Monday, March 30, 2026
Homeಕ್ರೈಮ್ಕೊಪ್ಪ: ವಾಕಿಂಗ್ ಹೋಗುತ್ತಿದ್ದ ವ್ಯಕ್ತಿಗೆ ಹಿಟ್‌ & ರನ್‌, ಚಾಲಕ ಪರಾರಿ :‌ ಗಂಭೀರ ಗಾಯ!

ಕೊಪ್ಪ: ವಾಕಿಂಗ್ ಹೋಗುತ್ತಿದ್ದ ವ್ಯಕ್ತಿಗೆ ಹಿಟ್‌ & ರನ್‌, ಚಾಲಕ ಪರಾರಿ :‌ ಗಂಭೀರ ಗಾಯ!

ಕೊಪ್ಪ: ಮುಂಜಾನೆ ವಾಕಿಂಗ್‌ ತೆರಳುತ್ತಿದ್ದ ವ್ಯಕ್ತಿಯೊಬ್ಬರಿಗೆ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದು ಪರಾರಿಯಾಗಿರುವ ಘಟನೆ ಕೊಪ್ಪದ ಬಾಲಗಡಿಯ ಮೆಸ್ಕಾಂ ರಸ್ತೆಯಲ್ಲಿ ನಡೆದಿದೆ.

ಎಂದಿನಂತೆ ವಾಕಿಂಗ್‌ ತೆರಳಿದ್ದ 67 ವರ್ಷದ ವ್ಯಕ್ತಿ ಈಶ್ವರ ಎಂಬುವರಿಗೆ ಗಾಯಗಳಾಗಿದ್ದು ಈ ವೇಳೆ ಅಲ್ಲಿಯ ಸ್ಥಳೀಯ ಶಿಕ್ಷಕರು ಒಬ್ಬರು ಗಮನಿಸಿ ಆಟೋ ಚಾಲಕನ ಸಹಾಯದೊಂದಿಗೆ ತಕ್ಷಣ ಕೊಪ್ಪದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಗಾಯಾಳಿನ ಸ್ಥಿತಿ ಗಂಭೀರವಾಗಿದ್ದರಿಂದ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ

ಕೊಪ್ಪ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದ್ದು ಪರಾರಿಯಾದ ಚಾಲಕನಿಗೆ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!