ಚಿಕ್ಕಮಗಳೂರು: ಮಲೆನಾಡಿನಲ್ಲಿ ವರುಣನ ಆರ್ಭಟ ಮುಂದುವರೆದಿದ್ದು ಅನಾಹುತಗಳ ಮೇಲೆ ಅನಾಹುತಗಳು ಸಂಭವಿಸುತ್ತಲೇ ಇದೆ . ಅದೇ ರೀತಿ ಕೊಪ್ಪ ತಾಲೂಕಿನ ಹರಿಹರಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ಮತ್ವಾನಿ ಗ್ರಾಮದಲ್ಲಿ ರಾತ್ರಿ ಮರ ಬಿದ್ದು ಎರಡು ಮನೆಗಳಿಗೆ ಅಪಾರ ಹಾನಿಯಾಗಿದ್ದು ಹಾಗೆ ಮನೆ ಎದುರು ನಿಲ್ಲಿಸಿದ್ದ ವಾಹನಕ್ಕೂ ಸಣ್ಣಪುಟ್ಟ ಹಾನಿಯಾಗಿರುತ್ತದೆ.

ಹೌದು .. ರಾತ್ರಿ ಸುರಿದ ಗಾಳಿ ಮಳೆಗೆ ಮರ ಬಿದ್ದಿದ್ದರಿಂದ ಅಫ್ರಿದ್ ಹಾಗೂ ರಫೀಕ್ ಎಂಬುವವರ ಮನೆಗಳಿಗೆ ಅಪಾರ ಹಾನಿಯಾಗಿದೆ.
ಮರ ಬಿದ್ದ ಪರಿಣಾಮ ಸುಮಾರು ಮೂರ್ನಾಲ್ಕು ಕರೆಂಟ್ ಕಂಬಗಳು ಕೂಡ ತುಂಡಾಗಿ ವಿದ್ಯುತ್ ಕೂಡ ಇಲ್ಲದಂತಾಗಿದೆ.
ಅದೃಷ್ಟವಶಾತ್ ಮನೆಯವರು ಅಪಾಯದಿಂದ ಪಾರಾಗಿದ್ದಾರೆ.
ವರದಿ: ಶಶಿ ಬೆತ್ತದಕೊಳಲು