ಕೊಪ್ಪ: ಅಮೆರಿಕ, ಇಸ್ರೇಲ್ ಹಾಗೂ ಇರಾನ್ ಯುದ್ಧದ ಕೆನ್ನಾಲಿಗೆ ಸಿಲುಕಿರುವ ಕೊಪ್ಪ ತಾಲೂಕಿನ ಯುವಕ ಸಂಪರ್ಕಕ್ಕೆ ಸಿಗದ ಕಾರಣ ಕುಟುಂಬಸ್ಥರು ಆತಂಕಕ್ಕೀಡಾಗಿದ್ದು ಆದರೆ ಇದೀಗ ಸೇಫ್ ಆಗಿದೆ ಎಂಬ ಮಾಹಿತಿ ಹೊರಬಿದ್ದಿದೆ.

ಹೌದು .. ಕೊಪ್ಪ ತಾಲೂಕಿನ ಹಿರೇಕೊಡಿಗೆ ನಿವಾಸಿ ಮಹೇಶ್ ರವರ ಪುತ್ರ ನಿಶ್ಚಿತ್ ಲಕ್ನೋದಲ್ಲಿ ಆರು ತಿಂಗಳು ಟ್ರೈನಿಂಗ್ ಮುಗಿಸಿ ಮರ್ಚೆಂಟ್ ನೇವಿಯಲ್ಲಿ ವೃತ್ತಿ ಆರಂಭಿಸಿ ದುಡಿಮೆ ಮಾಡಲೆಂದು ಇರಾನ್ ಗೆ ಹೋದ ಯುವಕ 10 ದಿನ ಫೋನ್ ಕಾಲ್ ಇಲ್ಲದೆ ತಂದೆ ತಾಯಿ ಗಾಬರಿಯಾಗಿದ್ದರು. ಈ ಬೆಳವಣಿಗೆಯಿಂದಾಗಿ ಅವರ ಪೋಷಕರು ಮತ್ತು ಕುಟುಂಬಸ್ಥರು ತೀವ್ರ ಆತಂಕಕ್ಕೆ ಒಳಗಾಗಿದ್ದರು.
ಇದೀಗ ಅನಿವಾಸಿ ಭಾರತೀಯ ಮಾಜಿ ಉಪಾಧ್ಯಕ್ಷರಾದ ಡಾ.ಆರತಿ ಕೃಷ್ಣ ಅವರು ಇರಾನ್ ನಲ್ಲಿರುವ ಭಾರತೀಯ ಎಂಬಸಿಯನ್ನು ಸಂಪರ್ಕಿಸಿ ನಿಶ್ಚಿತ್ ಅವರು ಸುರಕ್ಷಿತವಾಗಿದ್ದಾರೆ ಎಂದು ತಿಳಿಸಿದ್ದಾರೆ.
ಇದಕ್ಕಾಗಿ ಡಾ. ಡಾ.ಆರತಿ ಕೃಷ್ಣ ಅವರಿಗೆ ನಿಶ್ಚಿತ್ ತಂದೆ ಮಹೇಶ್ ಅವರು ಧನ್ಯವಾದ ತಿಳಿಸಿದ್ದಾರೆ..
