Thursday, March 5, 2026
Homeಕ್ರೈಮ್ಕೊಪ್ಪ ತಾಲೂಕಿನ ಭೂ ಮಾಪನ ಶಾಖೆಗೆ ಬೀಗ: ಬೇಜವಾಬ್ದಾರಿ ಅಧಿಕಾರಿಗಳನ್ನ ತರಾಟೆ ತೆಗೆದುಕೊಂಡ ನವೀನ್

ಕೊಪ್ಪ ತಾಲೂಕಿನ ಭೂ ಮಾಪನ ಶಾಖೆಗೆ ಬೀಗ: ಬೇಜವಾಬ್ದಾರಿ ಅಧಿಕಾರಿಗಳನ್ನ ತರಾಟೆ ತೆಗೆದುಕೊಂಡ ನವೀನ್

ಕೊಪ್ಪ: ತಾಲೂಕಿನ ಭೂ ಮಾಪನ ಶಾಖೆಗೆ ಬೀಗ ಜಡಿದಿದ್ದು ಕೊಠಡಿಯಲ್ಲಿ ಯಾವ ಅಧಿಕಾರಿಗಳು ಇಲ್ಲದೆ ರೈತರ ಬಡವರ ಗೋಳು ಕೇಳುವವರಿಲ್ಲ ಎಂದು ಅಲ್ಲಿನ ಸ್ಥಳೀಯರು ತೀವ್ರ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ.

ಹೌದು .. ಕೊಪ್ಪ ತಾಲೂಕಿನ ಭೂ ಮಾಪನ ಶಾಖೆಗೆ ಬೀಗ ಹಾಕಿದ್ದು ಈ ಬಗ್ಗೆ ಮಲೆನಾಡು ಕರಾವಳಿ ಜನಪರ ಒಕ್ಕೂಟದ ಸಂಚಾಲಕ ನವೀನ್ ಕರುವಾನೆ ಪ್ರತಿಕ್ರಿಯೆ ನೀಡಿದ್ದು ಇಲ್ಲಿನ ಅಧಿಕಾರಿಗಳು ಆಡಿದ್ದೇ ಆಟ ಆಗ್ತಿದ್ದು ಯಾವ ಕೆಲಸಗಳನ್ನು ಸರಿಯಾದ ರೀತಿಯಲ್ಲಿ ಮಾಡುತ್ತಿಲ್ಲ ಬೇಜವಾಬ್ದಾರಿತನ ತೋರುತ್ತಿದ್ದಾರೆಂದು ಗರಂ ಆಗಿದ್ದಾರೆ.

ಹಾಗೆ ಜಿಲ್ಲಾಧಿಕಾರಿಗಳು ಒಮ್ಮೆಯಾದರೂ ಕೊಪ್ಪ ತಾಲೂಕು ಆಫೀಸಿಗೆ ಭೇಟಿ ನೀಡಿ ಜನರ ಸಮಸ್ಯೆಗಳನ್ನು ಬಗೆಹರಿಸುವಂತೆ ಅವರನ್ನು ತರಾಟೆ ತೆಗೆದುಕೊಳ್ಳಿ ಎಂದು ಮನವಿ ಮಾಡಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!