ಕೊಪ್ಪ: ಮೊರಾರ್ಜಿ ಶಾಲೆ ವಿದ್ಯಾರ್ಥಿನಿ ಶಮಿತಾ ಅನುಮಾನಾಸ್ಪದ ಸಾವು ಹಿನ್ನೆಲೆ ಇಂದು ಕೊಪ್ಪ ನಗರದಲ್ಲಿ ಪ್ರತಿಭಟನೆ ನಡೆದಿದ್ದು ಈ ವೇಳೆ ವಿದ್ಯಾರ್ಥಿನಿ ಪೋಷಕರು ಹಾಗೂ ಅಲ್ಲಿನ ಸ್ಥಳೀಯರ ಜೊತೆ ಶಾಲಾ ಆಡಳಿತ ಮಂಡಳಿ ಸಭೆ ನಡೆಸಲಾಯಿತು. ವಸತಿ ಶಾಲೆ ಆಡಳಿತ ಮಂಡಳಿ ವಿರುದ್ಧ ಗರಂ ಆಗಿದ್ದಾರೆ.

ಕೊಪ್ಪ ವಸತಿ ಶಾಲೆ ಆಡಳಿತ ಮಂಡಳಿ ವಿರುದ್ಧ ಪೋಷಕರು ಗರಂ ಆಗಿದ್ದು ಸಿಬ್ಬಂದಿಗಳಿಗೆ, ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡರು.ಶಮಿತಾ ಸಾವು ಕುರಿತು ತನಿಖೆ ಯಾಗಬೇಕು, ನ್ಯಾಯ ಸಿಗ್ಬೇಕುತಪ್ಪು ಮಾಡಿದ ಸಿಬ್ಬಂದಿಗಳನ್ನ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಸಿಸಿಟಿವಿ ಅಳವಡಿಕೆ, ಲೇಡಿ ವಾರ್ಡನ್ ನೇಮಕ ಕೊಡಲೇ ಆಗ್ಬೇಕು ವಿದ್ಯಾರ್ಥಿಗಳು ವ್ಯಾಸಂಗ ಮಾಡಲು ಒಳ್ಳೆ ವಾತಾವರಣ ಸೃಷ್ಟಿಯಾಗ್ಬೇಕು ಎಂದು ಆಗ್ರಹ ಮಾಡಿದರು.

ಅಷ್ಟೇ ಅಲ್ಲದೇ ಅಧಿಕಾರಿಗಳಿಗೆ, ಅಲ್ಲಿನ ಶಾಸಕರಿಗೆ ಕ್ಲಾಸ್ ತೆಗೆದುಕೊಂಡು ಪೋಷಕರು ಈ ಪ್ರಕರಣ ನಡೆದೂ ಇಷ್ಟು ದಿನವಾದ್ರೂ ಶಾಸಕರು ಭೇಟಿನೇ ಕೊಡಲಿಲ್ಲ ಹಾಗೆ ಇದರ ಬಗ್ಗೆ ಏನೂ ಅಂತಾ ವಿಚಾರಿಸಿಕೊಳ್ಳಲಿಲ್ಲ ಎಂದು ಶಾಸಕರ ವಿರುದ್ಧ ಪೋಷಕರು ಗರಂ ಆದರು

ಈ ಬಗ್ಗೆ ಪಬ್ಲಿಕ್ ಇಂಪ್ಯಾಕ್ಟ್ ನಿರಂತರವಾಗಿ ವರದಿ ಪ್ರಸಾರ ಮಾಡುತ್ತಲೇ ಬಂದಿದ್ದು ಈ ವರದಿ ಪ್ರಸಾರದ ಬಳಿಕ ಎಚ್ಛೆತ್ತ ಶಾಸಕರು ಆ ನಂತರ ಶಾಲೆಗೆ ಭೇಟಿ ನೀಡಿ ಶಮಿತಾ ಪೋಷಕರನ್ನು ಸಹ ಭೇಟಿ ಮಾಡಿ ಸಾಂತ್ವಾನ ಹೇಳಲು ಮುಂದಾಗಿದ್ರು.
