Thursday, February 12, 2026
Homeಜಿಲ್ಲಾಸುದ್ದಿಕೊಪ್ಪ: ಜಾನುವಾರುಗಳನ್ನು ಬೀದಿಗೆ ಬಿಡದಂತೆ ಪೊಲೀಸರ ಸೂಚನೆ: ಇಲ್ಲದಿದ್ರೆ ಮಾಲೀಕರಿಗೆ ದಂಡ!

ಕೊಪ್ಪ: ಜಾನುವಾರುಗಳನ್ನು ಬೀದಿಗೆ ಬಿಡದಂತೆ ಪೊಲೀಸರ ಸೂಚನೆ: ಇಲ್ಲದಿದ್ರೆ ಮಾಲೀಕರಿಗೆ ದಂಡ!

ಕೊಪ್ಪ: ನಾಗರೀಕರು ಸಾಕುವ ಜಾನುವಾರುಗಳನ್ನು ರಸ್ತೆಗಿಳಿಯದಂತೆ ನೋಡಿಕೊಳ್ಳುವಂತೆ ಎಚ್ಚರಿಕೆ ನೀಡಲಾಗಿದೆ. ಪೊಲೀಸ್‌ ಇಲಾಖೆ ಹಾಗೂ ಪಶುಸಂಗೋಪನಾ ಇಲಾಖೆಯ ಸೂಚನೆಯಂತೆ ಸಾಕು ಪ್ರಾಣಿಗಳನ್ನು ರಸ್ತೆಗೆ ಬಿಟ್ಟರೆ ಅಪಘಾತಗಳು ಹಾಗೂ ಜಾನುವಾರು ಕಳ್ಳತನ ನಡೆಯುತ್ತವೆ ಹಾಗಾಗಿ ರಸ್ತೆಗೆ ಇಳಿಸಿದರೆ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ನಾಗರೀಕರು ಆಗಸ್ಟ್‌ 31ರರೊಳಗೆ ಜಾನುವಾರುಗಳನ್ನು ರಸ್ತೆಗೆ ಇಳಿಸದೆ ಕಟ್ಟಿಹಾಕಬೇಕು ಏನಾದರೂ ಬೀದಿಗೆ ಬಿಟ್ಟರೆ ಅವುಗಳನ್ನು ಗೋಶಾಲೆಗೆ ಕಳುಹಿಸಲಾಗುವುದು ಹಾಗೆ ಮಾಲೀಕರಿಗೆ ದಂಡ ವಿಧಿಸಲಾಗುವುದು ಎಂದು ಪೊಲೀಸ್‌ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಸೆಪ್ಟಂಬರ್‌ 2ರಿಂದ ಬಿಡಾಡಿ ದನಗಳ ಬಗ್ಗೆ ಕಾರ್ಯಚರಣೆ ನಡೆಸಲಾಗುವುದು ಎಂದು ಕೊಪ್ಪ ಪೊಲೀಸರು ಸೂಚನೆ ಹೊರಡಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!