ಕೊಪ್ಪ : ಶಿಕ್ಷಣ ಇಲಾಖೆ ಆಯೋಜಿಸಿದ್ದ ಜಿಲ್ಲಾ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ 34 ಕೆಜಿ ವಿಭಾಗದಲ್ಲಿ ಮೂಡಿಗೆರೆ ತಾಲೂಕಿನ ಹಂಡಗುಳಿ ಗ್ರಾಮದ ಈಶಾನ್ವಿ ಪ್ರಥಮ ಸ್ಥಾನ ಪಡೆದು ಗ್ರಾಮಕ್ಕೂ, ತಾಲೂಕಿಗೂ ಕೀರ್ತಿ ತಂದಿದ್ದಾರೆ.

ಈ ಸ್ಪರ್ಧೆಯಲ್ಲಿ 42 ಕೆಜಿ ವಿಭಾಗದಲ್ಲಿ ಆರನೇ ತರಗತಿ ವಿದ್ಯಾರ್ಥಿನಿ ತಳವಾರದ ರುತ್ವಿಕಾ ತನವಿ ಪ್ರಥಮ ಸ್ಥಾನ ಹಾಗೂ 50 ಕೆಜಿ ವಿಭಾಗದಲ್ಲಿ 7ನೇ ತರಗತಿ ವಿದ್ಯಾರ್ಥಿನಿ ಬಾಳೆಗದ್ದೆಯ ಹೃಧ್ಯಾ ಕೆ ಎಂ ಪ್ರಥಮ ಸ್ಥಾನ ಪಡೆದು ದಾವಣಗೆರೆಯಲ್ಲಿ ನಡೆಯಲಿರುವ ರಾಜ್ಯಮಟ್ಟದ ಕರಾಟೆ ಸ್ಪರ್ಧೆಗೆ ಆಯ್ಕೆಯಾಗಿದ್ದು ಇವರ ಸಾಧನೆಗೆ ತರಬೇತುದಾರರು, ಶಾಲಾ ಶಿಕ್ಷಕ ವೃಂದ ಮತ್ತು ಪೋಷಕರು ಹರ್ಷ ವ್ಯಕ್ತಪಡಿಸಿದ್ದಾರೆ
