ಕೊಪ್ಪ: ಸೋರಿಯಾಸಿಸ್ ಮಾಸಾಚರಣೆಯ ಪ್ರಯುಕ್ತ, ನುಗ್ಗಿ ಗ್ರಾಮದಲ್ಲಿ ಆರೂರು ಲಕ್ಷ್ಮೀನಾರಾಯಣ ರಾವ್ ಆಯುರ್ವೇದ ವೈದ್ಯಕೀಯ ಕಾಲೇಜು, ಕೊಪ್ಪಇವರ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು 08 ಆಗಸ್ಟ್ 2025 ರಂದು ಮತ್ತು ಅದರ ಅನುಬಂಧವಾಗಿ ಫಾಲೋ-ಅಪ್ ಶಿಬಿರವನ್ನು ಇಂದು ಆಯೋಜಿಸಲಾಯಿತು.

ಈ ಶಿಬಿರದಲ್ಲಿ ಸೋರಿಯಾಸಿಸ್ ಮತ್ತು ಇತರ ಚರ್ಮದ ಕಾಯಿಲೆಗಳು, ಕೀಲು ನೋವು ಇತ್ಯಾದಿ ಆರೋಗ್ಯ ಸಮಸ್ಯೆಗಳ ಕುರಿತು ಗ್ರಾಮಸ್ಥರಲ್ಲಿ ಜಾಗೃತಿ ಮೂಡಿಸಲಾಗಿದ್ದು, ಉಚಿತ ಆಯುರ್ವೇದ ವೈದ್ಯಕೀಯ ತಪಾಸಣೆ ಹಾಗೂ ಔಷಧ ವಿತರಣೆ ಮಾಡಲಾಯಿತು.
ಶಿಬಿರದ ಯಶಸ್ವಿ ನಿರ್ವಹಣೆಯಲ್ಲಿ ಕಾಯಚಿಕಿತ್ಸೆ ವಿಭಾಗದ, ಡಾ. ಅಶ್ವಿನಿ ಎಸ್. ಜಿ., ಡಾ. ಮಾಧವಿ ಮತ್ತು ಡಾ. ಶೃತಿ ಮೋಲ್ ಅವರು ಪ್ರಮುಖವಾಗಿ ಪಾಲ್ಗೊಂಡು ಸೇವೆ ಸಲ್ಲಿಸಿದರು, ಹಾಗೂ ಈ ಸಂದರ್ಭದಲ್ಲಿ ನುಗ್ಗಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರು ಹಾಲಿ ಸದಸ್ಯರಾದ ಹೆಚ್ ಆರ್ ಜಗದೀಶ್, ಮಾಜಿ ಅಧ್ಯಕ್ಷರಾದಂತಹ ಬಿಜಿ ಸವಿನಾಥ್, ಸೂಪರ್ ಸರ್ ಗುರು ಬಸವರಾಜ್, ಹಾಗೂ ಹಲವಾರು ಜನ ಗ್ರಾಮಸ್ಥರು ಉಪಸ್ಥಿತರಿದ್ದರು,ಜೊತೆಗೆ ಪಿಜಿ ವಿದ್ಯಾರ್ಥಿಗಳು ಮತ್ತು ನಾಲ್ಕನೇ ವರ್ಷದ ಬಿಎಎಂಎಸ್ ವಿದ್ಯಾರ್ಥಿಗಳು ಶಿಬಿರದಲ್ಲಿ ಸಕ್ರಿಯವಾಗಿ ಭಾಗವಹಿಸಿ ತಮ್ಮ ಸೇವೆ ನೀಡಿದರು.

ಹಲವಾರು ಗ್ರಾಮಸ್ಥರು ಶಿಬಿರದಲ್ಲಿ ಪಾಲ್ಗೊಂಡು ಲಾಭ ಪಡೆದರು. ಈ ಶಿಬಿರದ ಯಶಸ್ವಿ ಆಯೋಜನೆಯನ್ನು ನುಗ್ಗಿ ಗ್ರಾಮ ಪಂಚಾಯಿತಿ ನೆರವಿನೊಂದಿಗೆ ಅತ್ಯುತ್ತಮ ರೀತಿಯಲ್ಲಿ ನಡೆಸಿತು.
