗ್ರಾಮ ಪಂಚಾಯತಿ ಸದಸ್ಯರಾದ ಪ್ರಶಾಂತ್ ಜಾಲ್ಮರ ತಿಳಿಸಿದರು.

ವರದಿ : ಶಶಿ ಬೆತ್ತದಕೊಳಲು

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!