Wednesday, March 25, 2026
Homeಜಿಲ್ಲಾಸುದ್ದಿಕೊಟ್ಟಿಗೆಹಾರ: ತೇಜಸ್ವಿ ಪ್ರತಿಷ್ಠಾನದಲ್ಲಿ ಏ.3ರಿಂದ ಛಾಯಾಗ್ರಹಣ ಕಾರ್ಯಾಗಾರ!

ಕೊಟ್ಟಿಗೆಹಾರ: ತೇಜಸ್ವಿ ಪ್ರತಿಷ್ಠಾನದಲ್ಲಿ ಏ.3ರಿಂದ ಛಾಯಾಗ್ರಹಣ ಕಾರ್ಯಾಗಾರ!

ಮೂಡಿಗೆರೆ : ಕೊಟ್ಟಿಗೆಹಾರದ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದಲ್ಲಿ ಏಪ್ರಿಲ್ 3 ರಿಂದ ಮೂರು ದಿನಗಳ ಕಾಲ ಛಾಯಾಗ್ರಹಣ ಕಾರ್ಯಾಗಾರ ನಡೆಯಲಿದೆ ಎಂದು ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದ ಸದಸ್ಯ ಕಾರ್ಯದರ್ಶಿಗಳಾದ ಡಾ.ಸಿ.ರಮೇಶ್ ತಿಳಿಸಿದ್ದಾರೆ.

ಈ ಬಗ್ಗೆ ಹೇಳಿಕೆ ನೀಡಿರುವ ಅವರು, ಏಪ್ರಿಲ್ 3 ರಂದು ಬೆಳಿಗ್ಗೆ11 ಗಂಟೆಗೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು ಸಂತೆ ಮತ್ತು ಗ್ರಾಮ್ಯ ಬದುಕಿನ ಛಾಯಾಗ್ರಹಣ ಪ್ರಾತ್ಯಕ್ಷಿಕೆ ನಡೆಯಲಿದೆ. ಏಪ್ರಿಲ್ 4 ರಂದು ಪ್ರಕೃತಿ ನಡಿಗೆ ನಡೆಯಲಿದ್ದು ನೈಸರ್ಗಿಕ ಬೆಳಕಿನ ಸಂಯೋಜನೆ, ಹೊರಾಂಗಣ ಛಾಯಾಗ್ರಹಣ ಕುರಿತು ಸಂಪನ್ಮೂಲ ವ್ಯಕ್ತಿಗಳು ತಿಳಿಸಿಕೊಡಲಿದ್ದಾರೆ.


ಏಪ್ರಿಲ್ 5 ರಂದು ಹೂವು, ಹಕ್ಕಿ ಮತ್ತು ಕೀಟಗಳ ವೀಕ್ಷಣೆ ಮತ್ತು ಮ್ಯಾಕ್ರೋ ಛಾಯಾಗ್ರಹಣದ ವಿವರಣಾತ್ಮಕ ಪ್ರಾತ್ಯಕ್ಷಿಕೆ ನಡೆಯಲಿದೆ. ಸಂಪನ್ಮೂಲ ವ್ಯಕ್ತಿಗಳಾಗಿ ಬೆಂಗಳೂರಿನ ಆನಂದ್‌ಕುಮಾರ್ ಮತ್ತು ಹೊಸಪೇಟೆಯ ಪಂಪಯ್ಯ ಮಳೇಮಠ ಭಾಗವಹಿಸಲಿದ್ದಾರೆ.

ಮೊದಲ 25 ನೊಂದಾಯಿತರಿಗೆ ಮಾತ್ರ ಕಾರ್ಯಾಗಾರದಲ್ಲಿ ಭಾಗವಹಿಸಲು ಅವಕಾಶವಿದ್ದು ನಿಗದಿತ ಶುಲ್ಕ ಪಾವತಿಸಿ ನೊಂದಣಿ ಮಾಡಿಕೊಳ್ಳಬಹುದು.

ಹೆಚ್ಚಿನ ಮಾಹಿತಿಗೆ:966309888/ 944930906 ಗೆ ಸಂರ್ಪಕಿಸಬಹುದಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!