ಕೊಪ್ಪ: ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ಮೊರಾರ್ಜಿ ವಸತಿ ಶಾಲೆ ವಿದ್ಯಾರ್ಥಿನಿ ಶಮಿತಾ ಆತ್ಮಹತ್ಯೆ ಭಾರೀ ಚರ್ಚೆಯಲ್ಲಿದ್ದು ಪ್ರಕರಣ ಸಂಬಂಧ ಇಂದು ಕೊಪ್ಪ ತಾಲೂಕಿನಲ್ಲಿ ಪ್ರತಿಭಟನೆಗೆ ಮುಂದಾಗಿದೆ.
ಹೌದು … ಕೊಪ್ಪ ತಾಲೂಕಿನಲ್ಲಿ ಬಿಜೆಪಿ ಹಾಗೂ ಅಲ್ಲಿನ ಸ್ಥಳೀಯರಿಂದ ವಿದ್ಯಾರ್ಥಿನಿ ಸಾವಿನ ತನಿಖೆ ಸರಿಯಾಗಬೇಕೆಂದು ಆಗ್ರಹಿಸಿ ಪ್ರತಿಭಟನೆ ಕೈಗೊಳ್ಳಲಿದ್ದು ಶಮಿತಾ ಪೋಷಕರು ಕೂಡ ಇದರಲ್ಲಿ ಭಾಗಿಯಾಗಲಿದ್ದಾರೆ.
ಹಾಸ್ಟೇಲ್ ನಲ್ಲಿ ಮೂಲಭೂತ ಸೌಕರ್ಯಗಳ ಕೊರತೆಯೇ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ ಹಾಗೆ ಈ ಹಿಂದೆ 22023ರಲ್ಲಿ ಅಮೂಲ್ಯ ಎಂಬ ಹುಡುಗಿ ಈಗ ಶಮಿತಾ ವಿದ್ಯಾರ್ಥಿನಿಗಳು ಸಾವನ್ನಪ್ಪಿದ್ದು ಇದಕ್ಕೆ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ ಈ ಹಿನ್ನೆಲೆಯಲ್ಲಿ ಅಲ್ಲಿನ ಮಕ್ಕಳ ಪೋಷಕರು ಹಾಗೂ ಸ್ಥಳೀಯರು ಇದಕ್ಕೆ ತೀವ್ರ ವಿರೋಧ ವ್ಯಕ್ತ ಪಡಿಸಿದ್ದು ಮಕ್ಕಳಿಗೆ ಸರಿಯಾದ ರಕ್ಷಣೆ ಇಲ್ವಾ ಎಂಬುದರ ಬಗ್ಗೆ ತೀವ್ರ ಚರ್ಚೆಯಾಗಿದೆ.
ಬಹಳ ಮುಖ್ಯವಾಗಿ ಈ ಶಾಲೆಯಲ್ಲಿ ಸಿಸಿಟಿವಿ ಅಳವಡಿಕೆ, ರಾತ್ರಿ ಹೊತ್ತು ವಾರ್ಡನ್ ಇಲ್ಲದಿರುವುದು, ಕೌನ್ಸಲಿಂಗ್, ಪೋಷಕರ ಜೊತೆಗಿನ ಸಭೆ ಈ ವ್ಯವಸ್ಥೆಗಳನ್ನ ಮಾಡಬೇಕು ಹಾಗೆ ಇಂಥ ಘಟನೆ ನಡೆಯುತ್ತಿದ್ದರು ಅಧಿಕಾರಿಗಳು ಯಾರೂ ಕೂಡ ಇತ್ತ ಗಮನ ಹರಿಸುತ್ತಿಲ್ಲ ಹಾಗಾಗಿ ಸಂಬಂಧಪಟ್ಟ ಅಧಿಕಾರಿಗಳು , ಶಾಸಕರು ಈ ಕಡೆ ಗಮನ ಹರಿಸಬೇಕು, ಸಾವಿಗೆ ನಿಖರ ಕಾರಣ ತಿಳಿಸಬೇಕೆಂದು ಅಲ್ಲಿನ ಸ್ಥಳೀಯರು ಪ್ರತಿಭಟನೆ ನಡೆಸುತ್ತಿದ್ದಾರೆ.