Wednesday, March 25, 2026
Homeಕ್ರೈಮ್ಕೊಪ್ಪ: ಹಸು & ಎರಡು ಕರುಗಳ ಮೇಳೆ ಮೇಲೆ ಚಿರತೆ ದಾಳಿ: ಗ್ರಾಮಸ್ಥರಲ್ಲಿ ಆತಂಕ!

ಕೊಪ್ಪ: ಹಸು & ಎರಡು ಕರುಗಳ ಮೇಳೆ ಮೇಲೆ ಚಿರತೆ ದಾಳಿ: ಗ್ರಾಮಸ್ಥರಲ್ಲಿ ಆತಂಕ!

ಕೊಪ್ಪ: ಹಸುವಿನ ಮೇಲೆ ಚಿರತೆ ದಾಳಿ ಮಾಡಿರುವ ಘಟನೆ ಕೊಪ್ಪ ತಾಲೂಕಿನ ಹುಲಿಗರಡಿ ಹಾಗೂ ಸತ್ತಿಕಲ್ಲು ಸಮೀಪ ನಡೆದಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

ಸತ್ತಿಕಲ್ಲು ನಲ್ಲಿ ಸಿಂದಿ ದನ ಹಾಗೂ ಹುಲಿಗರಡಿ ಗಣೇಶ್ ಭಟ್ ಅವರ ಮನೆ ಸಮೀಪ ಕರುವಿನ ಮೇಲೆ ದಾಳಿ ಮಾಡಿದೆ. ಎರಡು ಘಟನೆಯಲ್ಲೂ ಹಸುವಿನ ಹೊಟ್ಟೆಯ ಭಾಗಕ್ಕೆ ದಾಳಿ ಮಾಡಿದೆ.

ಈ ಹಿಂದೆಯೂ ಕೂಡ ಸ್ಥಳೀಯರಿಗೆ ಚಿರತೆಯ ಸಂಚಾರದ ಬಗ್ಗೆ ತಿಳಿದು ಸೆರೆ ಹಿಡಿಯುವಂತೆ ಸ್ಥಳೀಯ ಅರಣ್ಯ ಅಧಿಕಾರಿಗೆ ಮನವಿ ಮಾಡಲಾಗಿತ್ತು. ಹೀಗಾಗಿ ಅರಣ್ಯ ಇಲಾಖೆಯವರು ಬೋನ್‌ ವ್ಯವಸ್ಥೆ ಮಾಡಲಾಗಿತ್ತು. ಆದರೆ, ಚಿರತೆ ಇದುವರೆಗೆ ಚಿರತೆ ಸೆರೆ ಆಗದೆ ಪದೇ ಪದೇ ಹಸುಗಳ ಮೇಲೆ ದಾಳಿ ಮಾಡುತ್ತಿರುವುದು ಸ್ಥಳೀಯರಿಗೆ ಆತಂಕ ಮನೆ ಮಾಡಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!