Saturday, February 7, 2026
Homeಜಿಲ್ಲಾಸುದ್ದಿಕೊಪ್ಪ: ಮತಗಳ್ಳತನದ ವಿರುದ್ಧ ಯುವ ಕಾಂಗ್ರೆಸ್ ಅಧ್ಯಕ್ಷ ದುರ್ಗ ಚರಣ್ ಗುಡುಗು

ಕೊಪ್ಪ: ಮತಗಳ್ಳತನದ ವಿರುದ್ಧ ಯುವ ಕಾಂಗ್ರೆಸ್ ಅಧ್ಯಕ್ಷ ದುರ್ಗ ಚರಣ್ ಗುಡುಗು

ಕೊಪ್ಪ: ಮತಗಳ್ಳತನದ ವಿರುದ್ದ ರಾಹುಲ್ ಗಾಂಧಿ ದೇಶದಾದ್ಯಂತ ನಡೆಸುತ್ತಿರುವ ಹೋರಾಟಕ್ಕೆ ಬೆಂಬಲವಾಗಿ ನರಸೀಪುರ ಗ್ರಾಮ‌ ಪಂಚಾಯತ್ ವ್ಯಾಪ್ತಿಯಲ್ಲಿ ಸಹಿ ಸಂಗ್ರಹ ಅಭಿಯಾನ ನಡೆಸಲಾಯಿತು.. ‌

ಈ ವೇಳೆ ಮಾತನಾಡಿದ ಶೃಂಗೇರಿ ಕ್ಷೇತ್ರ ಯುವ ಕಾಂಗ್ರೆಸ್ ಅಧ್ಯಕ್ಷರಾದ ದುರ್ಗಚರಣ್ ಪ್ರಜಾಪ್ರಭತ್ವದ ಕಗ್ಗೊಲೆಗೆ ಆಡಳಿತ ಪಕ್ಷದ ಕುಮ್ಮಕ್ಕಿನೊಂದಿಗೆ ಚುನಾವಣಾ ಆಯೋಗವು ಜನರ ಮತಗಳನ್ನು ಪಟ್ಟಿಯಿಂದ ಉದ್ದೇಶ ಪೂರ್ವಕವಾಗಿ ಕೈಬಿಟ್ಟು ನಕಲಿ‌ ಮತದಾರರನ್ನು ಪಟ್ಟಿಗೆ ಸೇರಿಸಿ ಅಧಿಕಾರಕ್ಕೆ ಏರಿದ್ದು ರಾಹುಲ್‌ ಗಾಂಧಿಯವರ ನಿರಂತರ ಹೋರಾಟ ಮತ್ತು ಆಳವಾದ ಅಧ್ಯಯನ ಮುಖೇನ ಸಾಕ್ಷಿ ಸಮೇತ ದೇಶದ ಜನರ ಮುಂದೆ ಅನಾವರಣ ಮಾಡಿದ್ದು ಬಿಜೆಪಿಯ ಭ್ರಷ್ಟತೆ ಮತ್ತು ಹಾತಾಶೆ ಮನೋಭಾವನೆ ಬಟಾಬಯಲಾಗಿದೆ.

ರಾಹುಲ್ ಗಾಂಧಿಯವರು 10 ವರ್ಷಗಳ ಹಿಂದೆ ಹೇಳಿದ್ದ ಪ್ರತಿಯೊಂದು ಹೇಳಿಕೆಗಳು ಇಂದು ನಿಜವಾಗುತ್ತಿದ್ದು ಬಿಜೆಪಿಗರು ರಾಹುಲ್ ಗಾಂಧಿಯವರಿಗೆ ಹೆದರಿ ಅವರ ಮೇಲೆ ಇಲ್ಲ ಸಲ್ಲದ ಆರೋಪಗಳನ್ನು ಮತ್ತು ಸುಳ್ಳು ಸುದ್ದಿಗಳ ಅಪಪ್ರಚಾರ ಮಾಧ್ಯಮಗಳ ಮತ್ತು ಸಾಮಾಜಿಕ ಜಾಲತಾಣಗಳ‌ ಮೂಲಕ ಮಾಡುತ್ತಿದ್ದರೂ ದೇಶದ ಜನರಿಗೆ ಬಿಜೆಪಿಯ ಕುತಂತ್ರ ಅರಿವಾಗಿದ್ದು ಮುಂದಿನ ದಿನಗಳಲ್ಲಿ ಜನ ದಂಗೆ ಎದ್ದು ತಕ್ಕ ಪಾಠ ಕಲಿಸುವ ಸಮಯ ದೂರವಿಲ್ಲ ಎಂದರು.

ಈ ಸಹಿ ಸಂಗ್ರಹ ಅಭಿಯಾನದಲ್ಲಿ ಕೊಪ್ಪ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕುಕ್ಕುಡಿಗೆ ರವೀಂದ್ರ. ಪಂಚಾಯತ್ ಸಮಿತಿ ಅಧ್ಯಕ್ಷರಾದ ಉಂಟುವಳ್ಳಿ ಪ್ರಸನ್ನ, ಹಿರಿಯ ಮುಖಂಡರಾದ ಇಸ್ಮಾಯಿಲ್ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಓಣಿತೋಟ ರತ್ನಾಕರ್, ಪಕ್ಷದ ಬ್ಲಾಕ್ ಉಪಾಧ್ಯಕ್ಷರುಗಳಾದ ಅಕ್ರಮ ಸಕ್ರಮ ಸಮಿತಿ ಸದಸ್ಯೆ ಅನ್ನಪೂರ್ಣ ನರೇಶ್, ನಿಸಾರ್ ಅಹಮದ್, ಕೆಡಿಪಿ ಸದಸ್ಯರುಗಳಾದ ನಾರ್ವೆ ಅಶೋಕ್, ಚಿಂತನ್ ಬೆಳಗೊಳ ಸಾದಿಕ್ ಮುಖಂಡರಾದ ಕೆ.ಕೆ. ನಾಗೇಶ್, ಗ್ರಾಮ ಪಂಚಾಯತಿ ಸದಸ್ಯೆ ಆಶಾ ಸುರೇಶ್ ಚಂದ್ರಶೇಖರ್, ರಾಘವೇಂದ್ರ, ಬಲಗ ರಾಮಣ್ಣ, ನಾಗೇಶ ನರಸೀಪುರ, ಗಜೇಂದ್ರ ಬ್ರಹ್ಮನಕೋಡು, ಸುಧಾಕರ್ ದೇವರಕೊಡಿಗೆ, ಯುವಕಾಂಗ್ರೆಸ್ ನ ಅನಿಲ್ ಬೆಳಗೊಳ ನರ್ತನ್ ಕುಂಚೂರು ನವೀನ್ ಬೆಳಗೊಳ ಮತ್ತು ಕಾರ್ಯಕರ್ತರು, ಗ್ರಾಮಸ್ಥರು ಹಾಜರಿದ್ದರು.

ಶೃಂಗೇರಿ ಕ್ಷೇತ್ರ‌ ಮಟ್ಟದ ಕಾರ್ಯಕರ್ತರ ಸಮ್ಮಿಲನ ಸಭೆ “ಸತ್ಯಮೇವ ಜಯತೆ” ಕಾರ್ಯಕ್ರಮ ನಾಳೆ ಕೊಪ್ಪದ ಪುರಭವನದಲ್ಲಿ ಬೆಳಿಗ್ಗೆ 10:00 ಗಂಟೆಗೆ ಆಯೋಜಿಸಲಾಗಿದ್ದು ಶ್ರಂಗೇರಿ ಕ್ಷೇತ್ರದ ಎಲ್ಲಾ ಯುವ ಕಾಂಗ್ರೆಸ್ ಮಿತ್ರರು ಮತ್ತು ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿ ಕೋರಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!