ಚಿಕ್ಕಮಗಳೂರು: ಜಿಲ್ಲೆಯ ಕೊಪ್ಪ ಪಟ್ಟಣದ ಗಜಾನನ ಹೋಟೆಲ್ ಮುಂಭಾಗ ನೋ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿದ್ದ ಸರ್ಕಾರಿ ವಾಹನಕ್ಕೆ ಪೊಲೀಸರು 500 ರೂ . ದಂಡ ವಿಧಿಸಿದ್ದಾರೆ.
ಹೌದು …ನೋ ಪಾರ್ಕಿಂಗ್ ಸ್ಥಳದಲ್ಲಿ ಸರ್ಕಾರಿ ವಾಹನವನ್ನು ನಿಲ್ಲಿಸಿ ಅಧಿಕಾರಿಗಳು ಹೋಟೆಲ್ʼಗೆ ತೆರಳಿದ್ದರು.ಆಗ ಕೊಪ್ಪ ಠಾಣೆಯ ಪಿ ಎಸ್ ಐ ಬಸವರಾಜ್ ವಾಹನಕ್ಕೆ 500 ರೂ. ದಂಡ ವಿಧಿಸಿದ್ದರು.
ಚಿಕ್ಕಮಗಳೂರು ಯೋಜನಾ ನಿರ್ದೇಶಕರ ವಾಹನವನ್ನು ಕೊಪ್ಪದ ಬಸ್ ಸ್ಟಾಂಡ್ ಸಮೀಪ ನೋ ಪಾರ್ಕಿಂಗ್ ನಲ್ಲಿ ನಿಲ್ಲಿಸಿ ಹೊಗಿದ್ರು. ಇದನ್ನು ಗಮನಿಸಿದ ಕೊಪ್ಪ ಠಾಣೆಯ ಪಿ ಎಸ್ ಐ ಬಸವರಾಜ್ ವಾಹನಕ್ಕೆ 500 ರೂ. ದಂಡ ವಿಧಿಸಿದ್ದು, ಫೈನ್ ಕಟ್ಟಿ ಬಳಿಕ ವಾಹನ ಪಡೆದಿದ್ದಾರೆ.
ಸರ್ಕಾರಿ ವಾಹನ ಬಿಡದೇ ದಂಡ ಹಾಕಿದ್ದ ಪೊಲೀಸರ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆಗೆ ಪಾತ್ರವಾಗಿದೆ.
