ಕೊಪ್ಪ: ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಹರಿಹರಪುರ ಹೋಬಳಿಯ ಭಂಡಿಗಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರುವ ಹೆಗ್ಗೆರೆ ಕೆರೆಯಲ್ಲಿ ಸಾವಿರಾರು ಮೀನುಗಳು ಮರಣ ಹೊಂದಿವೆ.
ಈ ಕುರಿತು ಸ್ಥಳೀಯರು ಗಮನಿಸಿದಂತೆ, ಕೆರೆಯ ವಿವಿಧ ಭಾಗಗಳಲ್ಲಿ ಮೀನುಗಳು ತೇಲುತ್ತಿದ್ದು, ಇದರಿಂದ ಗ್ರಾಮಸ್ಥರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಪರಿಸರ ಮಾಲಿನ್ಯ ಅಥವಾ ನೀರಿನ ಗುಣಮಟ್ಟ ಹದಗೆಟ್ಟಿರುವ ಸಾಧ್ಯತೆ ಇದೆ ಎನ್ನಲಾಗಿದೆ.

ವಿಷಕಾರಿ ಪದಾರ್ಥಗಳನ್ನು ಕೆರೆಯಲ್ಲಿ ಬಿಡಲಾಗಿದೆ ಎಂಬ ಅನುಮಾನವನ್ನೂ ಗ್ರಾಮಸ್ಥರು ವ್ಯಕ್ತಪಡಿಸಿದ್ದಾರೆ. ಇದರಿಂದ ಜಾನುವಾರುಗಳು ಕೆರೆಯ ನೀರು ಕುಡಿಯದಂತೆ ಜಾಗರೂಕತೆ ವಹಿಸುವುದು ಹಾಗೂ ಇತರ ಬಳಕೆಗಳಿಗೆ ಬಳಸದಂತೆ ಎಚ್ಚರಿಸಲಾಗಿದೆ
